ಬೆಂಗಳೂರು:ಜಲ ಜೀವನ್ ಮಿಷನ್​ನಡಿ ಜಲ ಮೂಲ ಲಭ್ಯವಿರುವ ಹಳ್ಳಿಗಳ ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ (ಹರ್ ಘರ್ ಜಲ್) ಯೋಜನೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ವಿಶ್ವಾಸ ವ್ಯಕ್ತಪಡಿಸಿದರು. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ ಮಿಷನ್ ಕುರಿತು ಪ್ರಾದೇಶಿಕ ಸಮ್ಮೇಳನದ ಮಧ್ಯೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸದ್ಯದ ಪ್ರಗತಿ ಪ್ರಕಾರ, ದೇಶದ 101 ಜಿಲ್ಲೆಗಳ 1,39,579 ಗ್ರಾಮಗಳ ಪ್ರತಿ ಮನೆ ನಲ್ಲಿ ನೀರಿನ ಸಂಪರ್ಕ ಪಡೆದಿವೆ. ಕರ್ನಾಟಕ ಕಳೆದ ವರ್ಷ ಹಿಂದೆ ಬಿದ್ದಿತ್ತು. ಕಾರ್ಯ ಕಾರಣ ಪತ್ತೆ ಹಚ್ಚಿ ವೇಗವಾಗಿ ಅನುಷ್ಠಾನಕ್ಕೆ ತರುತ್ತಿದ್ದು, 2022-23ನೇ ಸಾಲಿನ ಬಜೆಟ್​ನಲ್ಲಿ 7,000 ಕೋಟಿ ರೂ. ಕಾದಿಡುವ ಮೂಲಕ 2024ರ ಗಡುವಿನೊಳಗೆ ಪೂರ್ಣಗೊಳಿಸುವ ಬದ್ಧತೆಯನ್ನು ಪ್ರಕಟಿಸಿದೆ ಎಂದು ಶೆಖಾವತ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅನುದಾನ ಹಂಚಿಕೆ: ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಧ್ಯಪ್ರದೇಶ, ತಮಿಳುನಾಡು, ತೆಲಂ ಗಾಣ ರಾಜ್ಯಗಳು, ಪುದುಚೇರಿ ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳಿಗೆ ಜಲ ಜೀವನ್ ಮಿಷನ್​ನಡಿ 20,487.58 ಕೋಟಿ ರೂ., ಸ್ವಚ್ಛ ಭಾರತ್ ಮಿಷನ್​ನಡಿ 1,355.13 ಕೋಟಿ ರೂ. 15ನೇ ಹಣಕಾಸು ಆಯೋಗದ ಟೈಡ್ ಫಂಡ್​ನಡಿ 7,498 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ ಎಂಬ ಮಾಹಿತಿ ನೀಡಿದರು. ಅಲ್ಲದೆ, ಈ ಆರು ರಾಜ್ಯಗಳ 2.25 ಲಕ್ಷ ಶಾಲೆಗಳು ಮತ್ತು 2.31 ಲಕ್ಷ ಅಂಗನವಾಡಿ ಕೇಂದ್ರಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಗುರಿ ಇದೆ. ಈ ಪೈಕಿ ಶೇ.74 ಶಾಲೆಗಳು ಮತ್ತು ಶೇ.60 ಅಂಗನವಾಡಿ ಕೇಂದ್ರಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. 19 ರಾಜ್ಯಗಳ 117 ಮಹತ್ವಾಕಾಂಕ್ಷಿ ಜಿಲ್ಲೆಗಳ ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ತೆಲಂಗಾಣದ ಮೂರು ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಪೂರ್ಣಗೊಂಡಿದ್ದು, ಉಳಿದ ರಾಜ್ಯಗಳಲ್ಲಿ ಶೇ.19ರಿಂದ 52 ಸಾಧನೆಯಾಗಿದೆ ಎಂದು ಶೆಖಾವತ್ ವಿವರಿಸಿದರು.
44,575 ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತ:ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಂತ ಎರಡರಡಿ ಶೌಚಗೃಹ ನಿರ್ವಣ, ಘನ ಮತ್ತು ದ್ರವರೂಪದ ತ್ಯಾಜ್ಯ ನಿರ್ವಹಣೆಗೆ 1,40,881 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಎರಡನೇ ಹಂತದಲ್ಲಿ ಈವರೆಗೆ 44,575 ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಿಕೊಂಡಿವೆ. ಒಟ್ಟು 66 ಮನೆಗಳು, 1.2 ಲಕ್ಷ ಸಮುದಾಯ ಶೌಚಗೃಹಗಳನ್ನು ನಿರ್ವಿುಸಲಾಗಿದೆ. ಚಾಲ್ತಿ ಆರ್ಥಿಕ ವರ್ಷದಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 5.61 ಲಕ್ಷ ವೈಯಕ್ತಿಕ ಶೌಚಗೃಹ, 11,000 ಸಮುದಾಯ ಶೌಚ ಸಮುಚ್ಛಯ ನಿರ್ವಿುಸಿದ್ದು, 31,000 ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಅಲ್ಲದೆ, 35,739 ಗ್ರಾಮಗಳಲ್ಲಿ ಘನತ್ಯಾಜ್ಯ, 9,386 ಗ್ರಾಮಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆಗಳಾಗಿವೆ ಎಂದು ಗಜೇಂದ್ರ ಸಿಂಗ್ ಶೆಖಾವತ್ ತಿಳಿಸಿದರು.

ಶುದ್ಧ ನೀರು ಪೂರೈಕೆಗೆ ಸೂಚನೆ:ಕರ್ನಾಟಕದ ಈಶಾನ್ಯ ಭಾಗದ ಕೆಲ ಜಿಲ್ಲೆಗಳಲ್ಲಿ ಯೂರೇನಿಯಂ ಖನಿಜ ಮಿಶ್ರಿತ ನೀರು ಪೂರೈಸಿದ ಮಾಹಿತಿ ಗಮನಕ್ಕಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಶುದ್ಧೀಕರಿಸಿ ಪೂರೈಸಲು ಸೂಚಿಸಿದ್ದು, ಈ ವೆಚ್ಚ ಭರಿಸುವ ಜತೆಗೆ ಬೇಕಾದ ತಾಂತ್ರಿಕ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಗಜೇಂದ್ರಸಿಂಗ್ ಶೆಖಾವತ್ ತಿಳಿಸಿದರು. ಫ್ಲೊರೈಡ್ ಮಿಶ್ರಿತ ನೀರಿನ ಸಮಸ್ಯೆ ಎದುರಿಸುತ್ತಿರುವ ಮಧ್ಯಪ್ರದೇಶದ 52 ಮತ್ತು ಆಂಧ್ರದ 86 ಗ್ರಾಮಗಳಿಗೂ ಇದೇ ಪರಿಹಾರ ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರು:ಜಲ ವಿವಾದಗಳನ್ನು ಇತ್ಯರ್ಥಪಡಿಸುವ ಬದಲಿಗೆ ವಿವಾದಕ್ಕೆ ಎಡೆ ಮಾಡಿಕೊಡುವ ಅಂತಾರಾಜ್ಯ ಜಲ ವಿವಾದ ಕಾಯ್ದೆ ಮತ್ತೊಮ್ಮೆ ಅವಲೋಕಿಸಿ, ಆಮೂಲಾಗ್ರವಾಗಿ ಪರಿಷ್ಕರಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನಸೌದ ಸಮ್ಮೇಳನ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ), ಸ್ವಚ್ಛ ಭಾರತ್ ಮಿಷನ್ (ಎಸ್​ಬಿಎಂ) ಕುರಿತು ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಪ್ರಾದೇಶಿಕ ಸಮಾವೇಶ ಶನಿವಾರ ನಡೆಯಿತು. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಸಮಕ್ಷಮ ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ಸಿಎಂ ಮಾತನಾಡಿ, ಸಂಕುಚಿತ ರಾಜಕೀಯದಿಂದ ಜಲವಿವಾದ ಗಳು ಮುಕ್ತವಾಗಬೇಕಿದ್ದು, ಕಾಯ್ದೆಗೆ ಸಂಪೂರ್ಣವಾಗಿ ತಿದ್ದುಪಡಿ ತಂದು ಹೆಚ್ಚು ಜನರಿಗೆ ನೀರು ತಲುಪಿಸುವ ಅಗತ್ಯವಿದೆ. ನದಿ ಪಾತ್ರಗಳ ದಕ್ಷ ನಿರ್ವಹಣೆಯಿಂದ ಸಮಸ್ಯೆ ನಿವಾರಿಸಲು ಸಾಧ್ಯ ಎಂದರು.
ದುರ್ಬಳಕೆಗೆ ಕಡಿವಾಣ:ನೀರಾವರಿ ಪ್ರದೇಶದಲ್ಲಿ ಹೆಚ್ಚು ಪ್ರಮಾಣದ ನೀರು ದುರ್ಬ ಳಕೆಯಾಗುತ್ತಿದೆ. ಸೃಜಿಸಿದ ಕಾಲುವೆ ಜಾಲಗಳು ಶೇ.45 ನೀರು ಪೂರೈಕೆಗೆ ಶಕ್ತವಾಗಿವೆ. ಉನ್ನತ ಗುಣಮಟ್ಟ, ದಕ್ಷತೆಯಿಂದ ದುರ್ಬಳಕೆಗೆ ಕಡಿವಾಣ, ಕಾಲುವೆಗಳ ಪೂರ್ಣ ಸಾಮರ್ಥ್ಯ ವಿನಿಯೋಗದ ಜತೆಗೆ ನೀರಾವರಿ ಜಮೀನು ಕ್ಷಾರಯುಕ್ತವಾಗುವುದು ತಪ್ಪಲಿದೆ ಎಂದ ಸಿಎಂ, ಸದಾಕಾಲ ನೀರು ಹರಿಯುವ ನದಿಗಳು ಋತುಕಾಲಿಕವಾಗಿವೆ. ನದಿಪಾತ್ರ ಮಧ್ಯದಲ್ಲೇ ಒಣಗಿ ಸಮುದ್ರವೇ ಸೇರುತ್ತಿಲ್ಲ. ಇದೂ ಸೇರಿ ಪರಿಸರ ಸಂಬಂಧಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಸರಳ ಸತ್ಯದ ಅರಿವಿಲ್ಲ:ನೀರಿನ ಝುರಿಗಳನ್ನು ಜೀವಂತವಾಗಿಡುವ ಜಲಾನಯನ ಯೋಜನೆಗಳು ಸೂಕ್ತವಾಗಿಲ್ಲದೆ, ನೀರಿನ ಹರಿವಿಗೆ ತಡೆಯೊಡ್ತುತ್ತಿವೆ. ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎನ್ನುತ್ತ ವಿಜ್ಞಾನವನ್ನು ಮರೆಯುತ್ತಿದ್ದೇವೆ. ಕನಿಷ್ಠ ಶೇ.30 ಸಿಹಿ ನೀರು ಸಮುದ್ರ ಸೇರಿದರೆ ಮಾತ್ರ ಶೇ.60 ಉಪು್ಪ ನೀರು ಆವಿಯಾಗಿ ಮಳೆಯಾಗುತ್ತದೆ ಎಂಬ ಸರಳ ಸತ್ಯದ ಅರಿವು ಯೋಜನೆ ರೂಪಿಸುವವರಿಗೆ ಇರಬೇಕು ಎಂಬ ಸಿಎಂ ಬೊಮ್ಮಾಯಿ ಸಲಹೆಯಿತ್ತರು.
52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ಸಂದೇಶವಿದು..

ಒಂದು ಭೀಕರ ಸ್ಫೋಟ, ವಾರ ಕಳೆಯುವಷ್ಟರಲ್ಲಿ 14 ಸಾವು; ಸೀಮಂತದ ಬೆನ್ನಿಗೇ ಭಾರಿ ಸೂತಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
