‘ಎದೆ ಕೊಟ್ಟು ಕಾಪಾಡೋಕೂ ಗೊತ್ತಿರಬೇಕು, ಎದುರಾಳಿ ಎದೆಗೆ ಬುಲೆಟ್ ನುಗ್ಗಿಸೋಕೂ ಗೊತ್ತಿರಬೇಕು …’ ಇಂಥ ಶಕ್ತಿ ಇರುವ ವ್ಯಕ್ತಿಯನ್ನು ಹುಡುಕುತ್ತಿರುತ್ತಾನೆ ಗಾಯಕ್ವಾಡ್. ಏಕೆಂದರೆ, ಶತ್ರುಪಡೆ ಅವನ ಬೆನ್ನಹಿಂದೆ ಬಿದ್ದಿರುತ್ತದೆ. ಶತ್ರುಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಒಬ್ಬ ಗನ್​ನಂತಹ ವ್ಯಕ್ತಿ ಅವನಿಗೆ ಬೇಕು. ಆಗ ಸಿಗುವವನೇ ಜೆ ವಿಂಗ್ಸ್ ಸೆಕ್ಯುರಿಟಿ ಏಜೆನ್ಸಿಯ ಸಂತೋಷ್ (ಪುನೀತ್). ಗಾಯಕ್ವಾಡ್​ಗೆ ಸೆಕ್ಯುರಿಟಿ ಒದಗಿಸೋಕೆ ಅವನು ಒಪು್ಪತ್ತಾನೆ. ಎದೆ ಕೊಟ್ಟು ಕಾಪಾಡುವುದರ ಜತೆಗೆ ಎದುರಾಳಿ ಎದೆಗೆ ಬುಲೆಟ್​ಗಳನ್ನೂ ನುಗ್ಗಿಸುತ್ತಾನೆ. ಅವನ ಕೆಲಸ ನೋಡಿ ಗಾಯಕ್ವಾಡ್ ಖುಷಿಯಾಗುತ್ತಾನೆ. ಅವನ ತಂಗಿ ಸಂತೋಷ್​ಗೆ ಮನ ಸೋಲುತ್ತಾಳೆ. ಇನ್ನೇನು ತನ್ನ ತಂಗಿಯನ್ನು ಸಂತೋಷ್​ಗೆ ಕೊಟ್ಟು ಮದುವೆ ಮಾಡಬೇಕು ಎನ್ನುವಷ್ಟರಲ್ಲಿ, ಸಂತೋಷ್ ಉಲ್ಟಾ ಹೊಡೆಯುತ್ತಾನೆ. ತಾನೇ ಎದೆ ಕೊಟ್ಟು ಕಾಪಾಡಿದವರ ಎದೆಗೆ ಬುಲೆಟ್ ನುಗ್ಗಿಸೋಕೆ ಮುಂದಾಗುತ್ತಾನೆ. ಯಾಕೆ?
‘ಜೇಮ್ಸ್’, ಪುನೀತ್ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ನಟಿಸಿದ ಕೊನೆಯ ಚಿತ್ರ. ಒಬ್ಬ ಆಕ್ಷನ್ ಹೀರೋಗೆ ಹೇಳಿ ಮಾಡಿಸಿದಂತಹ ಚಿತ್ರ. ಒಬ್ಬ ಮಾಸ್ ಹೀರೋನ ಅಭಿಮಾನಿಗಳನ್ನು ಖುಷಿಪಡಿಸುವಂತಹ ಚಿತ್ರ. ಇಂಥದ್ದೊಂದು ಚಿತ್ರಕ್ಕೆ ಏನೇನು ಸರಕು ಬೇಕು ಎಂದು ನಿರ್ದೇಶಕ ಚೇತನ್ ಕುಮಾರ್​ಗೆ ಚೆನ್ನಾಗಿ ಗೊತ್ತಿದೆ. ಈ ಹಿಂದೆ ಅವರು ಮೂರು ಪಕ್ಕಾ ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸಿದವರು. ಈ ಬಾರಿ ಅವರು ಕಮರ್ಷಿಯಲ್ ಅಂಶಗಳನ್ನು ಸ್ವಲ್ಪ ಜಾಸ್ತಿಯೇ ಮಿಶ್ರಣ ಮಾಡಿ ಚಿತ್ರ ಮಾಡಿದ್ದಾರೆ. ಇಲ್ಲಿ ಆಕ್ಷನ್ ಇದೆ. ಸೆಂಟಿಮೆಂಟ್ ಇದೆ. ದೇಶಪ್ರೇಮ, ಸ್ನೇಹ, ಮಾಫಿಯಾ ವಿರುದ್ಧ ಹೋರಾಟ ಎಲ್ಲವೂ ಇದೆ. ಇನ್ನು, ಕೊನೆಯ ದೃಶ್ಯ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವಂತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರದಲ್ಲಿ ಅದ್ದೂರಿತನ ಇದೆ. ಅಂತಾರಾಷ್ಟ್ರೀಯ ಮಾಫಿಯಾದ ಕಥೆಯಾದ್ದರಿಂದ, ಕಥೆಗೆ ತಕ್ಕಂತೆ ಪ್ರತಿ ಫ್ರೇಮ್ಲ್ಲೂ ರಿಚ್​ನೆಸ್ ಕಾಣಿಸುತ್ತದೆ. ಹಾಗೆ ನೋಡಿದರೆ, ಚಿತ್ರದಲ್ಲಿ ಎಲ್ಲವೂ ಅಳತೆಗಿಂತ ಸ್ವಲ್ಪ ಜಾಸ್ತಿಯೇ ಇದೆ, ಮಾತೊಂದನ್ನು ಬಿಟ್ಟು. ಇಲ್ಲಿ ಮಾತು ಕಡಿಮೆ, ಆಕ್ಷನ್ ಜಾಸ್ತಿ. ಅದರಲ್ಲೂ ಬೇರೆ ಪಾತ್ರಗಳಿಗೆ ಹೋಲಿಸಿದರೆ ನಾಯಕನಿಗೆ ಮಾತು ಕಡಿಮೆಯೇ. ಆ ಪಾತ್ರವೇ ಹಾಗಿದೆ. ಮಾತು ಕಡಿಮೆ, ಕೆಲಸ ಜಾಸ್ತಿ ಎನ್ನುವಂತಹ ಪಾತ್ರ ಅದು. ಮಾತನ್ನು ಪುನೀತ್​ಗೆ ಹೋಲುವಂತೆ ಶಿವರಾಜಕುಮಾರ್ ಆಡಿದರೆ, ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಪುನೀತ್. ಈ ತರಹದ್ದೊಂದು ಪಾತ್ರ ಅವರು ಇಷ್ಟು ಚಿತ್ರಗಳಲ್ಲಿ ಮಾಡಿರಲಿಲ್ಲ. ಈ ಚಿತ್ರದಲ್ಲಿ ಅಂಥದ್ದೊಂದು ಅವಕಾಶವನ್ನು ಅವರು ಚೆನ್ನಾಗಿ ಬಳಸಿಕೊಂಡಿದ್ದಾರೆ. ಹೊಡೆದಾಟದ ದೃಶ್ಯಗಳಲ್ಲಂತೂ ಪುನೀತ್ ಚುರುಕುತನವನ್ನು ನೋಡಿಯೇ ಖುಷಿಪಡಬೇಕು. ಮಿಕ್ಕಂತೆ ಚಿತ್ರದಲ್ಲಿ ಹಲವು ಪಾತ್ರಗಳಿದ್ದರೂ, ಕೊನೆಗೆ ನೆನಪಿನಲ್ಲಿ ಉಳಿಯುವುದು ಪುನೀತ್ ಮಾತ್ರ. ಚಿತ್ರ ಚೆನ್ನಾಗಿ ರೂಪುಗೊಳ್ಳುವುದಕ್ಕೆ ತಂತ್ರಜ್ಞರ ಪಾಲು ದೊಡ್ಡದಿದೆ. ಛಾಯಾಗ್ರಾಹಕ ಸ್ವಾಮಿ ಗೌಡ, ಸಂಕಲನಕಾರ ದೀಪು ಎಸ್. ಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್, ಸಾಹಸ ನಿರ್ದೇಶಕರು ಎಲ್ಲರೂ ತಮ್ಮ ಕೆಲಸ ಚೆನ್ನಾಗಿ ಮಾಡಿದ್ದಾರೆ. ಪುನೀತ್ ಅನುಪಸ್ಥಿತಿಯ ನಡುವೆಯೂ ಒಂದು ಫೈಟ್ ಮತ್ತು ಹಲವು ದೃಶ್ಯಗಳನ್ನು ಸಮರ್ಥವಾಗಿ ಸೆರೆಹಿಡಿದಿರುವುದು ನಿರ್ದೇಶಕ ಚೇತನ್ ಜಾಣ್ಮೆಗೆ ಸಾಕ್ಷಿ.
ಇದು ಕರ್ನಾಟಕದ ಕಲೆಕ್ಷನ್ ಮಾತ್ರ: ಮೊದಲ ದಿನ -25 ಕೋಟಿ!
ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಜೇಮ್ಸ್’, ಗುರುವಾರ ಬಿಡುಗಡೆಯಾಗಿದೆ. ಈಗಾಗಲೇ ಹಲವು ದಾಖಲೆಗಳನ್ನು ನಿರ್ವಿುಸಿರುವ ಈ ಚಿತ್ರವು ಕಲೆಕ್ಷನ್ ವಿಷಯದಲ್ಲಿ ಹೊಸ ದಾಖಲೆಯನ್ನು ನಿರ್ವಿುಸಿದೆ. ಚಿತ್ರವು ರಿಲೀಸ್ ಆದ ಮೊದಲ ದಿನ 25 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಇದು ಹೊಸ ದಾಖಲೆಯಾಗಿದೆ. ‘ಜೇಮ್ಸ್’ ಚಿತ್ರವು ಜಗತ್ತಿನಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಈ ಪೈಕಿ ಕರ್ನಾಟಕದಲ್ಲೇ 500 ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.
ಕೆಲವು ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯಿಂದಲೇ ಚಿತ್ರಪ್ರದರ್ಶನ ಪ್ರಾರಂಭವಾಗಿದ್ದು, ಒಟ್ಟಾರೆ ಆರೇಳು ಪ್ರದರ್ಶನಗಳಾಗಿವೆ. ‘ಒಟ್ಟಾರೆ, ಚಿತ್ರದ ಕಲೆಕ್ಷನ್ 22ರಿಂದ 25 ಕೋಟಿ ರೂ.ಗಳವರೆಗೂ ಆಗುತ್ತದೆ’ ಎನ್ನುತ್ತಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್. ಇದು ಬರೀ ಕರ್ನಾಟಕದ ಸುದ್ದಿ ಮಾತ್ರ. ಮಿಕ್ಕಂತೆ ಚಿತ್ರವು ಬೇರೆ ರಾಜ್ಯಗಳು ಮತ್ತು ಹೊರದೇಶಗಳಲ್ಲೂ ಬಿಡುಗಡೆಯಾಗಿದೆ. ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿದೆ. ಮಿಕ್ಕೆಲ್ಲ ಭಾಷೆಗಳಿಂದ 10 ಕೋಟಿ ರೂ.ಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೂ, ಒಟ್ಟಾರೆ ಮೊದಲ ದಿನ 35 ಕೋಟಿ ರೂ. ಕಲೆಕ್ಷನ್ ಆಗುತ್ತದೆ. ಕನ್ನಡ ಚಿತ್ರವೊಂದು ಮೊದಲ ದಿನ ಇಂಥ ದೊಡ್ಡ ಮಟ್ಟದ ಕಲೆಕ್ಷನ್ ನೋಡುತ್ತಿರುವುದು ಇದೇ ಮೊದಲು.
ಪೊಲೀಸರ ರಕ್ಷಣೆ ಕೋರಿದ ನವಜೋಡಿ; ಸಿನಿಮಾ ಕಥೆ ಮೀರಿಸುವಂತಿದೆ ಇವರ ಲವ್ ಕಹಾನಿ!

ಅಧಿಕಾರಿಗಳು ಲಂಚ ಕೇಳಿದ್ರೆ ಕೊಡಿ, ನಂತರ ಈ ಕೆಲಸ ಮಾಡಿ ಎಂದ ದೆಹಲಿ ಸಿಎಂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 9 =
Remember me
