ಬೆಂಗಳೂರು:ಮಾಜಿ ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಬಿಟ್ಟಾಗ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಇದೀಗ ಚುನಾವಣೆ ಹತ್ತಿರದಲ್ಲಿದ್ದು ಕೆಆರ್​ಪಿಪಿ ಪಕ್ಷ ತನ್ನ ಪ್ರಣಾಳಿಕೆಯನ್ನು ಮುಂದಿಟ್ಟಿದೆ. ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳ ಹೆಸರಲ್ಲಿ ನಾನಾ ಯೋಜನೆಗಳನ್ನು ಬಿಡುಗಡೆ ಮಾಡಲಾಗಿದೆ.
ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿದ ರೈತರಿಗೆ ವಾರ್ಷಿಕ ರೂ.5,000/-ಗಳ ಬಂಡವಾಳದ ನೆರವು ನೀಡಲಾಗುವುದು. ಈ ಯೋಜನೆಯಡಿ ದಿನನಿತ್ಯ ರೈತರಿಗೆ ನಿರಂತರವಾಗಿ ಉಚಿತ 9 ಗಂಟೆ ವಿದ್ಯುಚ್ಛಕ್ತಿ ಸರಬರಾಜು ಮಾಡಲಾಗುವುದು. ಪ್ರತಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ರೈತ ಭರವಸೆ ಕೇಂದ್ರವನ್ನು ಸ್ಥಾಪಿಸಿ ಪ್ರತಿ ರೈತರ ಮನೆ ಮನೆಗಳ ಬಾಗಿಂಗೆ ರಸಗೊಬ್ಬರ, ಬೀಜಗಳನ್ನು ವಿತರಿಸಲಾಗುವುದು. ರೈತರು ಬೆಳೆದ ಬೆಳೆಗೆ ಕೇಂದ್ರ ಸರ್ಕಾರ ನೀಡುವ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದಿಂದ ಪ್ರತಿ ಕ್ವಿಂಟಾಲ್‌ಗೆ ರೂ.100/-ಗಳ ಬೆಂಬಲ ಬೆಲೆ. ಬೆಳೆಯ ವಿಮೆಯ ಬಗ್ಗೆ ರೈತರಿಗೆ ಚಿಂತ ಬೇಡ, ವಿಮಯ ಕಂತನ್ನು ಸರ್ಕಾರವೇ ಭರಿಸುವುದು. ಬಡ್ಡಿ ರಹಿತ ಬೆಳೆಯ ಸಾಲವನ್ನು ನೀಡಲಾಗುವುದು. 5 ಎಕರೆವರೆಗೆ ಜಮೀನು ಹೊಂದಿರುವ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಬೋರ್ವೆಲ್ ಅನ್ನು ನೀಡಲಾಗುವುದು.
ಪ್ರತಿ ತಾಲೂಕಿನಲ್ಲೂ ಶೀತಲ ಶೇಖರಣೆ ಉಗ್ರಾಣಗಳನ್ನು ನಿರ್ಮಾಣ, ಪ್ರತಿಕ್ಷೇತ್ರದಲ್ಲೂ ಆಹಾರ ಸಂಸ್ಕರಣೆ ಅವಶ್ಯವಿದ್ದಲ್ಲಿ ನಿರ್ಮಾಣ ಮಾಡುವುದು. ಆ ಕೃಷಿ ಟ್ರ್ಯಾಕ್ಟರ್‌ಗಳಗೆ ಟೋಲ್ ತೆರಿಗೆ ಮತ್ತು ರಸ್ತೆ ತೆರಿಗೆಯನ್ನು ಮನ್ನಾ ಮಾಡಲಾಗುವುದು.
ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 7 ಲಕ್ಷ ರೂ. ಪರಿಹಾರ. ಸಾಲ ನೀಡಿದವನ ಕೈಗೆ ಮೊತ್ತ ಸೇರದಂತೆ ವಿಧಾನಸಭೆಯಲ್ಲಿ ಕಾಯಿದೆ ಅಂಗೀಕರಿಸಲಾಗುವುದು ಮತ್ತು ಮೃತ ರೈತ ಕುಟುಂಬದ ಪರವಾಗಿ ಸರ್ಕಾರ ನಿಲ್ಲುವುದು.

ವಾರ್ಷಿಕ ಆದಾಯ ರೂ.5 ಲಕ್ಷ ಗಿಂತ ಕಡಿಮೆ ಇರುವ ಎಲ್ಲಾ ವರ್ಗಗಳಗೆ ಆರೋಗ್ಯಶ್ರೀ ಒದಗಿಸಲಾಗುವುದು. ರೂ.1000/- ಗಿಂತ ಅಧಿಕ ವೆಚ್ಚದಲ್ಲಿ ಆರೋಗ್ಯಶ್ರೀ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವುದು. ಆರೋಗ್ಯ ಶ್ರೀ ಚಿಕಿತ್ಸೆಯು ರೂ.20 ಲಕ್ಷ ವೆಚ್ಚದ ವರೆಗೆ ಹೊರ ರಾಜ್ಯಾದ್ಯಂತ (ಹೈದರಾಬಾದ, ಚೆನ್ನೈ, ಮುಂಬೈ, ದೆಹಲಿ) ಅನ್ವಯಿಸುತ್ತದೆ.
ಎಲ್ಲಾ ರೋಗಗಳು ಮತ್ತು ಶಸ್ತ್ರಚಿಕಿತ್ಸೆ ಆರೋಗ್ಯಶ್ರೀ ಅಡಿಯಲ್ಲಿ ಒಳಪಡಿಸಲಾಗುವುದು. ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯ ನಂತರ ವಿಶ್ರಾಂತಿ ಸಮಯದಲ್ಲಿ ವ್ಯಕ್ತಿಯ ಕುಟುಂಬಕ್ಕೆ ಹಣಕಾಸಿನ ನೆರವು. ಕಿಡ್ನಿ, ಫಲಸ್ಸೆಮಿಯಾ ಮತ್ತು ಪೆರಿನಿಯಲ್ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಗೆ ತಿಂಗಳಿಗೆ ರೂ 10,000/- ಪಿಂಚಣಿ ನೀಡಲಾಗುತ್ತದೆ.
ಉತ್ತಮ ಆರೋಗ್ಯ ಶ್ರೀ ಚಿಕಿತ್ಸೆಗಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಸರಿಸಮನಾಗಿ ಎರಡು ವರ್ಷಗಳಲ್ಲಿ ಆಧುನೀಕರಿಸಲಾಗುವುದು. ಅಗತ್ಯಕ್ಕೆ ತಕ್ಕಂತ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಲಾಗುವುದು.

ಗೃಹಿಣಿಯರಿಗೆ ಮಾಸಿಕ ರೂ.2,500/-ಗಳ ಆರ್ಥಿಕ ನೆರವು. ಒಂಟಿಯಾಗಿ ಜೀವಿಸುವ ಮಹಿಳೆಯರಿಗೆ ಮಾಸಿಕ ರೂ.2,500/- ನೆರವು. ಶೂನ್ಯ ಬಡ್ಡಿ ದರದಲ್ಲಿ ಪ್ರತಿ ಸ್ವಸಹಾಯ ಗುಂಪಿಗೆ ರೂ.10 ಲಕ್ಷ ದವರೆಗೆ ಸಾಲ.

ಪ್ರತಿ ಮನೆಗೂ 250 ಯೂನಿಟ್ ಉಚಿತ ವಿದ್ಯುತ್. ಪ.ಜಾ/ಪ.ಪಂ ಜನರಿಗೆ ಉಚಿತ ನಿವೇಶನಗಳು. ಸಫಾಯಿ ಕರ್ಮಚಾರಿಗಳಿಗೆ/ಪೌರ ಕಾರ್ಮಿಕರಿಗೆ ಮನೆಗಳ ನಿರ್ಮಾಣ. ಕೆ.ಆರ್.ಐ.ಈ.ಎಸ್. ವಸತಿ ಶಾಲೆಗಳಲ್ಲಿ ಆಟದ ಸೌಲಭ್ಯಗಳು. ಪ.ಹಾ ಮತ್ತು ಪ.ಪಂ.ದ ಜನರ ಭೂಮಿಗಳಿಗೆ ಪಿಟಿಸಿಎಲ್ ಕಾಯ್ದೆ ಅಡಿ ರಕ್ಷಣೆ. ಎಲ್ಲಾ ಜಿಲ್ಲೆಗಳಲ್ಲಿ ಪ.ಜಾ/ಪ.ಪಂ ವಿದ್ಯಾರ್ಥಿಗಳಗೆ ಮೆಟ್ರಿಕ್ ನಂತರ ವಸತಿ ನಿಲಯಗಳಿಗೆ ಅನುದಾನ. ವಿದ್ಯುಚ್ಛಕ್ತಿ ಚಾಲಿತ ವಾಹನ (3 ಅಥವಾ 4 ಚಕ್ರಗಳ) ಗಳನ್ನು ಖರೀದಿಸಲು ಸಹಾಯ ಧನ.

ನಿರುದ್ಯೋಗಿ ಯುವಕರಿಗೆ ಮಾಸಿಕ ರೂ.2,500/- ನಿರುದ್ಯೋಗ ಭತ್ಯೆ ನೀಡಲಾಗುವುದು. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಮಾಡಲಾಗುವುದು. ಎಲ್ಲಾ ತಾಲೂಕುಗಳಲ್ಲಿ ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯ ಮತ್ತು ಮಿನಿ ಕ್ರೀಡಾಂಗಣಗಳೊಂದಿಗೆ ಕ್ರೀಡಾ ತರಬೇತಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಶುಲ್ಕ ಪಾವತಿಸುವ ನಿಯಮವನ್ನೂ ತೆಗೆದು ಹಾಕಲಾಗುವುದು.

ಹೆಣ್ಣು ಮಕ್ಕಳ ಹೆಸರಿನಲ್ಲಿ ನಿವಾಸರಹಿತ ಕುಟುಂಬಗಳಿಗೆ 2 ಕೊಠಡಿಯ ನಿವಾಸ (2 ಬಿಎಚ್‌ಕೆ). ಸ್ವಂತ ನಿವೇಶನ ಸ್ಥಳ ಹೊಂದಿದ ಅರ್ಹರಿಗೆ ರೂ.3 ಲಕ್ಷಗಳ ಹಣಕಾಸಿನ ನೆರವು

ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ವೇತನ. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ, ದುಡಿಯುವ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣದ ಸೌಲಭ್ಯ. ಪ್ರಮುಖ ದುಡಿಮೆ ಕ್ಷೇತ್ರ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಯ ಬದ್ಧ ಮಹಿಳಾ ಬಸ್ ಸೇವೆ ಮಹಿಳೆಯರ ಭದ್ರತೆಗಾಗಿ ಹೊಸ ಮಹಿಳಾ ಪೋಲೀಸ್ ತಂಡಗಳ ಸ್ಥಾಪನೆ ಮಾಡಲಾಗುವುದು.
ಸರಳ ಮತ್ತು ಕೈಗೆ ಎಟಕುವ ಸಾಲಗಳ ಮೂಲಕ ಮಹಿಳೆಯರಲ್ಲಿ ಉದ್ಯಮ ಶೀಲತೆ ಪ್ರೋತ್ಸಾಹಿಸಲು ಮತ್ತು ಅವರ ಪ್ರಯತ್ನಗಳನ್ನು ಬೆಂಬಅಸಲು “ಮಹಿಳಾ ಉದ್ಯಮಶೀಲತಾ ಕೇಂದ್ರಗಳ ಸ್ಥಾಪನೆ ಮತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.1,000/- ವೇತನವನ್ನು ಹೆಚ್ಚಿಸಲಾಗುವುದು.

ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ಮೂಲಸೌಕರ್ಯ. ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಗೆ ಕೆ.ಜಿ ಯಿಂದ ಪಿ.ಜಿ.ವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ಮಾದರಿ ಭೌತಿಕ ರಚನೆ ಮತ್ತು ಸೌಕರ್ಯಗಳನ್ನೊಳಗೊಂಡ ಮಾದರಿ ವಸತಿ ನಿಲಯಗಳ ನಿರ್ಮಾಣ, ಉನ್ನತ ಶಿಕ್ಷಣ ಪೂರೈಸಲು ನೆರವಾಗುವ ಬಸವಣ್ಣ ವಿದ್ಯಾರ್ಥಿ ವಸತಿ ನಿಲಯಗಳ ನಿರ್ಮಾಣ, ಉನ್ನತ ಶಿಕ್ಷಣ ಪೂರೈಸಲು ನೆರವಾಗುವ ಬಸವಣ್ಣ ಕ್ರೆಡಿಟ್ ಕಾರ್ಡ್ ಮತ್ತು ವಿದೇಶಿ ವ್ಯಾಸಂಗ ಸಾಲವನ್ನು ಬಡ್ಡಿ ರಹಿತವಾಗಿ ರೂ.20 ಲಕ್ಷದವರೆಗೆ ನೆರವು ನೀಡಲಾಗುವುದು.

ಪ್ರತಿ ಎಕರೆಗೆ ನೀರಿನ ಸರಬರಾಜು, ಹೊಸ ಜಲಸಂಗ್ರಹಾಲಯಗಳ ನಿರ್ಮಾಣ, ಏತ ನೀರಾವರಿ ಯೋಜನೆಗಳು ಮತ್ತು ಹೊಸ ಕಾಲುವೆಗಳ ನಿರ್ಮಾಣ ಮತ್ತು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಕುಡಿಯುವ ನೀರಿನ ಟ್ಯಾಂಕ್‌ಗಳ ನಿರ್ಮಾಣ ಮತ್ತು ಚಾಲ್ತಿಯಲ್ಲಿರುವ ಟ್ಯಾಂಕ್‌ಗಳನ್ನು ಮೇಲ್ದರ್ಜೆಗೇರಿಸಲಾಗುವುದು.

ವೃದ್ಧಾಪ್ಯ ವೇತನವನ್ನು ರೂ.1200 ರಿಂದ 1500 ರವರೆಗೆ ಹೆಚ್ಚಿಸಲಾಗುವುದು. ವಿಕಲ ಚೇತನರು/ ಬುದ್ಧಿಮಾಂಧ್ಯರಿಗೆ ಮಾಸಿಕ ರೂ.2000/-ಗಳ ಪಿಂಚಣಿಯನ್ನು ನೀಡಲಾಗುವುದು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + five =
Remember me
