ಬೆಂಗಳೂರು:ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ ಮಾಡಿ ಜಾತ್ಯತೀತ ಜನತಾ ದಳ ಹಮ್ಮಿಕೊಂಡಿರುವ ಜನತಾ ಜಲಧಾರೆ-ಗಂಗಾ ರಥಯಾತ್ರೆಗೆ ಶನಿವಾರ ಚಾಲನೆ ಸಿಗಲಿದೆ. ಬೆಳಗ್ಗೆ 11ಕ್ಕೆ ರಾಜ್ಯದ 15 ಜೀವ ನದಿಗಳ ಪುಣ್ಯಜಲವನ್ನು ಕಲಶಕ್ಕೆ ತುಂಬಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ಈಗಾಗಲೆ ಹದಿನೈದು ಗಂಗಾ ರಥಗಳು ನಿಗದಿತ ಸ್ಥಳಗಳನ್ನು ತಲುಪಿದ್ದು, ಆಯಾ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಶಾಸಕರು, ಕಾರ್ಯಕರ್ತರು ಅವುಗಳನ್ನು ಬರ ಮಾಡಿಕೊಂಡಿದ್ದಾರೆ.
ಶನಿವಾರ ಬೆಳಗ್ಗೆ ವೇದ ಮಂತ್ರ ಘೊಷಣೆ, ಪೂಜೆ, ಮಂಗಳ ವಾದ್ಯಗಳ ಸದ್ದು, ಕಲಾ ತಂಡಗಳ ಮೆರವಣಿಗೆ, ಕಲಶ ಪೂಜೆ, ಪಕ್ಷದ ಕಾರ್ಯಕರ್ತೆಯರಿಂದ ಕಲಶ ಮೆರವಣಿಗೆ ಇತ್ಯಾದಿಗಳ ನಡುವೆ ಪುಣ್ಯಜಲವನ್ನು ಸಂಗ್ರಹ ಮಾಡಲಾಗುವುದು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದಲ್ಲಿ ಕಾವೇರಿ ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಜಲಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಇದಲ್ಲದೆ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಸನ ಜಿಲ್ಲೆಯ ಹೇಮವತಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಥದ ಉತ್ತರ ಪಿನಾಕಿನಿ ನದಿಯಲ್ಲಿ ಜಲ ಸಂಗ್ರಹ ಮಾಡಲಿದ್ದಾರೆ. ಶಾಸಕಿ ಅನಿತಾ ಕುಮಾರಸ್ವಾಮಿ ಮೇಕೆದಾಟುನಲ್ಲಿ ಕಾವೇರಿ ನದಿ ನೀರು ಸಂಗ್ರಹ ಮಾಡಲಿದ್ದಾರೆ.
ಒಟ್ಟು 94 ಕಡೆ ಜಲ ಸಂಗ್ರಹ:ಮೇ 8ರವರೆಗೂ ನಡೆಯಲಿರುವ ಜಲಧಾರೆ ಕಾರ್ಯಕ್ರಮ ದಲ್ಲಿ ಒಟ್ಟು 94 ಕಡೆ ಜಲ ಸಂಗ್ರಹ ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜ್ಯದ 180ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಜಲಧಾರೆಯ ಗಂಗಾ ರಥಗಳು ಹಾದು ಹೋಗಲಿವೆ ಎಂದು ಹೇಳಿದ್ದಾರೆ.
ಕಚೇರಿಯಲ್ಲಿ ಡಿಜಿಟಲ್ ಪರದೆ:15 ಕಡೆಗಳಲ್ಲಿ ನಾಯಕರೆಲ್ಲರೂ ಜಲ ಸಂಗ್ರಹ ಮಾಡುವ ನೇರ ದೃಶ್ಯಾವಳಿ ನೋಡಲು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬೃಹತ್ ಡಿಜಿಟಲ್ ಪರದೆ ಅಳವಡಿಸಲಾಗಿದೆ. ಎಲ್ಲ ಪುಣ್ಯ ನದಿಗಳ ನೀರು ಸಂಗ್ರಹ ಮಾಡುವ ಪವಿತ್ರ ಕಾರ್ಯವು ಏಕಕಾಲದಲ್ಲಿ ನಡೆಯಲಿದ್ದು, ಆ ಅಪರೂಪದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಾವು ಹಾಳಾಗುವುದಲ್ಲದೆ ಅವರನ್ನು ನಂಬಿದವರನ್ನೂ ಹಾಳು ಮಾಡುತ್ತಿದ್ದಾರೆ. ಅವರಿಗೆ ರಾಜಕೀಯ ಮಾಡುವುದೇ ಬದುಕು. ಜೆಡಿಎಸ್​ಗೆ ಕಾಣುವುದು ಕುಮಾರಸ್ವಾಮಿ ಮತ್ತು ಕುಟುಂಬ ಅಷ್ಟೇ. ನಮ್ಮ ಪಕ್ಷದಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು. ಆದರೆ ಜೆಡಿಎಸ್​ನವರು ದಲಿತ ಸಿಎಂ ಮಾಡುತ್ತೇವೆ ಎನ್ನುವುದು ಕೂಡ ನಾಟಕ.
|ಡಾ.ಸಿ.ಎನ್.ಅಶ್ವತ್ಥನಾರಾಯಣಉನ್ನತ ಶಿಕ್ಷಣ ಸಚಿವ
ಹಾಸನ:ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏ.17ರಂದು ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ ಎಚ್.ಕೆ.ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರಿಟ್ಟರು. ಸಕಲೇಶಪುರದಲ್ಲಿ ಶುಕ್ರವಾರ ಮಾತನಾಡಿ, ನಾನು ರಾಜೀನಾಮೆ ಸಲ್ಲಿಸುವ ಕುರಿತು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ರ್ಚಚಿಸಿದ್ದೇನೆ. ಪಕ್ಷ ಸಂಘಟನೆ, ಅಭಿವೃದ್ಧಿಗೆ ಸಹಾಯ ಆಗುವುದಾದರೆ ನಾನು ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ. ಶಾಸಕನಾಗಿರುವ ನನಗೆ ಕ್ಷೇತ್ರದ ಕೆಲಸಗಳೂ ಮುಖ್ಯವಾಗುತ್ತದೆ ಎಂದರು.
ಸಿಎಂ ಇಬ್ರಾಹಿಂ ಕೈಗೆ ದಳದ ಬಾವುಟ:ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಏ.17 ರಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ಜೆ.ಪಿ. ಭವನದಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಎಚ್.ಕೆ.ಕುಮಾರಸ್ವಾಮಿ ಅವರಿಗೆ ಸಂಸದೀಯ ಮಂಡಳಿ ಅಧ್ಯಕ್ಷ ಜವಾಬ್ದಾರಿಯನ್ನು ನೀಡಲಾಗುತ್ತದೆ.
ಮಾಂಜ್ರಾ ನದಿ- ಬಂಡೆಪ್ಪ ಖಾಶೆಂಪುರ; ಭೀಮಾ ನದಿ- ನಾಗನಗೌಡ ಕಂದಕೂರ; ತುಂಗಭದ್ರಾ ಜಲಾಶಯ- ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಎನ್.ಎಂ.ನಬಿ; ಕೊಟ್ಟಿಗೆಹಾರ ಬಳಿ ಹೇಮಾವತಿ ನದಿ- ಭೋಜೆಗೌಡ, ವೈ.ಎಸ್.ವಿ. ದತ್ತ; ಕಾಳಿ ನದಿ- ಗಣಪಯ್ಯ ಹೆಗಡೆ, ಶಶಿ ಭೂಷಣ ಹೆಗಡೆ, ಯೋಗೇಶ್ ಶೆಟ್ಟಿ, ಸುಧಾಕರ್ ಶೆಟ್ಟಿ; ಸೌಪರ್ಣಿಕಾ ನದಿ -ಯೋಗೇಶ್ ಶೆಟ್ಟಿ; ತಲಕಾವೇರಿ – ಸಾ.ರಾ.ಮಹೇಶ್; ಕಬಿನಿ ನದಿ- ಅಶ್ವಿನ್ ಕುಮಾರ್, ಮಂಜೇಗೌಡ, ಚಿಕ್ಕಣ್ಣ; ಎತ್ತಿನಹೊಳೆ – ಎಚ್.ಕೆ.ಕುಮಾರಸ್ವಾಮಿ, ಶಿವಲಿಂಗೇಗೌಡ, ಲಿಂಗೇಶ್, ನಿಖಿಲ್ ಕುಮಾರಸ್ವಾಮಿ, ಕೆ.ಎಂ.ಕೃಷ್ಣಾರೆಡ್ಡಿ, ಗೋವಿಂದ ರಾಜು.
ಪರಿಶಿಷ್ಟರಿಗೆ ಗಾಳ:ದಲಿತ ಸಿಎಂ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಎಚ್​ಡಿಕೆ ಈ ವಿಷಯವನ್ನು ರಾಜಕೀಯ ಪಡಸಾಲೆಗೆ ಎಳೆ ತಂದಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಪ್ರಕಾರ ರಾಜ್ಯದಲ್ಲಿ ಪ.ಜಾತಿ ಜನಸಂಖ್ಯೆ 1.08 ಕೋಟಿ ಆಗಿದೆ. ಹಾಗಾಗಿ ಈ ಸಮುದಾಯದ ಮತಗಳ ಮೇಲೆ ಕುಮಾರಸ್ವಾಮಿ ಕಣ್ಣು ಹಾಕಿ, ಈ ದಾಳ ಉರುಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
