ಬೆಂಗಳೂರು:ಆಡಳಿತ, ಅಭಿವೃದ್ಧಿಗೆ ವೇಗದ ಸ್ಪರ್ಶ, ಪಕ್ಷದಲ್ಲಿ ಹುರುಪು ತುಂಬಲು ಉದ್ದೇಶಿತ ‘ಜನೋತ್ಸವ’ ಸಮಾವೇಶಗಳಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮತ್ತೆ ತಯಾರಿ ನಡೆಸಿದೆ. ದೊಡ್ಡಬಳ್ಳಾಪುರದಲ್ಲೇ ಆ.28ರಂದು ರಾಜ್ಯಮಟ್ಟದ ಸಮಾವೇಶ ಉದ್ಘಾಟನಾ ಸಮಾರಂಭ ನಿಗದಿಗೆ ತೀರ್ವನಿಸಲಾಗಿದ್ದು, ಅಗತ್ಯ ಸಿದ್ಧತೆಗೆ ಸೂಚಿಸಲಾಗಿದೆ. ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕಾರಣಕ್ಕೆ ಇದೇ ಸ್ಥಳದಲ್ಲಿ ಜು.28ರಂದು ಏರ್ಪಡಿಸಿದ್ದ ಸಮಾವೇಶವು ಕೊನೇ ಘಳಿಗೆಯಲ್ಲಿ ರದ್ದಾಗಿತ್ತು.
ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ವಿವಿಧ ಯೋಜನೆಗಳ ಫಲಾನುಭವಿಗಳು ಸೇರಿಕೊಂಡು ‘ಹಬ್ಬ’ದ ರೀತಿಯಲ್ಲಿ ಸಾಧನಾ ಸಮಾವೇಶ ಸಂಘಟಿಸಲಿದ್ದಾರೆ ಎಂದು ಸರ್ಕಾರ ಬಿಂಬಿಸಿಕೊಂಡಿದೆ. ಕೇಂದ್ರ ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಮಾಹಿತಿ ಹಂಚಿಕೆ. ಜತೆಗೆ ರಾಜ್ಯ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳು, ಅಭಿವೃದ್ಧಿ ಪ್ರಚಾರವೇ ಈ ಸಮಾವೇಶದ ತಿರುಳು. ಕರೊನಾ ಸಂಕಷ್ಟ ಬಳಿಕ ರಾಜ್ಯದ ಅಭಿವೃದ್ಧಿ, ಆರ್ಥಿಕತೆ ಮತ್ತೆ ಹಳಿಗೆ ತರಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಮಾಡಿದ ಕೆಲಸಗಳ ‘ರಿಪೋರ್ಟ್ ಕಾರ್ಡ್’ ಜನರ ಮುಂದಿಡುತ್ತೇವೆ ಎಂದು ಸಿಎಂ, ಸಚಿವರು ಹೇಳಿಕೊಂಡಿದ್ದಾರೆ. ‘ಮಿಷನ್ ದಕ್ಷಿಣ’ ಅಭಿಯಾನ ಭಾಗವಾಗಿ ಹಳೇ ಮೈಸೂರು ಭಾಗದಿಂದ ಸಮಾವೇಶಕ್ಕೆ ಚಾಲನೆ ನೀಡಿ, ಆ ಮೂಲಕ ಸಂಘಟನೆ ಬಲಪಡಿಸಲು ಪಕ್ಷದ ನಾಯಕರು ಯೋಚಿಸಿದ್ದಾರೆ. ದೊಡ್ಡಬಳ್ಳಾಪುರ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಭಾಗಶಃ ಬೆಂಗಳೂರು ನಗರ ಜಿಲ್ಲೆಯ ಲಕ್ಷಾಂತರ ಜನರನ್ನು ಸೇರಿಸಿ ಜನಬಲ ಪ್ರದರ್ಶನಕ್ಕೆ ಕಮಲ ಪಡೆ ಉತ್ಸುಕವಾಗಿದೆ.
ಜನರ ಒತ್ತಾಸೆಗೆ ಸ್ಪಂದಿಸಿ ನಿರ್ಧಾರ:ಜನರ ಉತ್ಸಾಹ, ಒತ್ತಾಸೆ, ಒತ್ತಡ, ಸಚಿವರ ಅಪೇಕ್ಷೆಗೆ ತಲೆಬಾಗಿ ದೊಡ್ಡಬಳ್ಳಾಪುರದಿಂದಲೇ ಜನೋತ್ಸವಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಆ.28ರಂದು ಸಮಾವೇಶದ ಉದ್ಘಾಟನಾ ಸಮಾರಂಭ ನೆರವೇರಲಿದೆ. ಇದಕ್ಕೂ ಮೊದಲು ರಾಜ್ಯದ 4-5 ಸ್ಥಳಗಳಲ್ಲಿ ಸಮಾವೇಶ ನಡೆಸಿದ ನಂತರ ದೊಡ್ಡಬಳ್ಳಾಪುರದಲ್ಲಿ ಸಮಾರೋಪ ಆಯೋಜಿಸಲು ಯೋಚಿಸಿದ್ದೆವು. ಆದರೆ ಎಲ್ಲಿಂದ ಹೆಜ್ಜೆಯಿರಿಸಬೇಕೆಂದಿರುವಿರೋ ಅಲ್ಲಿಂದಲೇ ಆರಂಭವಾಗಲಿ. ಸರ್ಕಾರದ ಮೂರು ವರ್ಷಗಳ ಸಾಧನೆ ಬಗ್ಗೆ ಉತ್ಸವದ ಮೂಲಕ ಸಂಭ್ರಮಿಸಲು ಜನರು ತಯಾರಾಗಿದ್ದಾರೆ. ಎಲ್ಲ ಸಿದ್ಧತೆಗಳನ್ನು ಮಾಡಲಿದ್ದೇವೆ. ಮುಂದೂಡಿಕೆ ಕಾರಣ ಅರ್ಥ ಮಾಡಿಕೊಂಡಿದ್ದೇವೆ ಎಂದು ಆ ಭಾಗದ ಜನರು, ಸಚಿವ ಡಾ.ಕೆ.ಸುಧಾಕರ್ ಇನ್ನಿತರರು ಮನವಿ ಮಾಡಿಕೊಂಡ ಕಾರಣ ದೊಡ್ಡಬಳ್ಳಾಪುರದಲ್ಲೇ ಆಯೋಜನೆಗೆ ಸಮ್ಮತಿಸಲಾಗಿದೆ ಎಂದರು. ರಾಜ್ಯದ 4-5 ಸ್ಥಳಗಳಲ್ಲಿ ಸಮಾವೇಶ ಏರ್ಪಡಿಸಲು ಯೋಚಿಸಿದ್ದು, ಸಮಾವೇಶದ ಸಮಾರೋಪ ಸ್ಥಳ ಇನ್ನೂ ಅಂತಿಮವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಅವಧಿ ಮುಗಿದ ಕೂಡಲೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ. ಆದರೆ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಎನ್ನುವುದು ಪ್ರತಿಪಕ್ಷಗಳು ಸೃಷ್ಟಿಸುತ್ತಿರುವ ಊಹಾಪೂಹ. ಇದಕ್ಕೆ ಯಾವುದೇ ಆಧಾರವಿಲ್ಲ.
|ಬಿ.ಎಸ್. ಯಡಿಯೂರಪ್ಪಮಾಜಿ ಮುಖ್ಯಮಂತ್ರಿ
‘ಕಾವೇರಿ’ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಮರು ದಿನವೇ ಸಿಎಂ ಬಸವರಾಜ ಬೊಮ್ಮಾಯಿ ‘ಜನೋತ್ಸವ’ ನಿರ್ಧಾರ ಪ್ರಕಟಿಸಿದ್ದಾರೆ. ಮುಂದೂಡಿಕೆಯಾದ ಸಮಾವೇಶ, ಜನರ ಮುಂದಿಡಬೇಕಾದ ಸಾಧನೆಗಳ ಬಗ್ಗೆ ರ್ಚಚಿಸಿ ಒಪ್ಪಿಗೆ ಪಡೆದ ನಂತರ ಹೆಜ್ಜೆ ಮುಂದಿಟ್ಟಿದ್ದಾರೆ. ಕಳೆದ ಬಾರಿ ಸಮಾವೇಶ ರದ್ದಾದ ಬಳಿಕ ಬಿಎಸ್​ವೈ ಅವರನ್ನು ಬೊಮ್ಮಾಯಿ ಭೇಟಿಯಾಗಿದ್ದಿಲ್ಲ. ಅಮಿತ್ ಷಾ ಬೆಂಗಳೂರಿಗೆ ಬಂದಾಗ ಬಿಎಸ್​ವೈ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಕಾರ್ಯಕರ್ತರ ಬಳಿಗೆ ತೆರಳಲು, ಸಂಘಟನೆ ಬಲವರ್ಧನೆಗೆ ಸಮಾವೇಶಗಳ ಅಗತ್ಯತೆಯನ್ನು ಇದೇ ಸಂದರ್ಭದಲ್ಲಿ ಷಾ ಅವರಿಗೆ ಬಿಎಸ್​ವೈ ಮನವರಿಕೆ ಮಾಡಿಕೊಟ್ಟಿದ್ದರು. ಕರೊನಾ ಸೋಂಕಿನಿಂದ ಬೊಮ್ಮಾಯಿ ಗುಣಮುಖರಾದ ಬಳಿಕ ಬಿಎಸ್​ವೈ ಭೇಟಿಯಾಗಿ ರ್ಚಚಿಸಿ, ಅವರ ಸಲಹೆಯಂತೆ ಸಮಾವೇಶ ಏರ್ಪಡಿಸಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 15 =
Remember me
