ಬೆಂಗಳೂರು:ಜಯನಗರ ಸಂಚಾರಿ ಪೊಲೀಸರ ಮೇಲೆ ವೃದ್ದ ದಂಪತಿಗೆ ಕಿರುಕುಳ ಆರೋಪ ಹೊರಿಸಲಾಗಿದ್ದು ದಂಡ ವಸೂಲಿ ಭರದಲ್ಲಿ ಮಾನವೀಯತೆಯನ್ನೇ ಮರೆತರಾ ಎನ್ನುವ ಪ್ರಶ್ನೆ ಎದುರಾಗಿದೆ.
ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯನ್ನು ತಡೆದು ಕಿರುಕುಳ ನೀಡಿರುವ ಆರೋಪವನ್ನು ಜೆಪಿ ನಗರದ ನಿವಾಸಿಗಳಾಗಿದ್ದ ಮಂಗಳ ಹಾಗೂ ಮಲ್ಲೇಶ್ ದಂಪತಿ ಹೊರಿಸಿದ್ದಾರೆ.
ಕಳೆದ 2 ತಾರೀಕಿನಂದು ಬಿಪಿ ಹಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ 45 ವರ್ಷದ ಮಂಗಳಾರನ್ನು ಕರೆದುಕೊಂಡು ಅವರ ಪಿ ಮಲ್ಲೇಶ ಆಸ್ಪತ್ರೆ ತೆರಳುತ್ತಿದ್ದರು. ಇವರಿಬ್ಬರೂ ದ್ವಿಚಕ್ರ ವಾನಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಇವರನ್ನು ಜಯನಗರ ಸಂಚಾರಿ ಪೊಲೀಸರು ಸಂಗಂ ಸರ್ಕಲ್ ನಲ್ಲಿ ಬೈಕ್ ತಡೆದಿದ್ದಾರೆ.
ಈ ಸಂದರ್ಭ ಪೊಲೀಸರು, ವಾಹನದ ಮೇಲಿರುವ 5 ಸಾವಿರ ರೂ. ದಂಡವನ್ನು ಪಾವತಿಸಲು ಒತ್ತಾಯಪಡಿಸಿದ್ದಾರೆ. ಆದರೆ ವೃದ್ದ ದಂಪತಿಯ ಬಳಿ 2 ಸಾವಿರ ಮಾತ್ರ ಹಣವಿದ್ದು ಅಷ್ಟು ಮಾತ್ರ ಕಟ್ಟುವುದಾಗಿ ಹೇಳಿದ್ದಾರೆ. ಇದನ್ನು ಕಿವಿಗೆ ಹಾಕಿಕೊಳ್ಳದೆ ಸಂಚಾರಿ ಪೊಲೀಸ್ ಶಿವಸ್ವಾಮಿ ಎಂಬ ಅಧಿಕಾರಿ 5 ಸಾವಿರ ಕಟ್ಟಲೇಬೇಕೇಂದು ಒತ್ತಾಯಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಿಷ್ಟೇ ಅಲ್ಲದೇ ಶಿವಸ್ವಾಮಿ, ಅವಾಚ್ಯ ಶಬ್ದಗಳಿಂದಲೂ ನಿಂದಿಸಿದ್ದಾರೆ ಎನ್ನಲಾಗಿದೆ.

ಇದರಿಂದಾಗಿ ವಿಚಲಿತರಾದ ವೃದ್ಧ ಪತಿ 2 ಕಿಲೋಮೀಟರ್ ನಡೆದುಕೊಂಡೇ ಮನೆಗೆ ಹೋಗಿ ಹಣ ತಂದು ದಂಡ ಕಟ್ಟಿದ್ದಾರೆ. ಈ ವೇಳೆ ರಸ್ತೆಯಲ್ಲೇ ಕುಳಿತಿದ್ದ ಪತ್ನಿ ಮಂಗಳ, ಅನಾರೋಗ್ಯದಿಂದಾಗಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ.
ಸದ್ಯ ವೃದ್ಧ ದಂಪತಿಯ ಮಗ ದೂರು ದಾಖಲಿಸಿದ್ದು ಸಂಚಾರಿ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಬೇಡಿಕೆ ಇರಿಸಿದ್ದಾರೆ. ಅಷ್ಟೇ ಅಲ್ಲದೇ ಆತ ಬೆಂಗಳೂರಿನ ಸಂಚಾರಿ ಪೊಲೀಸ್ ಟ್ವಿಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿ ಕ್ರಮಕ್ಕೆ ಒತ್ತಾಯಪಡಿಸಿದ್ದಾನೆ.
ಜಯನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯು 02/02/23ರಂದು ನನ್ನ ವೃದ್ಧ ತಂದೆ ಹಾಗೂ ಆಸ್ಪತ್ರೆಗೆ ತೆರಳುತ್ತಿದ್ದ ತಾಯಿಯನ್ನು ತಡೆದು ರಸ್ತೆಯಲ್ಲಿಯೇ 1 ಗಂಟೆಗಳ ಕಾಲ ನಿಲ್ಲಿಸಿ. ಏಕವಚನದಲ್ಲಿ ಮಾತನಾಡಿ ಅಮಾನವೀಯವಾಗಿ ವರ್ತಿಸಿ ದುರ್ನಡತೆ ತೋರಿಸಿರುತ್ತಾರೆ. 03/02/22 ರಂದು ಠಾಣಾಧಿಕಾರಿಗಳನ್ನು ಭೇಟಿ ಮಾಡಿ ಅವರ ಗಮನಕ್ಕೂ ಸಹ ತಂದಿರುತ್ತೇನೆ.pic.twitter.com/S7c1gaw2GP
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + one =
Remember me
