ಹಾವೇರಿ:ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅದಕ್ಕೆ ಉನ್ನತ ಸ್ಥಾನದಲ್ಲಿರುವ ಗಣ್ಯರೂ ಹೊರತಲ್ಲ. ಇತ್ತೀಚೆಗಷ್ಟೇ ಮಾಜಿ ಸಂಸದರೊಬ್ಬರ ಮಗನ ಖಾತೆಯನ್ನೂ ಸೈಬರ್​ ಕಳ್ಳರು ಖಾಲಿ ಮಾಡಿದ್ದಾರೆ.
ಈ ಕಳ್ಳರು, ತಮ್ಮನ್ನು ತಾವು ಬ್ಯಾಂಕ್​ನವರು ಎಂದು ಬಿಂಬಿಸಿಕೊಂಡು, ಜಾನಪದ ವಿವಿಯ ಕುಲಪತಿ ಖಾತೆಗೆ ಕನ್ನ ಹಾಕಿದ್ದಾರೆ. ವಂಚನೆ ಮಾಡಿದ ಸೈಬರ್ ವಂಚಕರು, ಕುಲಪತಿ ಬ್ಯಾಂಕ್ ಅಕೌಂಟ್​ನಿಂದ ಬರೋಬ್ಬರಿ, 60,098 ರೂಪಾಯಿಗಳನ್ನು ಕದ್ದಿದ್ದಾರೆ.
ಸೈಬರ್ ವಂಚಕನಿಂದ ಮೋಸ ಹೋದ ಕುಲಪತಿ ಡಾ.ಟಿ.ಎಂ ಭಾಸ್ಕರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ. ಈ ವಿವಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿದೆ.
ಈ ಸೈಬರ್​ ಕಳ್ಳ, ಕುಲಪತಿಗಳಿಗೆ ಕರೆ ಮಾಡಿದ್ದಾನೆ. ಅವರಿಗೆ ಟ್ರೂ ಕಾಲರ್​ನಲ್ಲಿ ಬ್ಯಾಂಕ್ ಬ್ಯಾಂಕ್ ಎಂಬ ಹೆಸರು ಬಂದಿದ್ದನ್ನು ನೋಡಿ ನಂಬಿಕೆ ಹುಟ್ಟಿದೆ. ಈ ಹಿನ್ನೆಲೆಯಲ್ಲಿ ಪೋನ್ ಕಾಲ್ ರಿಸೀವ್ ಮಾಡಿದ್ದಾರೆ. ಆಗ ಆ ಬದಿಯಲ್ಲಿದ್ದ ನವೀನಕುಮಾರ ಎನ್ನುವಾತ ತನ್ನನ್ನು ತಾನು ಧಾರವಾಡ ಎಸ್​ಬಿಐ ಬ್ಯಾಂಕ್ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ.
ಈತ ಕರೆ ಮಾಡಿ, ಪೋನ್ ಪೇ ದಿನದ ಟ್ರಾಂಜಕ್ಸನ್ ಲಿಮಿಟ್​ಅನ್ನು 60 ಸಾವಿರ ವಾಗಿಯೇ ಮುಂದುವರಿಸಲು ಲಿಂಕ್ ಒತ್ತಿ ಎಂದು ಹೇಳಿ ಲಿಂಕ್​ ಒಂದನ್ನು ಕಳಿಸಿದ್ದ. ಇದನ್ನು ನಂಬಿದ ಕುಲಪತಿಗಳು, ಲಿಂಕ್ ಓಪನ್ ಮಾಡಿದ್ದಾರೆ. ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದೇ ತಡ, ಖಾತೆಯಲ್ಲಿದ್ದ ಹಣ ಡೆಬಿಟ್ ಮಾಡಿಕೊಂಡು ವಂಚನೆ ಎಸಗಲಾಗಿದೆ. ಈ ಕುರಿತಾಗಿ ಕುಲಪತಿಗಳು ಶಿಗ್ಗಾಂವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
