ಬೆಂಗಳೂರು: ನರೇಗಾ ಯೋಜನೆಯಡಿ 10 ಸಾವಿರ ಕೋಟಿ ರೂ. ಇದ್ದು, ಅದನ್ನು ಬಳಸಿ ಅಸಂಘಟಿತ ವಲಯದ ಪ್ರತಿ ಕಾರ್ವಿುಕರಿಗೆ ಕನಿಷ್ಠ 10 ಸಾವಿರ ರೂ. ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಲಾಕ್​ಡೌನ್ ಬಳಿಕ ಪ್ರಧಾನಿ ಮೋದಿ ಹಲವು ಬಾರಿ ಮಾತನಾಡಿದ್ದನ್ನು ಗಮನಿಸಿದ್ದೇನೆ. ಆದರೆ, ಅಸಂಘಟಿತ ವಲಯದ ಬಗ್ಗೆ ತುಟಿಪಿಟಿಕ್ ಎಂದಿಲ್ಲ. ಸವಿತಾ ಸಮಾಜದವರು, ಹಮಾಲಿಗಳು, ರ್ದಜಿಗಳು, ಬಡಗಿ, ಕಮ್ಮಾರ, ಕುಂಬಾರ, ಮೀನುಗಾರ ಸಮಾಜದವರು, ಆಟೋ, ಕ್ಯಾಬ್, ಲಾರಿ ಚಾಲಕರು, ಕ್ಲೀನರ್​ಗಳು ಅನೇಕ ಕಾರ್ವಿುಕ ವಲಯ ಇದೆ. ಇಂತಹ ಸಣ್ಣ ಕಾರ್ವಿುಕರ ಬಗ್ಗೆ ಯಾರೂ ಮಾತನಾಡಿಲ್ಲ. ಇದು ಬಹಳ ನೋವು ತಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಿನ್ನ ನಂಬರ್ ಕೊಡಣ್ಣ: ಕೃಷಿ ಭೂಮಿ ಯಲ್ಲೇ ತರಕಾರಿ, ಹೂವು, ಹಣ್ಣು ನಾಶ ವಾಗುತ್ತಿದೆ. ಈವರೆಗೂ ಅಧಿಕಾರಿಗಳು ಸಮೀಕ್ಷೆ ಮಾಡಿಲ್ಲ. ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತನ್ನಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳುತ್ತಾರೆ. ‘ಅಣ್ಣಾ, ಬಿ.ಸಿ. ಪಾಟೀಲಣ್ಣ… ನಿನ್ನ ನಂಬರ್ ಕೊಡಣ್ಣ, ಯಾರು ಯಾರಿಗೆ ಗಮನಕ್ಕೆ ತರಬೇಕು’ ಎಂದು ಡಿಕೆಶಿ ಪ್ರಶ್ನಿಸಿದರು.
ಮಾಸ್ಕ್‌ ಧರಿಸದ್ದಕ್ಕೆ ಬುದ್ಧಿಮಾಂದ್ಯ ಮಗನನ್ನು ಕೊಂದ ತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 18 =
Remember me
