ಹುಬ್ಬಳ್ಳಿ:ಶಾಸಕ ಜಮೀರ್ ಅಹಮ್ಮದ್ ತಮ್ಮ ಕ್ಷೇತ್ರದಲ್ಲಿ ಜನರು ಕಷ್ಟ ಹೇಳಿಕೊಂಡು ಬಂದಾಗ ಯೋಚಿಸದೆ ಹಣ ಸಹಾಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಜಮೀರ್ ಅಹಮ್ಮದ್ ರೀಲ್ಸ್ ಮಾಡುತ್ತಾ, ಜನಪ್ರಿಯವಾದ ಬಾಲಕೊಬ್ಬನಿಗೆ ಗರಿಗರಿಯಾದ ಹಣ ನೀಡಿ ಪ್ರೋತ್ಸಾಹಿಸಿದ್ದಾರೆ.
ಜಮೀರ್ ಅಹಮ್ಮದ್ ಹುಬ್ಬಳ್ಳಿ ಪ್ರವಾಸದಲ್ಲಿದ್ದಾರೆ. ಈ ವೇಳೆ ಖಾಸಗಿ ಹೋಟೆಲ್​ಗೆ ಜಮೀರ್ ಆಗಮಿಸುತ್ತಿದ್ದಂತೆ ಬಾಲಕ ಲಕ್ಷ್ಯ ಹೂಗುಚ್ಛ ನೀಡಿ ಸ್ವಾಗತಿಸಿದ್ದಾನೆ. ಬಾಲಕನನ್ನು ನೋಡುತ್ತಿದ್ದಂತೆ ಖುಷಿಯಾದ ಜಮೀರ್, ಪ್ರೋತ್ಸಾಹಕವಾಗಿ ಜೇಬಿನಲ್ಲಿದ್ದ ಅಷ್ಟೂ ನೋಟುಗಳನ್ನು ನೀಡಿದ್ದಾರೆ.
ಬಾಲಕ ಲಕ್ಷ್ಯ ರೀಲ್ಸ್ ಮಾಡುತ್ತಾ ತನ್ನ ಪ್ರತಿಭೆ ತೋರಿಸಿದ್ದಾನೆ. ಜಮೀರ್​ ಅಹಮ್ಮದ್ ಬಾಲಕನನ್ನು ಕಾಣುತ್ತಿದ್ದಂತೆ ಖುಷಿಯಾಗಿ ಮುದ್ದಾಡಿದ್ದಾರೆ. ಅಷ್ಟೇ ಅಲ್ಲಾ, ಜಮೀರ್​​ ನೀಡಿದ ಪ್ರೋತ್ಸಾಹಕ್ಕೆ ಬಾಲಕನ ಮುಖದಲ್ಲಿ ನಗು ಮೂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
