ಬೆಂಗಳೂರು:ಹಾಡಹಗಲೇ ಚಿನ್ನಾಭರಣ ಮಳಿಗೆಗೆ ನುಗ್ಗಿ, ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಮೂವರು ದರೋಡೆಕೋರರನ್ನು ಜಾಲಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ರಾಜಸ್ಥಾನ ಮೂಲದ ಗೋಪಾರಾಮ್ ಗೋಪಾಲ್ (28), ಜಿತೇಂದರ್ ಮಾಳಿ ಜೀತು (31) ಮತ್ತು ವೀರ್‌ಮಾ ರಾಮ್ ಮಾಂಗಿಲಾಲ್ ವೀರ್ (32) ಬಂಧಿತರು. ಆರೋಪಿಗಳಿಂದ 90 ಲಕ್ಷ ರೂ. ಮೌಲ್ಯದ 1.7 ಕೆ.ಜಿ. ಚಿನ್ನಾಭರಣ, 3.5 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಜಾಲಹಳ್ಳಿಯಲ್ಲಿ ಸೆ.20ರಂದು ಬೆಳಗ್ಗೆ 9 ಗಂಟೆಗೆ ಗ್ರಾಹಕರ ಸೋಗಿನಲ್ಲಿ ಹೋಗಿ ಕೃತ್ಯ ಎಸಗಿದ್ದರು ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.
ಆರೋಪಿಗಳು ಜಾಲಹಳ್ಳಿಯ ಬಾಹುಬಲಿ ನಗರದಲ್ಲಿ ವಿನೋದ್ ಎಂಬುವರ ಬ್ಯಾಂಕರ್ಸ್ ಮತ್ತು ಜ್ಯೂವೆಲರ್ಸ್‌ ಎಂಬ ಚಿನ್ನಾಭರಣ ಮಳಿಗೆ ಹೋಗಿದ್ದರು. ಈ ವೇಳೆ ಅಂಗಡಿಯಲ್ಲಿ ರಾಹುಲ್ ಎಂಬಾತ ಕೆಲಸ ಮಾಡುತ್ತಿದ್ದ. ಆ.20ರಂದು ಅಂಗಡಿಗೆ ಇಬ್ಬರು ಅಪರಿಚಿತರು ಅಂಗಡಿಗೆ ಬಂದು ಎರಡು ಚಿನ್ನದ ಸರ ಮಾಡಿಕೊಡುವಂತೆ ಆರ್ಡರ್ ಕೊಟ್ಟು, 1 ಸಾವಿರ ರೂ. ಮುಂಗಡ ನೀಡಿ ಹೋಗಿದ್ದರು. ಭಾನುವಾರ (ಸೆ.20) ಬೆಳಗ್ಗೆ 10 ಗಂಟೆಯಲ್ಲಿ ಅಂಗಡಿಗೆ ಬಂದ ಅಪರಿಚಿತರು ಅರ್ಡರ್ ಕೊಟ್ಟಿದ್ದ ‘ಚಿನ್ನದಸರ’ ನೀಡುವಂತೆ ರಾಹುಲ್‌ಗೆ ಬಿಲ್ ನೀಡಿದ್ದರು. ರಾಹುಲ್ ಚಿನ್ನದ ಸರವನ್ನು ತಂದು ಆರೋಪಿಗಳಿಗೆ ತೋರಿಸಿದ್ದ. ಈ ವೇಳೆ ಆರೋಪಿಗಳು ನಮಗೆ ಒಂದು ಉಂಗುರ ಬೇಕು, ಉಂಗುರ ತೋರಿಸುವಂತೆ ಕೇಳಿದ್ದರು.
ರಾಹುಲ್ ಉಂಗುರವನ್ನು ತರಲು ಸೇಫ್ ಲಾಕರ್ ಕೊಠಡಿಗೆ ಹೋಗುತ್ತಿದ್ದಂತೆ ದುಷ್ಕರ್ಮಿಗಳಿಬ್ಬರು ಆತನ ಹಿಂದೆಯೇ ಸೇಫ್ ಲಾಕರ್ ಕೊಠಡಿಯೊಳಗೆ ನುಗ್ಗಿದ್ದರು. ರಾಹುಲ್ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಬಳಿ ಚಾಕು ಇಟ್ಟು, ಕೂಗಿದರೆ ಹತ್ಯೆ ಮಾಡುವುದಾಗಿ ಬೆದರಿಕೆವೊಡ್ಡಿದ್ದ. ಇನ್ನೊಬ್ಬ ಪಿಸ್ತೂಲ್ ತೋರಿಸಿ, ಕೈಕಾಲು ಕಟ್ಟಿ, ಬಾಯಿಗೆ ಟೇಪ್‌ಸುತ್ತಿದ್ದ. ನಂತರ ಲಾಕರ್‌ನಲ್ಲಿದ್ದ 1.49 ಕೋಟಿ ರೂ. ಮೌಲ್ಯದ 3 ಕೆ.ಜಿ. 455 ಗ್ರಾಂ ಚಿನ್ನಾಭರಣ, 715 ಗ್ರಾಂ ಬೆಳ್ಳಿ ವಸ್ತು ಹಾಗೂ 3.96 ಲಕ್ಷ ರೂ. ನಗದು ದೋಚಿ ಬ್ಯಾಗ್‌ನಲ್ಲಿ ತುಂಬಿಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು. ತೀವ್ರ ಕಾರ್ಯಾಚರಣೆ ನಡೆಸಿ ಸಿಸಿ ಕ್ಯಾಮರಾಗಳ ಸುಳಿವು ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + 5 =
Remember me
