| ರುದ್ರಣ್ಣ ಹರ್ತಿಕೋಟೆ ಬೆಂಗಳೂರುತಂತ್ರಜ್ಞಾನವನ್ನು ಬಳಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಆರ್ಥಿಕ ಚಟುವಟಿಕೆಗಳ ಹೆಚ್ಚಳಕ್ಕೆ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ತನ್ಮೂಲಕ ರಾಜ್ಯವನ್ನು ಜಾಗತಿಕ ಆನ್​ಲೈನ್ ಗೇಮಿಂಗ್ ಹಬ್ ಮಾಡಲು ಕಾರ್ಯೋನ್ಮುಖವಾಗಿದೆ.
ಜಪಾನ್, ತೈವಾನ್, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಆನ್​ಲೈನ್ ಗೇಮ್ಳು ಹೆಚ್ಚು ಪ್ರಚಲಿತವಾಗಿವೆ. ಅದರಲ್ಲೂ ಜಪಾನ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೇಮಿಂಗ್ ಹಬ್ ಆಗಿದೆ. ಅಂತಹದೊಂದು ಅವಕಾಶವನ್ನು ರಾಜ್ಯದಲ್ಲಿಯೂ ನಾಗರಿಕರಿಗೆ ತೆರೆದಿಡುವ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೂ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಬೆಂಗಳೂರು ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಆನ್​ಲೈನ್ ಗೇಮ್ ನಡೆಸುವವರಿಗೆ ಅವಕಾಶ ನೀಡುವ ಮೂಲಕ ಸಾರ್ವಜನಿಕರಿಗೆ ಮನರಂಜನೆ ಮಾತ್ರವಲ್ಲದೇ ಬೇರೆ ಬೇರೆ ಅವಕಾಶಗಳನ್ನು ಒದಗಿಸಲಾಗುತ್ತದೆ. ಗೇಮ್ ನಡೆಸಲು ಮುಂದಾಗುವವರಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಲಾಗುತ್ತದೆ. ಆನ್​ಲೈನ್ ಗೇಮ್ಳಿಗೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ನೀತಿಯ ವ್ಯಾಪ್ತಿಯಲ್ಲಿಯೇ ರಾಜ್ಯವನ್ನು ಹಬ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ.
ಜೂಜಿಗೆ ಅವಕಾಶ ಇಲ್ಲ:ಆನ್​ಲೈನ್ ಗೇಮಿಂಗ್ ಎಂದ ಕೂಡಲೇ ರಮ್ಮಿಯಂತಹ ಜೂಜಿನ ಆಟಗಳು ಇರುತ್ತವೆ ಎಂಬ ಭಾವನೆ ಇದೆ. ಆದರೆ ರಾಜ್ಯ ಸರ್ಕಾರ ಉದ್ದೇಶಿಸಿರುವ ಹಬ್ ವ್ಯಾಪ್ತಿಯಲ್ಲಿ ಜೂಜಿನ ಆಟಗಳಿಗೆ ಅವಕಾಶ ಇರುವುದಿಲ್ಲ. ಇಲ್ಲಿ ಮಕ್ಕಳ ವಿಕಾಸಕ್ಕೆ ಪೂರಕವಾದ ಆಟಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಸೆಂಟರ್ ಆಫ್ ಎಕ್ಸಲೆನ್ಸ್:ರಾಜ್ಯದಲ್ಲಿ 2017 ರಲ್ಲಿಯೇ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸಲಾಗಿತ್ತು. ಅಲ್ಲಿ ಅನಿಮೇಷನ್, ವಿಷ್ಯುಯಲ್, ಗೇಮಿಂಗ್ ಮತ್ತು ಕಾಮಿಕ್ಸ್​ಗೆ (ಎವಿಜಿಸಿ) ಅವಕಾಶ ಇದೆ. ಬಾಹುಬಲಿ, ವಿಕ್ರಮ್ ಸೇರಿದಂತೆ ಅನೇಕ ಚಿತ್ರಗಳ ವಿಷ್ಯುಯಲ್ ಎಫೆಕ್ಟ್ ಗಳನ್ನು ಇಲ್ಲಿಯೇ ಮಾಡಿದ್ದಾರೆ.
ಆನ್​ಲೈನ್ ಗೇಮಿಂಗ್ ಕ್ಷೇತ್ರ ಪ್ರವೇಶಿಸುವುದರಿಂದ ಅನಿಮೇಷನ್ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಕ್ಷೇತ್ರಗಳಲ್ಲಿ ಚಟುವಟಿಕೆಗಳು ಹೆಚ್ಚಾಗುತ್ತವೆ. ಅದು ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.
ಆನ್​ಲೈನ್ ಗೇಮಿಂಗ್​ನಲ್ಲಿ ಗೇಮ್ ಆಫ್ ಚಾನ್ಸ್ ಹಾಗೂ ಗೇಮ್ ಆಫ್ ಸ್ಕಿಲ್ ಇದ್ದು ಇದರಲ್ಲಿ ಯಾವುದಕ್ಕೆ ಬೆಂಬಲ ನೀಡಬೇಕು ಎಂಬ ಪ್ರಶ್ನೆಯೂ ಇದೆ. ಆದರೆ ರಾಜ್ಯದಲ್ಲಿ ಗೇಮ್ ಆಫ್ ಸ್ಕಿಲ್​ಗೆ ಆದ್ಯತೆ ನೀಡಲಾಗುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಗೇಮಿಂಗ್ ಸಮಿಟ್:ರಾಜ್ಯವನ್ನು ಜಾಗತಿಕ ಗೇಮಿಂಗ್ ಹಬ್ ಮಾಡುವ ಉದ್ದೇಶಕ್ಕೆ ಪೂರಕವಾಗಿ ಸದ್ಯದಲ್ಲೇ ಗೇಮಿಂಗ್ ಶೃಂಗಸಭೆಯೊಂದನ್ನು ನಡೆಸಲು ನಿರ್ಧರಿಸಲಾಗಿದೆ. ಎಲ್ಲ ಗೇಮಿಂಗ್ ಕಂಪೆನಿಗಳನ್ನು ಆಹ್ವಾನಿಸಲಾಗುತ್ತದೆ. ಗೇಮಿಂಗ್ ಹ್ಯಾಕಥಾನ್ ಸಹ ನಡೆಸಲಾಗುತ್ತದೆ. ವಿಶ್ವದ ಎಲ್ಲೆಡೆಯ ಡೆವಲಪರ್​ಗಳು ಒಂದೆಡೆ ಸೇರಿದಾಗ ಜಾಗತಿಕ ಹಬ್ ಯಾವ ರೀತಿಯಲ್ಲಿ ಮಾಡಬಹುದು, ನಿಯಂತ್ರಣಕ್ಕೆ ನಿಯಮಗಳು ಏನೇನು ಇರಬೇಕು ಎಂಬುದನ್ನು ಚರ್ಚೆ ಮಾಡಲು ಅನುಕೂಲವಾಗುತ್ತದೆ.
ಜಿಎಸ್​ಟಿ ತಗ್ಗಿಸಲು ಮನವಿ:ಆನ್​ಲೈನ್ ಗೇಮ್ಳ ಮೇಲೆ ಶೇ.28 ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿದೆ. ಅನೇಕ ಜಾಗತಿಕ ಕಂಪೆನಿಗಳು ಜಿಎಸ್​ಟಿ ಕಡಿಮೆ ಮಾಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ರಾಜ್ಯವನ್ನು ಒತ್ತಾಯಿಸಿವೆ. ರಾಜ್ಯ ಸರ್ಕಾರ ಸಹ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.
ನಿಯಂತ್ರಣ ಹೇಗೆ?:ಗೇಮಿಂಗ್ ಹಬ್ ಮಾಡಿದ ನಂತರ ಅಲ್ಲಿ ಜೂಜಿನ ಆಟಗಳು ನಡೆಯದಂತೆ ಎಚ್ಚರಿಕೆ ವಹಿಸುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಇಲ್ಲದಿದ್ದರೆ ಸಾಮಾಜಿಕ ಅಶಾಂತಿ ಆರಂಭವಾಗುತ್ತದೆ. ಆದ್ದರಿಂದಲೇ ಸರ್ಕಾರ ಐಟಿ ಕಾಯ್ದೆ, ಪೊಲೀಸ್ ಕಾಯ್ದೆಗಳನ್ನು ಆಧರಿಸಿ ಏಕೀಕೃತ ಗೇಮಿಂಗ್ ನಿಯಮಾವಳಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.
30 ವರ್ಷದ ಗುರಿ:ಮುಂದಿನ ಮೂರು ದಶಕಗಳ ಗುರಿ ಹಾಕಿಕೊಂಡು ರಾಜ್ಯವನ್ನು ಗೇಮಿಂಗ್ ಹಬ್ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಈಗ ಜಪಾನ್ ಗೇಮಿಂಗ್ ಹಬ್ ಆಗಿದ್ದರೂ, ಅಲ್ಲಿ ಜನಸಂಖ್ಯೆ ಕಡಿಮೆ ಆಗುತ್ತ ಕೌಶಲವೂ ಕುಸಿಯುತ್ತಿದೆ. ಆ ಅವಕಾಶವನ್ನು ಬಳಸಿಕೊಳ್ಳುವುದು ರಾಜ್ಯದ ಚಿಂತನೆ.
ಹೆಚ್ಚಿನ ಅವಕಾಶ:ಒಂದು ಅಧ್ಯಯನದ ಪ್ರಕಾರ ದೇಶದಲ್ಲಿ ಒಂದೇ ತಿಂಗಳಿನಲ್ಲಿ 330 ಮಿಲಿಯನ್​ನಷ್ಟು ಆನ್​ಲೈನ್ ಆಟವಾಡಲಾಗಿದೆ. ಆದರೆ ಇದುವರೆಗೂ ಭಾರತ ಕೇಂದ್ರಿತ ಆನ್​ಲೈನ್ ಆಟಗಳು ಬಂದಿಲ್ಲ.
ಆನ್​ಲೈನ್ ಗೇಮ್​ಗಳ ಮೇಲಿರುವ ಜಿಎಸ್​ಟಿ ತಗ್ಗಿಸುವುದು ಕೇಂದ್ರಕ್ಕೆ ಬಿಟ್ಟ ವಿಚಾರ. ರಾಜ್ಯವನ್ನು ಇ-ಗೇಮಿಂಗ್ ಹಬ್ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಪ್ರತ್ಯೇಕವಾದ ನೀತಿಯೂ ಇದೆ. ಅದರ ಪ್ರಕಾರ ಯೋಜನೆ ಜಾರಿಗೆ ಬರುತ್ತದೆ. ಆನ್​ಲೈನ್ ಗೇಮಿಂಗ್ ಹಬ್​ನಲ್ಲಿ ಜೂಜಿನ ಗೇಮ್ಳಿಗೆ ಅವಕಾಶ ಇರುವುದಿಲ್ಲ. ನಿಯಂತ್ರಣ ಇದ್ದೇ ಇರುತ್ತದೆ.
| ಪ್ರಿಯಾಂಕ್ ಖರ್ಗೆ, ಐಟಿ, ಬಿಟಿ ಮತ್ತು ಆರ್​ಡಿಪಿಆರ್ ಸಚಿವ
ಎಂತಹ ಆಟಗಳು?:ಕೌಶಲ್ಯ ವೃದ್ಧಿಸುವ, ಸಾಹಸದ ಕ್ರೀಡೆಗಳು, ಮೊಬೈಲ್​ನಲ್ಲಿರುವ ಕ್ರೀಡೆಗಳು, ಚೆಸ್ ಸೇರಿದಂತೆ ಭಾರತೀಯ ಸೊಗಡಿನ ಕ್ರೀಡೆಗಳು ಇರುತ್ತವೆ. ಇಲ್ಲಿ ಬರುವವರು ಹಣ ಕಳೆದುಕೊಂಡು ಜೀವನ ಹಾಳು ಮಾಡಿಕೊಳ್ಳುವಂತಹ ಯಾವುದೇ ಆಟಗಳಿಗೆ ಅವಕಾಶಗಳನ್ನು ನೀಡುವುದಿಲ್ಲ. ಆ ವಿಚಾರದಲ್ಲಿ ಸರ್ಕಾರ ಹೆಚ್ಚು ಸ್ಪಷ್ಟವಾಗಿದೆ.
ಮಗು ಅಳುತ್ತಿದೆ ಅಂತ ಮೂಗು-ಬಾಯಿ ಒತ್ತಿ ಹಿಡಿದ ಅಪ್ಪ; ಉಸಿರುಗಟ್ಟಿ ಸಾವಿಗೀಡಾದ 14 ತಿಂಗಳ ಮಗ

ಹಿಂದೂ ಧರ್ಮ ಯಾವಾಗ ಹುಟ್ಟಿತು‌‌‌.. ಯಾರು ಹುಟ್ಟಿಸಿದ್ದರು?: ಗೃಹ ಸಚಿವ ಡಾ.ಜಿ.ಪರಮೇಶ್ವರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 4 =
Remember me
