ಕೊಪ್ಪಳ:ಜನಾರ್ದನ ರೆಡ್ಡಿಯವರನ್ನು ಸೆಳೆಯಲು ಬಿಜೆಪಿ ಪಾಳೆಯದಲ್ಲಿ ಯತ್ನ ನಡೆಯುತ್ತಿದೆಯಾ ಎನ್ನುವ ಪ್ರಶ್ನೆ ಎದ್ದಿದ್ದು ರಾಜ್ಯ ರಾಜಕರಣ ಯಾವ ಕಡೆಗೆ ಹೋಗಲಿದೆ ಎನ್ನುವುದರ ನಿರ್ಣಾಯಕ ಪಾತ್ರವನ್ನು ಕೆಆರ್​ಪಿಪಿ ಪಕ್ಷ ನಿರ್ವಹಿಸಲಿದೆ ಎನ್ನಲಾಗುತ್ತಿದೆ.
ಈ ನಡುವೆ ಜನಾರ್ದನ ರೆಡ್ಡಿಯಿಂದಲೂ ಬಿಜೆಪಿ ಸೇರ್ಪಡೆಗೆ ತೆರೆಮರೆಯಲ್ಲಿ ಪ್ರಯತ್ನ ಮುಂದುವರೆದಿದೆ ಎನ್ನಲಾಗುತ್ತಿದ್ದು ಜನಾರ್ದನ ರೆಡ್ಡಿ ಕೆಆರ್‌ಪಿಪಿ ಪಕ್ಷ ಕೇವಲ ಬುಟ್ಟಿಯಲ್ಲಿನ ಹಾವಾಯ್ತಾ ಎನ್ನುವ ಪ್ರಶ್ನೆ ಎದುರಾಗಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಜೆಪಿ ಕಟ್ಟಿ ಬಿಜೆಪಿಯನ್ನು ಬೆದರಿಸಿದ್ದ ಹಾಗೆಯೇ ಈಗ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೆಆರ್​ಪಿಪಿ ಪಕ್ಷದ ಮೂಲಕ ಹೊಸ ತಂತ್ರ ಮಾಡಿದ್ದಾರಾ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ. ಈಗ ದೆಹಲಿ ನಾಯಕರ ಅಂಗಳದಲ್ಲಿಯೂ ರೆಡ್ಡಿ ಬಿಜೆಪಿ ಸೇರ್ಪಡೆಗೆ ಮಾತುಕತೆ ನಡೆಯುತ್ತಿದ್ದು ಇನ್ನು ಕೂಡಾ ತೆರೆ ಮರೆಯಲ್ಲೆ ರೆಡ್ಡಿ ಬಿಜೆಪಿ ಸೇರ್ಪಡೆಯ ಕನಸು ಕಾಣ್ತಿದ್ದಾರೆ ಎನ್ನಲಾಗುತ್ತಿದೆ.
ರೆಡ್ಡಿ ಪಕ್ಷದಿಂದ ಬಿಜೆಪಿಗೆ ಹೊಡೆತ ಬೀಳುವ ಹಿನ್ನೆಲೆಯಲ್ಲಿ ರೆಡ್ಡಿ ಹಾಗೂ ಬಿಜೆಪಿ ನಾಯಕರ ನಡುವೆ ಮಾತುಕತೆ ನಡೆದಿದ್ದು ಚುನಾವಣೆ ಘೋಷಣೆಯಾಗುವವರೆಗೂ ರೆಡ್ಡಿ ಕಾದು ನೋಡುವ ತಂತ್ರ ಅನುಸರಿಸಲಿದ್ದಾರೆ ಎನ್ನಲಾಗುತ್ತಿದೆ.
ಈಗ ಜನಾರ್ದನ ರೆಡ್ಡಿ ತಂತ್ರಕ್ಕೆ ಬಿಜೆಪಿ ಬೆದರಿತಾ ಎನ್ನುವ ಪ್ರಶ್ನೆ ಎದುರಾಗಿದ್ದು ಬಿಜೆಪಿಗೆ ಜನಾರ್ದನ ರೆಡ್ಡಿಯನ್ನು ಸೆಳೆಯಲು ಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ. ಜನಾರ್ದನ ರೆಡ್ಡಿ ಹೆಚ್ಚು ಹೆಚ್ಚು ಆ್ಯಕ್ಟೀವ್ ಆದಷ್ಟು ಬಿಜೆಪಿಗೇ ನಷ್ಟವಾಗುತ್ತಿದೆ.
‘ರೆಡ್ಡಿ ಮತವಿಭಜನೆ ತಂತ್ರ’ದಿಂದ ಬಿಜೆಪಿಗೆ ಮಾರಕವಾಗು ಸಾಧ್ಯತೆ ಎದ್ದು ಕಾಣುತ್ತಿದೆ. ಮೊದಲಿಗೆ ಜನಾರ್ದನ ರೆಡ್ಡಿ ಪಕ್ಷದ ಬಗ್ಗೆ ಬಿಜೆಪಿ ಲೆಕ್ಕಾಚಾರ ಬೇರೆಯದೇ ಇತ್ತು. ರೆಡ್ಡಿ ಹೊಸ ಪಕ್ಷದಿಂದ ಆಡಳಿತವಿರೋಧಿ ಅಲೆ ಛಿದ್ರವಾಗುತ್ತೆ ಎಂದು ಬಿಜೆಪಿ ಎಂದುಕೊಂಡಿತ್ತು. ಜನಾರ್ದನ ರೆಡ್ಡಿ ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಾರೆ ಎಂದು ಬಿಜೆಪಿ ಲೆಕ್ಕ ಹಾಕಿತ್ತು.
ಆದರೆ ಈಗ ಜನಾರ್ದನ ರೆಡ್ಡಿ ಪಕ್ಷ ಸೇರುತ್ತಿರುವವರ ಪೈಕಿ ಬಿಜೆಪಿಯವರೇ ಹೆಚ್ಚಾಗುತ್ತಿರುವ ಕಾರಣ ಜನಾರ್ದನ ರೆಡ್ಡಿ ಬಿಜೆಪಿ ಬುಡಕ್ಕೆ ಸಂಕಷ್ಟ ತಂದಿಡುತ್ತಾರಾ ಎನ್ನುವ ಲೆಕ್ಕಾಚಾರ ಹುಟ್ಟಿದೆ.
ಹಾಗಾಗಿ ಮತ್ತೆ ಜನಾರ್ದನ ರೆಡ್ಡಿಯನ್ನು ಬಿಜೆಪಿಗೆ ಸೆಳೆಯಲು ಯತ್ನ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಜನಾರ್ದನ ರೆಡ್ಡಿಯೂ ಬಿಜೆಪಿ ಸೇರ್ಪಡೆಗೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದ್ದು ಈ ಬಗ್ಗೆ ದೆಹಲಿ ನಾಯಕರ ಜೊತೆ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಜನಾರ್ದನ ರೆಡ್ಡಿ ಮತ್ತು ಬಿಜೆಪಿ ಮೂಲಗಳಿಂದ ‘ದಿಗ್ವಿಜಯ ನ್ಯೂಸ್’ಗೆ ಮಾಹಿತಿ ಲಭಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
