ಉಡುಪಿ:ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ‘ಜನಸಂಕಲ್ಪ ಯಾತ್ರೆ’ ನಡೆಯುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವರಾದ ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿದ್ದಾರೆ.
ಜನಸಂಕಲ್ಪ ಸಮಾವೇಶದ ವೇದಿಕೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಲ್ಯಾಣ ಕರ್ನಾಟಕದಲ್ಲಿ ಜನಸಂಕಲ್ಪ ಯಾತ್ರೆ ಮುಗಿಸಿದ್ದೇವೆ. ಕರಾವಳಿಯಲ್ಲಿ ಕಾಪುವಿನಿಂದ ಆರಂಭಗೊಳ್ಳುತ್ತಿದೆ. ರಾಜ್ಯದ ಎಲ್ಲ ಕ್ಷೇತ್ರಕ್ಕೆ ಭೇಟಿ ಕೊಟ್ಟು, ಪಕ್ಷದ ಸಂಘಟನೆ ಜತೆಗೆ ಜನಸಂಘಟನೆ ಮಾಡುತ್ತೇವೆ. ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿಯ ಅಲೆ ಎಲ್ಲೆಡೆ ಕಾಣುತ್ತಿದೆ. ಕಾರ್ಯಕರ್ತರ ಉತ್ಸಾಹವೂ ಹೆಚ್ಚಾಗಿದೆ. ಈ ಸಂಕಲ್ಪ ಸಮಾವೇಶ ಮುಗಿದ ನಂತರ ಉತ್ತರ ಮತ್ತು ದಕ್ಷಿಣ ಭಾಗದಿಂದ ರಥಯಾತ್ರೆ ಆರಂಭವಾಗಲಿದೆ. ಎಲ್ಲ 224 ಕ್ಷೇತ್ರಕ್ಕೂ ಪ್ರವಾಸ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯರ ಆಡಳಿತ ಇದ್ದಾಗ 120ಕ್ಕಿಂತ ಹೆಚ್ಚು ಶಾಸಕರಿದ್ದಾಗಲೂ ಅವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿದ್ದರು. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಸಿಎಂ ಆಗಲ್ಲ ಎಂದಿದ್ದರು. ಆದರೆ ಅವರಿಬ್ಬರೂ ಸಿಎಂ ಆದರು. ನಮ್ಮಪ್ಪನ ಆಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದಿದ್ದರು, ಆದರೆ ಏನಾಯಿತು? ಕಾರ್ಯಕ್ರಮಗಳನ್ನು ಕೊಟ್ಟು ಅಧಿಕಾರದಲ್ಲಿದ್ದಾಗಲೂ, ಅವರಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಆಗಿಲ್ಲ. ಕರ್ನಾಟಕವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿರುವುದನ್ನು ಜನ ಮರೆತಿಲ್ಲ. ಅವರು ಹೇಳಿದ್ದು, ಯಾವತ್ತೂ ಆಗಿಲ್ಲ ಎಂದು ಸಿಎಂ ಲೇವಡಿ ಮಾಡಿದರು.
ಚಂದ್ರು ಕಾರು 100 ಕಿಲೋ ಮೀಟರ್ ವೇಗದಲ್ಲಿತ್ತು… ಪ್ರಕರಣ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?

ಶಿವಮೊಗ್ಗದಲ್ಲಿ ಭೀಕರ ಅಪಘಾತ: ಅತ್ತೆ-ಸೊಸೆ-ಮೊಮ್ಮಗಳು ದುರ್ಮರಣ

ಹೆಣ್ಣು ಮಗು ಹುಟ್ಟಿದ್ದಕ್ಕೆ ಮನನೊಂದು ಸಾವಿನ ಮನೆಯ ಕದ ತಟ್ಟಿದ ತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + two =
Remember me
