ತುಮಕೂರು:ಈ ಜನಕ್ಕೆ ಎಷ್ಟು ಹೇಳುವುದು. ಕರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮನೆಯಲ್ಲೇ ಇರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮನೆ, ಮನೆಗೆ ದಿನಸಿ, ತರಕಾರಿ ಎಲ್ಲವನ್ನೂ ಪೂರೈಸಲಾಗುತ್ತಿದೆ. ಆದರೂ ಜನ ಏತಕ್ಕೆ ಮನೆಬಿಟ್ಟು ಹೊರಬರಬೇಕು. ಅಗತ್ಯ ಇದ್ದರೆ ಹೊರಬನ್ನಿ. ಯಾರಾದರೂ ಕಾನೂನು ಉಲ್ಲಂಘಿಸಿ ಅಸಡ್ಡೆ ತೋರಿ ರಸ್ತೆಗಳಲ್ಲಿ ಸುತ್ತಾಡಿದರೆ ಮುಲಾಜಿಲ್ಲದೆ ಒಳಗೆ ಹಾಕಸ್ತೀನಿ… ಇದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತುಮಕೂರಿನಲ್ಲಿ ವಿಜಯವಾಣಿ- ದಿಗ್ವಿಜಯ ನ್ಯೂಸ್ 24ಗಿ7 ವತಿಯಿಂದ ಮಂಗಳವಾರ ನಡೆದ ‘ಫೋನ್​ಇನ್’ ಕಾರ್ಯಕ್ರಮದಲ್ಲಿ ನೀಡಿದ ಎಚ್ಚರಿಕೆ.
ಕರೊನಾ ವಿರುದ್ಧದ ಸಮರದಲ್ಲಿ ರಾಜ್ಯ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ದೇಶದಲ್ಲೇ ಮೆಚ್ಚುಗೆ ವ್ಯಕ್ತವಾಗಿದೆ. ಈ ಹೋರಾಟದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸುಡುಬಿಸಿಲಿನಲ್ಲೂ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವುದರ ಜತೆಗೆ ಜಾಗೃತಿ ಮೂಡಿಸುತ್ತಿರುವ ಕಾರ್ಯವೈಖರಿ ಕುರಿತು ಮಾಧುಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು. ಕೊಬ್ಬರಿಯನ್ನು ಹೊರ ರಾಜ್ಯಕ್ಕೆ ಕಳುಹಿಸಲು ಇನ್ನೂ 15 ದಿನ ಅನುಮತಿ ಕೊಡಲು ಸಾಧ್ಯವೇ ಇಲ್ಲ ಎಂದರು. ಮಹಾರಾಷ್ಟ್ರ, ನಾಗಪುರಕ್ಕೆ ಇಲ್ಲಿಂದ ಕೊಬ್ಬರಿ ಸರಬರಾಜಾಗುತ್ತದೆ, ಆದರೆ ಅಲ್ಲಿ ಸೋಂಕು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕರೊನಾ ಹಬ್ಬುವ ಆತಂಕ ಇದೆ. 15 ದಿನ ಸಂಯಮದಿಂದ ಕಾಯಿರಿ ಎಂದರು. ಕೃಷಿ ಚಟುವಟಿಕೆಗೆ ನಿರ್ಬಂಧವೇನಿಲ್ಲ. ರಸಗೊಬ್ಬರ, ಬೀಜ ವಿತರಣೆಯಲ್ಲೂ ಲೋಪವಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ತುಮಕೂರು ಜಿಲ್ಲೆಯಲ್ಲಿ ಬೆಳೆದಿರುವ ಹಲಸನ್ನು ಹೊರರಾಜ್ಯಗಳಿಗೆ ಕಳುಹಿಸಲು ಆಗುವುದಿಲ್ಲ. ಮಂಗಳೂರು, ಕುಂದಾಪುರ ಜತೆಗೆ ಸಕ್ಕರಾಯಪಟ್ಟಣಕ್ಕೆ ಕಳುಹಿಸಲು ವ್ಯವಸ್ಥೆ ಮಾಡೋಣ ಎಂದು ಭರವಸೆ ನೀಡಿದರು.
ಕಾರ್ಯದರ್ಶಿಗಳಿಗೆ ಜಿಲ್ಲಾ ಪ್ರವಾಸಕ್ಕೆ ಸೂಚನೆ
ಬೆಂಗಳೂರು: ವಾರದಲ್ಲಿ ಒಂದು ದಿನ ಆಯಾ ಜಿಲ್ಲಾ ಪ್ರವಾಸ ಕೈಗೊಂಡು ಕರೊನಾ ವೈರಸ್ ಸೋಂಕು ತಡೆಗಟ್ಟಲು ಜಿಲ್ಲಾ ಆಡಳಿತಗಳು ತೆಗೆದುಕೊಂಡ ಕ್ರಮಗಳ ಪರಿಶೀಲನೆ ಹಾಗೂ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶದಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಈ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಂಗಳವಾರ ಪತ್ರ ಬರೆದಿದ್ದು, ಕಳೆದ ವಾರ ಭೇಟಿ ಪರಿಶೀಲಿಸಿದ ವರದಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗೆ ಸಲ್ಲಿಸಲು ತಿಳಿಸಿದ್ದಾರೆ. ಇನ್ನು ಮುಂದೆ ವಾರದಲ್ಲಿ ಒಂದು ದಿನ ಆಯಾ ಜಿಲ್ಲಾ ಪ್ರವಾಸ ಕೈಗೊಂಡು ಪರಿಶೀಲನಾ ವರದಿ ಸಲ್ಲಿಸಬೇಕೆಂದು ಸಿಎಸ್ ಸೂಚಿಸಿದ್ದಾರೆ.
ರಜಾವಧಿಯನ್ನು ಕಲಿಕಾವಧಿಯಾಗಿಸಲು ಶಿಕ್ಷಣ ಇಲಾಖೆಯಿಂದಲೇ ಯೂಟ್ಯೂಬ್​ ಚಾನಲ್​… ನೀವು ಕಾರ್ಯಕ್ರಮ ನೀಡಬಹುದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
