ಮುಂಬೈ:200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲೀನ್ ಫರ್ನಾಂಡೀಸ್ ಮತ್ತು ಕೆಲವು ಮಾಧ್ಯಮ ಸಂಸ್ಥೆಗಳ ವಿರುದ್ಧ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದು, ಇದರಲ್ಲಿ ಸುಕೇಶ್ ಚಂದ್ರಶೇಖರ್ ಪ್ರಮುಖ ಆರೋಪಿಯಾಗಿದ್ದಾರೆ. ಈಗ ಹೂಡಲಾಗಿರುವ ಮಾನನಷ್ಟ ಮೊಕದ್ದಮೆಯಲ್ಲಿ, ಜಾಕ್ವೆಲೀನ್ ಫರ್ನಾಂಡಿಸ್​ರನ್ನು “ಆರೋಪಿ 1” ಮಾಡಲಾಗಿದೆ.
ಜಾಕ್ವೆಲಿನ್ ಫೆರ್ನಾಂಡಿಸ್​ ವಿರುದ್ಧ ಬಾಲಿವುಡ್​ ಬೆಡಗಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಜಾಕ್ವೆಲಿನ್ ತನ್ನ ಘನತೆಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ನೋರಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
‘ಜಾಕ್ವೆಲೀನ್​ ಫರ್ನಾಂಡಿಸ್ ತಮ್ಮ ಸ್ವಂತ ಹಿತಾಸಕ್ತಿಗಳಿಗಾಗಿ ನನ್ನ ವೃತ್ತಿಜೀವನವನ್ನ ನಾಶಪಡಿಸಲು ಆರೋಪಗಳನ್ನ ಮಾಡಿದ್ದಾರೆ’ ಎಂದು ನೋರಾ ಫತೇಹಿ ಆರೋಪಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್​ ಅನಗತ್ಯ ಮತ್ತು ಎಂಬ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ನೋರಾ ತಮ್ಮ ವಕೀಲರ ಮೂಲಕ ವಾದಿಸಿದ್ದಾರೆ.
ಸಲ್ಲಿಸಿರುವ ದಾವೆಯಲ್ಲಿ ‘ದೂರುದಾರರು ಮಾನಹಾನಿಕರ ಟೀಕೆಗಳಿಂದ ನೊಂದಿದ್ದಾರೆ . ಆರೋಪಿಗಳು ದೂರುದಾರರ ವಿರುದ್ಧ ಮಾನ ನಷ್ಟ ಉಂಟಾಗುವ ನಡೆಗಳನ್ನು ಮಾಡಿದ್ದಾರೆ. ಇದನ್ನು ಇತರ ಆರೋಪಿಗಳು ಮತ್ತಷ್ಟು ಮುಂದಕ್ಕೆ ಎಳೆದು ಮತ್ತು ಪ್ರಸಾರ ಮಾಡಿದ್ದಾರೆ. ಅವರೆಲ್ಲರೂ ಪರಸ್ಪರ ಸಹಕರಿಸುತ್ತಾ ವರ್ತಿಸುತ್ತಿದ್ದರು’ ಎಂದು ಬರೆಯಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
