ಬೆಂಗಳೂರು:ಉತ್ತರ ಕನ್ನಡ ಹೊನ್ನಾವರದ ಜಾನಪದ ವಿಶ್ವ ಪ್ರತಿಷ್ಟಾನವು ವಿವಿಧ ಕ್ಷೇತ್ರದ ಸಾಧಕರಿಗೆ 2023ನೇ ಸಾಲಿನಗೆ ನೀಡಲಿರುವ ‘ದೀಪ ಪ್ರಶಸ್ತಿ’ಗಳನ್ನು ಪ್ರಕಟಿಸಿದ್ದು, ‘ಕುವೆಂಪು ದೀಪ ಪ್ರಶಸ್ತಿ’ಗೆ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಭಾಜನರಾಗಿದ್ದಾರೆ.
‘ಕಾರಂತ ದೀಪ ಪ್ರಶಸ್ತಿ’ಗೆ ಬೆಂಗಳೂರು ವಿಶ್ವವಿದ್ಯಾಲಯದ ಡೀನ್ ಡಾ. ಸಿ. ನಾಗಭೂಷಣ, ‘ಕಲಾದೀಪ ಪ್ರಶಸ್ತಿ’ಗೆ ಕಲಾವಿದ ಎಚ್. ಎನ್. ಸುರೇಶ್, ‘ದೇವಮ್ಮ ರಾಮನಾಯಕ ದೀಪ ಪ್ರಶಸ್ತಿ’ಗೆ ಚಂದ್ರಕಾಂತ ಮುಕುಂದ ಆಚಾರಿ, ‘ವಿದ್ಯಾರ್ಥಿ ದೀಪ ಪ್ರಶಸ್ತಿ’ಗೆ ಯೋಗಪಟು ಶ್ರೀನಿಧಿ ಪ್ರಕಾಶ್ ಗೌಡ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 60 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಡಾ. ಎನ್. ಆರ್. ನಾಯಕ, ನಾಗರಾಜ ಹೆಗಡೆ ಅಪಗಾಲ, ಅಭಿನವ ರವಿಕುಮಾರ್ ಮತ್ತು ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಪುರಸ್ಕೃತರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಸೆ. 5ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ‘ಜಾನಪದ ದೀಪಾರಾಧನೆ’ ಕಾರ್ಯಕ್ರಮದಲ್ಲಿ ಡಾ. ಎನ್. ಆರ್. ನಾಯಕ ಮತ್ತು ಡಾ. ಶಾಂತಿ ನಾಯಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಿವೃತ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಸಮಾರಂಭ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಗಾಯಕಿ ಎಂ.ಡಿ. ಪಲ್ಲವಿ ಸಂಗೀತ ಸಂಯೋಜಿಸಿರುವ ‘ಕಾದಲರು’ ಧ್ವನಿಸಾಂದ್ರಿಕೆ ಬಿಡುಗಡೆಯಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + three =
Remember me
