ಬೆಂಗಳೂರು:ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಚುಟುಕು ಸಾಹಿತ್ಯಕ್ಕೆ ಹೊಸ ರೂಪು ಕೊಟ್ಟವರು ಜರಗನಹಳ್ಳಿ ಶಿವಶಂಕರ್. ಅವರ ಬರಹದಲ್ಲಿ ಪದಗಳ ಆಟ ಇರುವುದಿಲ್ಲ. ಬದಲಿಗೆ ತಾತ್ವಿಕತೆ, ಅರಿವು, ಚುಟುಕುಗಳಲ್ಲಿ ಕಾಣಬಹುದಿತ್ತು ಎಂದು ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ಕರ್ನಾಟಕ ವಿಕಾಸರಂಗ ವತಿಯಿಂದ ನಗರದ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಬಸವರಾಜ ಸಾದರ ಅವರಿಗೆ ‘ಜರಗನಹಳ್ಳಿ ಶಿವಶಂಕರ್ ಹನಿಗವನ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಇದನ್ನು ಓದಿ:ಸಾಲ ಕೊಡುವುದಷ್ಟೇ ಅಲ್ಲ, ವಸೂಲಿಯೂ ಅಧಿಕಾರಿಗಳ ಹೊಣೆ; ಸಚಿವ ಜಮೀರ್ ಅಹಮದ್
ಸಮಾಜದ ಎಲ್ಲ ಅಂಗಗಳ ಬಗ್ಗೆ ಅವರ ಕವಿತೆಯಲ್ಲಿ ಕಾಣಬಹುದಿತ್ತು. ಸ್ನೇಹಮಯ ವ್ಯಕ್ತಿತ್ವದ ಜರಗನಹಳ್ಳಿ ಹೆಸರಿನಲ್ಲಿ ಮತ್ತೊಬ್ಬ ಚುಟುಕು ಕವಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಇಂದಿನ ಮಕ್ಕಳಿಗೆ ಕವಿತೆಗಳು ಹೆಚ್ಚು ಪರಿಣಾಮಕಾರಿಯಾಗಿ ತಲುಪಬೇಕಿದೆ. ಮಕ್ಕಳಲ್ಲಿ ಜಾತಿ ಬೇಧಗಳ ವಿರುದ್ಧ ಹೋರಾಡುವ ಶಕ್ತಿ ತುಂಬಿ ನಾವೆಲ್ಲ ಒಂದೇ ಎನ್ನುವ ಭಾವನೆ ಬರಬೇಕಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಡಾ. ಬಸವರಾಜ ಸಾದರ ಮಾತನಾಡಿ, ಚುಟುಕು ಸಾಹಿತ್ಯದಲ್ಲಿ ಜರಗನಹಳ್ಳಿ ಶಿವಶಂಕರ್ ಹಾಗೂ ಡಾ. ಡುಂಡಿರಾಜ್ ಮೇರು ವ್ಯಕ್ತಿಗಳು. ಜರಗನಹಳ್ಳಿ ಹೆಸರಿನಲ್ಲಿ ನೀಡುವ ಹನಿಗನವ ಸಾಹಿತ್ಯ ಪ್ರಶಸ್ತಿ ನನ್ನ ‘ತೊಟ್ಟು’ ಕೃತಿಗೆ ಲಭಿಸಿದ್ದು, ನನಗೆ ಅತ್ಯಂತ ಸಂತೋಷವಾಗಿದೆ. ಈ ಪ್ರಶಸ್ತಿ ನನ್ನ ಮುಂದಿನ ಬರವಣಿಗೆಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.
ಇದನ್ನು ಓದಿ:ಮಳೆ ಹಾನಿ; ಬಿಜೆಪಿಯ ಎರಡು ತಂಡಗಳು ಖುದ್ದು ಸಮೀಕ್ಷೆ
ಕರ್ನಾಟಕ ವಿಕಾಸರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಮಾತನಾಡಿ, ಜರಗನಹಳ್ಳಿ ತಮ್ಮ ಬರಹದ ಮೂಲಕ ಹನಿಗವನಕ್ಕೆ ಹೆಚ್ಚು ಮನ್ನಣೆಯನ್ನು ತಂದುಕೊಟ್ಟವರು. ತಮ್ಮ ಶುಭದ ಪ್ರಕಾಶನ ಮೂಲಕ ಸುಮಾರು 50ಕ್ಕೂ ಹೆಚ್ಚು ಯುವ ಬರಹಗಾರರ ಕವನ ಸಂಕಲನಗಳನ್ನು ಹೊರತಂದು ಯುವ ಬರಹಗಾರರಿಗೆ ಸ್ಪೂರ್ತಿ ತುಂಬಿದರು. ಇತರರನ್ನು ಬೆಳೆಸುವ ಮೂಲಕ ತಾವೂ ಬೆಳೆದ ಅಪರೂಪದ ವ್ಯಕ್ತಿ ಜರಗನಹಳ್ಳಿ ಶಿವಶಂಕರ್. ಇವರ ಹೆಸರಿನಲ್ಲಿ ಪ್ರತಿವರ್ಷ ಸಾಹಿತಿಯೊಬ್ಬರನ್ನು ಸತ್ಕರಿಸುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೇಖಕ ರಾ.ನಂ. ಚಂದ್ರಶೇಖರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ, ರಾಯಲ್ ರಾಜ್, ಡಾ. ಗುಣವಂತ ಮಂಜು, ಬಿ.ಎಂ. ಗಂಗಣ್ಣ ಇತರರು ಇದ್ದರು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:14 − eight =
Remember me
