| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ನಾಗರಿಕರಿಗೆ ಗುಣಮಟ್ಟದ ಸರ್ಕಾರಿ ಸೇವೆಯನ್ನು ಸುಲಭವಾಗಿ ಒದಗಿಸಲು ‘ಜನಮಿತ್ರ’ರು ಇನ್ನು ಮುಂದೆ ಮನೆ ಬಾಗಿಲಿಗೇ ಬರಲಿದ್ದಾರೆ. ಆ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶವನ್ನೂ ನೀಡಲು ಸರ್ಕಾರ ಮುಂದಾಗಿದೆ. ವಿವಿಧ ಇಲಾಖೆಗಳಲ್ಲಿನ ಯಾವುದೇ ಸೇವೆಯನ್ನು ಪಡೆಯಲು ನಾಗರಿಕರು ಸಮಯ, ಶ್ರಮ, ಹಣ ವ್ಯಯ ಮಾಡಿಕೊಂಡು ಅಲೆದಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಸರ್ಕಾರ ಇ-ಆಡಳಿತ ಇಲಾಖೆಯ ಮೂಲಕ ಜನಮಿತ್ರರ ನೇಮಕಕ್ಕೆ ನಿರ್ಧರಿಸಿದೆ. ನಾಗರಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಇಲಾಖೆಗಳೊಂದಿಗೆ ಸಂವಹನ ನಡೆಸುವ ವಿಧಾನವನ್ನು ಇದು ಸರಳಗೊಳಿಸಲಿದೆ.
ಈ ವ್ಯವಸ್ಥೆ ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರದ ಮೂಲವಾಗಿರುವ ಮಧ್ಯವರ್ತಿಗಳ ಹಾವಳಿಯನ್ನು ತೊಡೆದು ಹಾಕಲಿದೆ ಎನ್ನುವುದು ಸರ್ಕಾರದ ಚಿಂತನೆಯಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಸೇವೆಯನ್ನು ಸಹ ಇವುಗಳ ಮೂಲಕ ಪಡೆಯಬಹುದು.
ಇ-ಆಡಳಿತ ಇಲಾಖೆ ಇದರ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಈಗಾಗಲೇ ಎಲ್ಲ ಸಚಿವರ ಅನುಮೋದನೆ ಪಡೆದುಕೊಂಡಿದೆ. ಸಚಿವ ಸಂಪುಟದ ಒಪ್ಪಿಗೆ ಪಡೆಯಲು ಕಡತ ಸಿದ್ಧವಾಗಿದೆ. ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರ ಇದೇ ಮಾದರಿಯ ವ್ಯವಸ್ಥೆ ಮಾಡಿ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿದೆ. ಅಲ್ಲಿ ಸರ್ಕಾರದಿಂದಲೂ ಗೌರವ ಸಂಭಾವನೆ ನೀಡುವ ವ್ಯವಸ್ಥೆ ಇದೆ. ಸರ್ಕಾರ ಈಗ ಖಾಸಗಿ ಸಹಭಾಗಿತ್ವದಲ್ಲಿ 80 ಇಲಾಖೆಗಳ 736 ಸೇವೆಗಳನ್ನು ನಾಗರಿಕ ಸೇವಾ ಕೇಂದ್ರಗಳ ಮೂಲಕ ನೀಡುತ್ತಿದೆ. ಅದನ್ನು ಇನ್ನಷ್ಟು ವಿಸ್ತರಿಸಲಿದೆ. ರಾಜ್ಯದಲ್ಲಿ 146 ಬೆಂಗಳೂರು ಒನ್, 551 ಕರ್ನಾಟಕ ಒನ್ ಹಾಗೂ 6,778 ಗ್ರಾಮ ಒನ್ ಕೇಂದ್ರಗಳಿವೆ. ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಇವೆ. ಈ ಎಲ್ಲ ಸೇವೆಗಳನ್ನು ಪಡೆಯಲು ಇನ್ನು ಮುಂದೆ ಕೇವಲ ಮಿಸ್ಡ್ ಕಾಲ್ ಕೊಟ್ಟರೆ, ಜನಮಿತ್ರರು ಬಂದು ಅರ್ಜಿ ಸಲ್ಲಿಕೆಯಿಂದ ಹಿಡಿದು ಪ್ರಮಾಣಪತ್ರ ತಂದುಕೊಡುವ ತನಕ ಕಾರ್ಯನಿರ್ವಹಿಸಲಿದ್ದಾರೆ.
ಪ್ರಯೋಜನಗಳು
* ನಾಗರಿಕರು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ
* ಸಮಯ, ಹಣ ಮತ್ತು ಶ್ರಮದ ಉಳಿತಾಯ
* ಮಧ್ಯವರ್ತಿಗಳ ಹಾವಳಿಗೆ ಬ್ರೇಕ್
* ಸರ್ಕಾರಿ ಕಚೇರಿಯಲ್ಲಿ ಜನದಟ್ಟಣೆಯ ತಡೆ
* ನಿಗದಿತ ಅವಧಿಯಲ್ಲಿ ಸೇವೆ ಲಭ್ಯ
* ಗ್ರಾಮೀಣ ಉದ್ಯೋಗಾವಕಾಶಕ್ಕೆ ಉತ್ತೇಜನ
* ಅಧಿಕಾರಿಗಳು ಕಚೇರಿಯಲ್ಲಿ ಹೆಚ್ಚಿನ ಸಮಯ ಇರಬಹುದು
ಸಕಾಲದಲ್ಲಿ ಯಶಸ್ವಿ
ರಾಜ್ಯ ಸರ್ಕಾರ 2011 ರಲ್ಲಿ ಜಾರಿಗೆ ತಂದ ಸಕಾಲದಲ್ಲಿ ಇದುವರೆಗೂ 32.66 ಕೋಟಿ ಅರ್ಜಿಗಳನ್ನು ಸ್ವೀಕರಿಸಿ, 32.52 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
* ಗ್ರಾಮಗಳು 27,028
* ಬಿಬಿಎಂಪಿ 1
* ನಗರ ಪಾಲಿಕೆಗಳು 10
* ನಗರಸಭೆಗಳು 61
* ಪುರಸಭೆಗಳು 124
* ಪಟ್ಟಣ ಪಂಚಾಯಿತಿಗಳು 115
ಪ್ರಾಯೋಗಿಕ ಜಾರಿಜನಮಿತ್ರ ಯೋಜನೆಯನ್ನು ಸಂಪುಟದಲ್ಲಿ ಒಪ್ಪಿಗೆ ಸಿಕ್ಕ ಕೂಡಲೇ ಪ್ರಾಯೋಗಿಕವಾಗಿ ಪ್ರತಿ ಕಂದಾಯ ವಿಭಾಗಕ್ಕೆ ಒಂದು ಜಿಲ್ಲೆಯಂತೆ ನಾಲ್ಕು ಜಿಲ್ಲೆಗಳಲ್ಲಿ ಆರಂಭಿಸಲಾಗುತ್ತದೆ. ಆ ನಂತರ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ. ಜನಮಿತ್ರರಾಗಿ ನೇಮಕವಾಗುವವರಿಗೆ ಇ-ಆಡಳಿತ ಇಲಾಖೆಯ ಮೂಲಕ ತರಬೇತಿ ಸಹ ನೀಡಲಾಗುತ್ತದೆ.
ಸೇವಾ ಕೇಂದ್ರಗಳಿಗೆ ಅಲೆದಾಡಬೇಕಿಲ್ಲಆದಾಯ ಪ್ರಮಾಣಪತ್ರ, ರಸಗೊಬ್ಬರಕ್ಕೆ ಅರ್ಜಿ ಸಲ್ಲಿಕೆ, ಜಾತಿ ಪ್ರಮಾಣಪತ್ರ, ವಿವಿಧ ಲೈಸನ್ಸ್​ಗಳ ನವೀಕರಣ, ಪರಿಹಾರ ನಿಧಿಗೆ ಅರ್ಜಿ ಸಲ್ಲಿಕೆ, ಟ್ರೇಡರ್ ಲೈಸನ್ಸ್, ಮಣ್ಣಿನ ಗುಣಮಟ್ಟ ಪರೀಕ್ಷೆಗೆ ಅರ್ಜಿ ಸಲ್ಲಿಕೆ, ಮೀನು ಸಾಗಣೆ ಅರ್ಜಿ ಸಲ್ಲಿಕೆ, ಅಂಕಪಟ್ಟಿ, ಪೊಲೀಸರಿಗೆ ದೂರು ದಾಖಲು, ಮರಣ ಪ್ರಮಾಣಪತ್ರ, ವಿವಿಧ ಸಾಮಾಜಿಕ ಪಿಂಚಣಿಗಳಿಗೆ ಅರ್ಜಿ ಸಲ್ಲಿಕೆ ಹೀಗೆ ವಿವಿಧ ಸೇವೆಗಳನ್ನು ಜನಮಿತ್ರರ ಮೂಲಕ ಪಡೆಯಬಹುದು. ಪ್ರತಿ ನಾಗರಿಕ ಸೇವಾ ಕೇಂದ್ರಗಳಿಗೆ 2 ರಿಂದ 4 ಜನಮಿತ್ರರನ್ನು ನೇಮಿಸಲಾಗುತ್ತದೆ. ಒಟ್ಟಾರೆ ರಾಜ್ಯಾದ್ಯಂತ ಅಂದಾಜು 25 ಸಾವಿರ ಜನ ಈ ಸೇವೆಗೆ ನೇಮಕ ಮಾಡುವ ಉದ್ದೇಶವಿದೆ.
ಅರ್ಹತೆಗಳು
* ಅದೇ ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸಬೇಕು* ಕನಿಷ್ಠ ಹತ್ತನೇ ತರಗತಿ ಓದಿರಬೇಕು* ಕಂಪ್ಯೂಟರ್ ಕೌಶಲ ಇರಬೇಕು* ಚಾಲನಾ ಪರವಾನಗಿ, ದ್ವಿಚಕ್ರ ವಾಹನದ ಮಾಲೀಕತ್ವ* ಪೊಲೀಸ್ ಪ್ರಕರಣಗಳಿಂದ ಮುಕ್ತವಾಗಿರಬೇಕು
ಆಯ್ಕೆ ಪ್ರಕ್ರಿಯೆ
* ಆನ್​ಲೈನ್​ನಲ್ಲಿ ಅರ್ಜಿ ಸ್ವೀಕಾರ* ಆನ್​ಲೈನ್​ನಲ್ಲಿಯೇ ಪರಿಶೀಲನೆ ಹಾಗೂ ಆಯ್ಕೆ* ಆನ್​ಲೈನ್ ಮೂಲಕವೇ ತರಬೇತಿ
ಸೇವೆ ಬಳಕೆ ಹೇಗೆ?ಜನಮಿತ್ರರ ಸೇವೆ ಬೇಕು ಎಂಬುವವರು ಮೊಬೈಲ್​ಗೆ ಮಿಸ್ ್ಡ ಕಾಲ್ ನೀಡಬೇಕು. ಅವರು ಹೆಸರು ಹಾಗೂ ಪಿನ್​ಕೋಡ್ ಪಡೆಯುತ್ತಾರೆ. ಅವರಿಗೆ ನೋಂದಣಿ ಸಂಖ್ಯೆಯನ್ನು ಎಸ್​ಎಂಎಸ್ ಮೂಲಕ ನೀಡಲಾಗುತ್ತದೆ. ಜನಮಿತ್ರ ಆಪ್ ಮೂಲಕ ಜನಮಿತ್ರನಿಗೆ ಮಾಹಿತಿ ಕಳುಹಿಸಲಾಗುತ್ತದೆ. ಒಂದು ಗಂಟೆಯೊಳಗೆ ಸಂಬಂಧಿಸಿದ ನಾಗರಿಕರನ್ನು ಜನಮಿತ್ರ ಭೇಟಿ ಮಾಡುತ್ತಾರೆ. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯ ತನಕ ನೋಂದಣಿಗೆ ಅವಕಾಶ ನೀಡಲಾಗುತ್ತದೆ. ರಾತ್ರಿ 8 ಗಂಟೆಯ ನಂತರದ ಅವಧಿಯನ್ನು ಮಾರನೇ ದಿನಕ್ಕೆ ಲೆಕ್ಕ ಹಾಕಲಾಗುತ್ತದೆ.
ಕಾರ್ಯಕರ್ತರಿಗೆ ಆದ್ಯತೆಜನಮಿತ್ರರಾಗಿ ಕಾಂಗ್ರೆಸ್ ಕಾರ್ಯಕರ್ತರನ್ನೇ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಪಕ್ಷ ಸಂಘಟನೆ, ಸರ್ಕಾರದ ಸಾಧನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವೂ ಇವರಿಂದ ಆಗಲಿದೆ.
ಪ್ರೋತ್ಸಾಹಧನನಿರುದ್ಯೋಗಿ ಯುವ ಸಮುದಾಯಕ್ಕೆ ಸಣ್ಣ ಪ್ರಮಾಣದ ಉದ್ಯೋಗವನ್ನು ಒದಗಿಸುವ ಯೋಜನೆ ಇದಾಗಿದೆ. ಪ್ರೋತ್ಸಾಹ ಧನವನ್ನು ನಿಗದಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆ ಹಾಗೂ ಸೇವೆ ಮನೆ ಬಾಗಿಲಿಗೆ ತಲುಪಿಸುವುದಕ್ಕೆ ಅರ್ಜಿ ಶುಲ್ಕದ ಜತೆಗೆ 50 ರೂ. ಹಾಗೂ ಪ್ರಮಾಣಪತ್ರದ ವಿತರಣೆಗೆ ಶುಲ್ಕದ ಜತೆ 25 ರೂ. ನಿಗದಿ ಮಾಡಲಾ ಗುತ್ತದೆ. ಶುಲ್ಕ ಸರ್ಕಾರಕ್ಕೆ ಬಂದರೆ ಉಳಿದ ಮೊತ್ತ ಜನಮಿತ್ರರಿಗೆ ಲಭ್ಯ ವಾಗುತ್ತದೆ. ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಇರುವುದಿಲ್ಲ.
ಈಕೆ ಒಂದೇ ಒಂದು Instagram ಪೋಸ್ಟ್​ನಿಂದ ಸಂಪಾದಿಸುವ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
