ಚರ್ಮಗಂಟು ರೋಗಿಗೆ ಮಾಸಾಶನ!:ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ನಡೆಸಿದ ಜನತಾ ದರ್ಶನದಲ್ಲಿ 53 ವರ್ಷಗಳಿಂದ ಅಂಗವೈಕಲ್ಯದಿಂದ ಬಳಲುತ್ತಿದ್ದ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದ ತೀರ್ಥಹಳ್ಳಿ ತಾಲೂಕು ಕೆರೆಬೈಲ್ ನಿವಾಸಿ ಉದಯ ಅವರಿಗೆ ವೈದ್ಯಕೀಯ ಚಿಕಿತ್ಸೆ, ಮಾಸಾಶನ ನೀಡಲಾಯಿತು.
ವೈಯಕ್ತಿಕ ನೆರವು, ಸ್ಥಳದಲ್ಲೇ ಮಂಜೂರಾತಿ:ಹೊಸಪೇಟೆ ನಗರದಲ್ಲಿ ಸೋಮವಾರ ನಡೆದ ಜನತಾದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವೈಯಕ್ತಿಕ ಸಮಸ್ಯೆ ಹೇಳಿಕೊಂಡ ವೃದ್ಧೆ ಹಾಗೂ ವ್ಯಕ್ತಿಯೊಬ್ಬರಿಗೆ ಸಚಿವರು ವೈಯಕ್ತಿಕವಾಗಿ ಹಣಕಾಸಿನ ನೆರವು ನೀಡಿ, ಧೈರ್ಯ ತುಂಬಿದರು.
ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿ!!:ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಧಾರವಾಡ ಜಿಲ್ಲೆ ಕುಂದಗೋಳದ ಶಿಲ್ಪಿಯೊಬ್ಬರು ತಮಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸುವಂತೆ ಅಹವಾಲು ಸಲ್ಲಿಸಿದ್ದು ವಿಶೇಷವಾಗಿತ್ತು. ಪ್ರತ್ಯೇಕ ಸಂದರ್ಭ ಅರ್ಜಿ ಸಲ್ಲಿಸಲು ಸಚಿವರು ಸಲಹೆ ನೀಡಿದರು.
ಜೀವನಾಂಶಕ್ಕಾಗಿ ಮಕ್ಕಳ ವಿರುದ್ಧ ತಾಯಿ ದೂರು:ಮೈಸೂರುನಲ್ಲಿ ನಡೆದ ಜನತಾ ದರ್ಶನದಲ್ಲಿ ಗಂಡು ಮಕ್ಕಳು ಇದ್ದರೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಪ್ರತಿ ತಿಂಗಳು 5 ಸಾವಿರ ರೂ. ಜೀವನಾಂಶ ನೀಡಬೇಕು ಎಂದು ನ್ಯಾಯಾಲಯ ನೀಡಿರುವ ಆದೇವನ್ನು ಪಾಲಿಸುತ್ತಿಲ್ಲ ಎಂದು ತಾಯಿಯೇ ದೂರು ನೀಡಿ ಅವಲತ್ತುಕೊಂಡರು. ಈ ವೇಳೆ ಸಚಿವ ಡಾ.ಎಚ್.ಮಹದೇವಪ್ಪ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಗನ ಹೆಸರಿನಲ್ಲಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿದರು.
ಪೊಲೀಸರಿಂದಲೇ ಲಂಚಕ್ಕೆ ಬೇಡಿಕೆ:ವಿಜಯಪುರದಲ್ಲಿ ನಡೆದ ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಪೊಲೀಸರ ಲಂಚಾವತಾರದ ಬಗ್ಗೆ ಕಾಂಗ್ರೆಸ್ ಶಾಸಕರೇ ಅಳಲು ತೋಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ಬಂಜಾರ ಸಮುದಾಯದ ಮಹಿಳೆಯೊಬ್ಬರ ದೂರು ಸ್ವೀಕರಿಸಲು ಪೊಲೀಸರೇ ಹಣ ಕೇಳುತ್ತಿರುವ ವಿಚಾರವನ್ನು ಬಯಲು ಮಾಡಿದರು
ಹೆತ್ತಮ್ಮನನ್ನು ನೋಡಿಕೊಳ್ಳದ ಮಕ್ಕಳು!:ವಿಜಯಪುರ ಜಿಲ್ಲೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಇಬ್ಬರು ಪುತ್ರರು, ನಾಲ್ವರು ಪುತ್ರಿಯರಿದ್ದು, ಭೋಗಕ್ಕೆ ಜಮೀನಿದ್ದರೂ ಹೆತ್ತಮ್ಮನನ್ನು ನೋಡಿಕೊಳ್ಳದ ಪುತ್ರರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇವಿಎಂ ಒಡೆದಿದ್ದ ವ್ಯಕ್ತಿಯಿಂದಲೂ ದೂರು:ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಹೂಟಗಳ್ಳಿ ಮತಗಟ್ಟೆಯಲ್ಲಿ ಇವಿಎಂ ಮತಯಂತ್ರವನ್ನು ಒಡೆದು ಹಾಕಿ ಶಿಕ್ಷೆ ಅನುಭವಿಸಿದ್ದ ಎಂ.ಶಿವಮೂರ್ತಿ ಪೊಲೀಸರು ಹೆಲ್ಮೆಟ್ ಹಾಕದವರನ್ನು ಹಿಡಿದು ತೊಂದರೆ ಕೊಡುತ್ತಿದ್ದು, ದಂಡ ವಿಧಿಸುವುದಕ್ಕಿಂತ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
30 ಸಾವಿರ ರೂಪಾಯಿಗೆ ಬೇಡಿಕೆ:ನಂಜನಗೂಡು ತಾಲೂಕಿನ ಪರಮೇಶ್ ಅವರು, 10 ಗುಂಟೆಯಲ್ಲಿ ಬೆಳೆದಿದ್ದ ಟೊಮ್ಯಾಟೋ ನಾಶವಾಗಿದ್ದಕ್ಕೆ 30 ಸಾವಿರ ರೂ. ಪರಿಹಾರ ಕೇಳಿದ್ದಕ್ಕೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಚ್ಚರಿ ವ್ಯಕ್ತಪಡಿಸಿ, ಸುಳ್ಳು ಹೇಳದಂತೆ ವ್ಯಕ್ತಿಗೆ ಬುದ್ಧಿವಾದ ಹೇಳಿದರು.
ಶಾಸಕರ ಪುತ್ರಿಯಿಂದ ಅಹವಾಲು:ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸೋಮವಾರ ನಡೆದ ಜನತಾ ದರ್ಶನದಲ್ಲಿ ಶಾಸಕ ಎಚ್. ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಸಚಿವರ ಎದುರು ಸಾರ್ವಜನಿಕ ಮಹಿಳಾ ಶೌಚಗೃಹ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡರು. ನನ್ನ ತಂದೆಯವರೇ ಶಾಸಕರಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಶೌಚಗೃಹ ಸಮಸ್ಯೆ ಇದೆ. ಹಲವು ವರ್ಷಗಳಿಂದ ಬಗೆಹರಿದಿಲ್ಲ. ಇದಕ್ಕಾಗಿ ಸಾಕಷ್ಟು ಸಲ ಅಲೆದಾಡಿದ್ದೇವೆ. ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ ಎಂದು ಬಾಯಕ್ಕ ಮೇಟಿ ಸಚಿವರ ಗಮನಕ್ಕೆ ತಂದರು.
ಅವ್ಯವಸ್ಥೆಯ ಆಗರವಾದ ಜನತಾ ದರ್ಶನ:ಹಾವೇರಿ ಜಿಲ್ಲೆಯಲ್ಲಿ ನಡೆದ ಜನತಾ ದರ್ಶನ ಅವ್ಯವಸ್ಥೆಯ ಆಗರವಾಗಿತ್ತು. ಅಹವಾಲು ಸಲ್ಲಿಸಲು ನೂಕುನುಗ್ಗಲು ಉಂಟಾಗಿತ್ತು. ಜನಸಾಗರ ಕಂಡು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ದಂಗಾಗಿ ಹೋದರು. ಜನತಾ ದರ್ಶನದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾವಿರಾರು ಜನ ಆಗಮಿಸಿದ್ದರು. ಅರ್ಜಿ ಸ್ವೀಕರಿಸಲು 13 ಕೌಂಟರ್ ತೆರೆಯಲಾಗಿತ್ತು. ಆರಂಭದಲ್ಲಿ ಹಲವು ಅರ್ಜಿ ಸ್ವೀಕರಿಸಲಾಯಿತು. ನಂತರ ಜನದಟ್ಟಣೆ ಹೆಚ್ಚಾದ್ದರಿಂದ ಅರ್ಜಿ ಸ್ವೀಕರಿಸಲಾಗದೇ ಅಧಿಕಾರಿ, ಸಿಬ್ಬಂದಿ ಮಧ್ಯಾಹ್ನ ಹೊತ್ತಿಗೆ ಕೌಂಟರ್ ಬಂದ್ ಮಾಡಿದರು!
ಮದುವೆಗೆ ಹೆಣ್ಣು ಸಿಕ್ತಿಲ್ಲ!:ರಾಷ್ಟ್ರೀಯ ಹೆದ್ದಾರಿಗೆ ಭೂಮಿ ನೀಡಿದ್ದಕ್ಕೆ ಪರಿಹಾರ ಕೊಟ್ಟಿಲ್ಲ. ಇದರಿಂದ 40 ವರ್ಷ ವಯಸ್ಸಿನ ನನಗೆ ಮನೆ ಇಲ್ಲ. ಬೀದಿಯಲ್ಲಿ ನಿಂತಿರುವವನಿಗೆ ಯಾರೂ ಹೆಣ್ಣು ಕೊಡ್ತಿಲ್ಲ ಎಂದು ಸೈಯದ್ ನಾಸಿರ್ ಅಳಲು ತೋಡಿ ಕೊಂಡರು. ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನದಲ್ಲಿ ನಾಸಿರ್ ದುಃಖ ತೋಡಿಕೊಂಡರು. ಇದಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಪ್ರತಿಕ್ರಿಯಿಸಿ, ಪರಿಹಾರ ಒದಗಿಸಿ ಕೊಡಲು ಕ್ರಮ ವಹಿಸುವುದಾಗಿ ಹೇಳಿದರು.
ಬೆಂಗಳೂರು-ಮೈಸೂರು ದಶಪಥದಲ್ಲಿ ಆರು ಕಾರುಗಳು ಮಧ್ಯೆ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

ನಾಳೆ ಇಡೀ ಬೆಂಗಳೂರು ಬಂದ್ ಆಗ್ಬೇಕು; ಅದಾಗ್ಯೂ ವ್ಯಾಪಾರ ಮಾಡಿದ್ರೆ ಮುಂದಾಗುವ ತೊಂದರೆಗೆ ನೀವೇ ಹೊಣೆ: ಬಿಎಸ್​ವೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
