ಬಳ್ಳಾರಿ:ಕರೊನಾ ವೈರಸ್​ ಸೋಂಕಿನ ಸರಪಳಿಯನ್ನು ಬ್ರೇಕ್​ ಮಾಡುವ ಒಳ್ಳೆಯ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಜನತಾ ಕರ್ಪ್ಯೂಗೆ ಕರೆ ನೀಡಿದ್ದರು. ಮನೆಯಿಂದ ಯಾರು ಹೊರಬರಬೇಡಿ ಎಂದು ಹೇಳಿದ್ದರೂ ಸಹ ಅದನ್ನು ಲೆಕ್ಕಿಸದೇ ಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ನೀರು ಪಾಲಾಗಿದ್ದಾನೆ.
ಕೂಡ್ಲಿಗಿ ತಾಲೂಕಿನ ರಾಮದುರ್ಗ ಕೆರೆಯಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ. ಚೋರನೂರು ಗ್ರಾಮದ ನಿವಾಸಿ ಚೇತು(22) ಮೃತ ಯುವಕ. ಜನತಾ ಕರ್ಪ್ಯೂ (ರಜೆ) ದಿನವೇ ಕೆರೆಯಲ್ಲಿ ಟಿಕ್​ಟಾಕ್ ಮಾಡಲು ಹೋಗಿ‌ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಚೇತು ಜನತಾ ಕರ್ಪ್ಯೂ ದಿನ ರಜೆ ಇದ್ದುದ್ದರಿಂದ ಸ್ನೇಹಿತರ ಜತೆ ಈಜಲು ಕೆರೆಗೆ ಹೊಗಿದ್ದ. ಸ್ನೇಹಿತರೊಂದಿಗೆ ಕೆರೆಯ ತೂಬಿನಿಂದ ಡ್ಯಾನ್ಸ್ ಮಾಡುತ್ತಾ ನೀರಿಗೆ ಹಾರಿದ್ದ. ಆದರೆ, ನೀರಿಗೆ ಹಾರಿದ ಮೂರವರಲ್ಲಿ ಇಬ್ಬರು ಮಾತ್ರ ಹೊರಕ್ಕೆ‌ ಬಂದಿದ್ದಾರೆ. ದುರಾದೃಷ್ಟವಶಾತ್​ ಚೇತು ನೀರುಪಾಲಾಗಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗುಡೇಕೋಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಜನತಾ ಕರ್ಪ್ಯೂ ದುರುಪಯೋಗದಿಂದ ಯುವಕನ ಸಾವು: ಖಾಲಿ ರಸ್ತೆಯಲ್ಲಿನ ಬೈಕ್​ ಕ್ರೇಜ್​ಗೆ​ ಬಲಿ

ಜನತಾ ಕರ್ಪ್ಯೂ ಬಗ್ಗೆ ರಜಿನಿಕಾಂತ್​ ಮಾಡಿದ್ದ ಪೋಸ್ಟ್​ ಅನ್ನು ಟ್ವಿಟರ್​ ಡಿಲೀಟ್​ ಮಾಡಿದ್ದೇಕೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × five =
Remember me
