ಚಿಕ್ಕಬಳ್ಳಾಪುರ:ಚುನಾವಣಾ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಅಭಿಯಾನ ಹಾಗೂ ಮಾಜಿ ಶಾಸಕ‌ ದಿ. ಜಿ‌.ವಿ.ಶ್ರೀರಾಮರೆಡ್ಡಿ ಜೀವನ‌ಚರಿತ್ರೆಯ ಕಿರುಚಿತ್ರ ಪ್ರದರ್ಶನ ಮಾಡುತ್ತಿದ್ದ ಎಲ್​ಇಡಿ ಸ್ಕ್ರೀನ್‌ ವಾಹನಕ್ಕೆ ಮೂರ್ನಾಲ್ಕು ಮಂದಿ ಕಲ್ಲು ತೂರಾಟ ನಡೆಸಿದ್ದು, ಲಕ್ಷಾಂತರ ರೂ. ಮೌಲ್ಯದ ಡಿಜಿಟಲ್ ಎಲ್​ಇಡಿ ಸ್ಕ್ರೀನ್ ಪರದೆ ಹಾನಿಯಾಗಿದೆ.
ಇಂತಹ ಘಟನೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ರೇಚನಾಯಕನಹಳ್ಳಿಯಲ್ಲಿ ಗುರುವಾರ ನಡೆದಿದೆ. ಸ್ವಾಭಿಮಾನಿ ಜಿ.ವಿ.ಎಸ್. ಅಭಿಮಾನಿ ಬಳಗ ವತಿಯಿಂದ ರೇಚನಾಯಕನಹಳ್ಳಿ ಗ್ರಾಮದಲ್ಲಿ ಚುನಾವಣಾ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಅಭಿಯಾನ ಹಾಗೂ ಜಿ.ವಿ.ಶ್ರೀರಾಮರೆಡ್ಡಿ ಜೀವನ ಚರಿತ್ರೆಯ ಕಿರುಚಿತ್ರ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕಲ್ಲು ತೂರಿ ಪುಂಡಾಟ ಮೆರೆದಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಜಿವಿಎಸ್ ಅಭಿಮಾನಿ ಬಳಗದ ಕಾರ್ಯಕರ್ತರು ರೇಚನಾಯಕನಹಳ್ಳಿ‌ ಗ್ರಾಮದ ಚೌಡರೆಡ್ಡಿ, ಆದಿನಾರಾಯಣಪ್ಪ ಮತ್ತು ಇತರರ ವಿರುದ್ಧ ದೂರು ನೀಡಿದ್ದಾರೆ. ಸಿಪಿಐ(ಎಂ) ಪಕ್ಷದ ಮುಖಂಡ ಡಾ.ಅನಿಲ್ ಕುಮಾರ್ ಬೆಂಬಲಿಗರಿಂದ ಕೃತ್ಯವೆಸಗಲಾಗಿದೆ ಎಂದು ಜಿವಿಎಸ್ ಅಭಿಮಾನಿ‌ ಬಳಗದ ಸಂಚಾಲಕ ಡಾ.ಮಧುಸೀತಪ್ಪ ಆರೋಪಿಸಿದ್ದಾರೆ.
ಕಂಚುಗಲ್ಲು ಬಂಡೇಮಠದ ಶ್ರೀಗಳ ಡೆತ್​ನೋಟ್​ನಲ್ಲಿ ಪ್ರಭಾವಿಗಳ ಹೆಸರು? ಸಾವಿಗೂ ಮುನ್ನ ಮಠಕ್ಕೆ ಬಂದಿದ್ದರಂತೆ ಸಚಿವರ ಆಪ್ತರು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
