ಬೆಂಗಳೂರು:ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಯಿಂದ ಆಶ್ರಯ ಕೋರಿ ಬೆಂಗಳೂರಿಗೆ ಬಂದು ಸೆಂಟ್ ತೆರೇಸಾ ಶಿಕ್ಷಣ ಸಂಸ್ಥೆ ಯಲ್ಲಿ ಉಳಿದುಕೊಂಡಿರುವ 29 ವಿದ್ಯಾರ್ಥಿಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ದತ್ತು ಪಡೆದಿದ್ದಾರೆ.
ಚಾಮರಾಜ ಪೇಟೆಯ ಸೆಂಟ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಮಣಿಪುರ ಸಂತ್ರಸ್ತರ ಜತೆ ಹುಟ್ಟು ಹಬ್ಬ ಆಚರಿಸಿಕೊಂಡ ಬಳಿಕ ಮಾತನಾಡಿದ ಜಮೀರ್ ಅಹಮದ್ ಖಾನ್, ಮಣಿಪುರ ಸಂತ್ರಸ್ಥ ವಿದ್ಯಾರ್ಥಿಗಳು ಎಲ್ಲಿಯವರೆಗೆ ಇಲ್ಲಿರುತ್ತಾರೋ ಅಲ್ಲಿವರೆಗೆ ಸಂಪೂರ್ಣ ಶಿಕ್ಷಣ ಮತ್ತು ದೈನಂದಿನ ಊಟ ತಿಂಡಿ ಆರೈಕೆ ವ್ಯವಸ್ಥೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇಲ್ಲಿ ಸುರಕ್ಷಿತ ವಾಗಿರಿ ನಿಮಗೆ ಏನೇ ಬೇಕಾದರೂ ನಾನೇ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ಮಣಿಪುರ ವಿದ್ಯಾರ್ಥಿಗಳ ಜತೆಯೇ ಉಪಹಾರ ಸೇವಿಸಿ ಸಂಸ್ಥೆ ಯಲ್ಲಿ ವ್ಯಾಸಂಗ ಮಾಡುತ್ತಿರುವ 250 ಮಕ್ಕಳಿಗೂ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ರಾತ್ರಿ ಊಟದ ವ್ಯವಸ್ಥೆ ಮಾಡಿದರು.
ಒಟ್ಟು ಮಣಿಪುರದಿಂದ 200 ವಿದ್ಯಾರ್ಥಿಗಳು ಆಶ್ರಯ ಪಡೆಯಲು ಬಂದಿದ್ದು 29 ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದು ಉಳಿದವರಿಗೆ ಇದೇ ಸಂಸ್ಥೆಯ ಬೇರೆ ಕಡೆ ಆಶ್ರಯ ನೀಡಲಾಗಿದೆ. ಈ ವಿದ್ಯಾರ್ಥಿಗಳು ಏಳು ವರ್ಷ ಇಲ್ಲೇ ವಿದ್ಯಾಭ್ಯಾಸ ಪಡೆಯಲಿದ್ದಾರೆ.
ಇದೇ ವೇಳೆ ಸಚಿವರು ವಿದ್ಯಾರ್ಥಿಗಳಿಗೆ ಬಟ್ಟೆ ಹಾಗೂ ಫುಡ್ ಕಿಟ್‌ಹಾಗೂ ಇತರೆ ಅಗತ್ಯ ವಸ್ತು ಗಳನ್ನು ವಿತರಿಸಿದರು. ಸೆಂಟ್ ತೆರೇಸಾ ವಿದ್ಯಾ ಸಂಸ್ಥೆಯ ಶಿಕ್ಷಕ ವರ್ಗ ಉಪಸ್ಥಿತರಿದ್ದರು.
ಜಮೀರ್ ಗೆಲುವಿಗೆ ಮಾರುತಿ ಪಾದಯಾತ್ರೆ!:ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಜಮೀರ್ ಅಹಮದ್ ಖಾನ್ ಸಚಿವರಾದರೆ ಕಲಬುರಗಿ ಯಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸುವುದಾಗಿ ಹರಕೆ ಹೊತ್ತಿದ್ದ ಮಾರುತಿ ಎಂಬ ಯುವಕ ಜುಲೈ 10 ರಂದು ಕಲಬುರಗಿ ಬಿಟ್ಟು 31 ಕ್ಕೆ ಬೆಂಗಳೂರು ತಲುಪಿದರು. ಮಂಗಳವಾರ ಜಮೀರ್ ಅಹಮದ್ ಖಾನ್ ಅವರನ್ನು ಸನ್ಮಾನಿಸಲು ಬಂದ ಮಾರುತಿಯ ಪ್ರೀತಿಗೆ ಶರಣಾದ ಜಮೀರ್ ಅಹಮದ್ ಖಾನ್ ಅವರು ಖುದ್ದು ಮಾರುತಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 9 =
Remember me
