ನವದೆಹಲಿ:ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ದೆಹಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ತೆರಳಿದ್ದಾರೆ. ಟಿಕೆಟ್ ಹಂಚಿಕೆ ಬಗ್ಗೆ ದಿಲ್ಲಿ ಚರ್ಚೆಯಾಗಲಿದೆ ಎಂಬ ಗುಸುಗುಸುಗಳಿತ್ತಾದರೂ, ಈ ಪ್ರವಾಸದಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.
ಟಿಕೆಟ್ ಹಂಚಿಕೆ ಬಗ್ಗೆ ಏನಿದ್ದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜತೆಗೆ ಚರ್ಚೆಯಾಗಲಿದೆಯೇ ವಿನಃ ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್ ಷಾ ಜತೆಗಲ್ಲ. ತೀರಾ ಅನಿವಾರ್ಯವಿದ್ದರೆ ಅಮಿತ್ ಷಾ ಮಧ್ಯಪ್ರವೇಶ ಮಾಡುತ್ತಾರೆಯೇ ವಿನಃ ಪಕ್ಷದ ವ್ಯವಹಾರಗಳನ್ನು ಅಧ್ಯಕ್ಷರೇ ನಿಭಾಯಿಸುತ್ತಾರೆ. ಹೀಗಾಗಿ, ಈ ಪ್ರವಾಸದಲ್ಲಿ ಟಿಕೆಟ್ ಚರ್ಚೆ ನಡೆದಿಲ್ಲ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳಿವೆ.
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಜೆಡಿಎಸ್​ನ ಹಲವು ಶಾಸಕರಿಗೆ ಅಸಮಾಧಾನಗಳಿದ್ದು, ಪಕ್ಷ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಕೆಲವರು ಚಿಂತನೆ ನಡೆಸಿದ್ದಾರೆ. ಹೀಗಾಗಿ, ಈ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಹಾಗೂ ಬಿಜೆಪಿಯ ದಿಲ್ಲಿ ವರಿಷ್ಠರು ನಮ್ಮೊಂದಿಗಿದ್ದಾರೆ ಎಂಬ ಗಟ್ಟಿ ಸಂದೇಶವನ್ನು ಕಾರ್ಯಕರ್ತ ಮತ್ತು ಮುಖಂಡ ವರ್ಗಕ್ಕೆ ಕಳುಹಿಸಲು ದೆಹಲಿಗೆ ಬಂದು ಪ್ರಧಾನಿ ಮೋದಿಯವರನ್ನು ದೇವೇಗೌಡರು ತಮ್ಮ ಪುತ್ರರು, ಮೊಮ್ಮಗನೊಂದಿಗೆ ಬಂದು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವೇಳೆಯೂ ಸೂಚ್ಯವಾಗಿ ತಿಳಿಸಿದ್ದ ಕುಮಾರಸ್ವಾಮಿ, ಮೈತ್ರಿ ಬಗ್ಗೆ ಪಕ್ಷದ ಎಲ್ಲ, ನಾಯಕರು, ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಬೇಕು. ಆ ರೀತಿಯಲ್ಲಿ ಎಲ್ಲರೂ ನಡೆದುಕೊಳ್ಳಬೇಕು ಎಂದಿದ್ದರು. ಜೆಡಿಎಸ್-ಬಿಜೆಪಿ ಮೈತ್ರಿ ಕೇವಲ ಲೋಕಸಭೆ ಚುನಾವಣೆ ಮಾತ್ರವಲ್ಲ, ಮುಂದಿನ ಎಲ್ಲ ಚುನಾವಣೆಗೂ ವಿಸ್ತರಣೆಯಾಗಬೇಕು ಎಂದು ಗೃಹ ಸಚಿವ ಅಮಿತ್ ಷಾ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ತಿಳಿಸಿರುವುದು ಕೂಡ ಇಲ್ಲಿ ಉಲ್ಲೇಖಾರ್ಹ.
ರಾಜನಾಥ್ ಭೇಟಿ:ಶುಕ್ರವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ಕುಮಾರಸ್ವಾಮಿ, ಉಭಯ ಕುಶಲೋಪರಿ ವಿಚಾರಿಸಿದರು. ಇದೇ ವೇಳೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಸಂತಸ ಹಂಚಿಕೊಂಡ ರಾಜನಾಥ್, ರಾಜ್ಯದಲ್ಲಿ ಮೈತ್ರಿಕೂಟ ಬಲಗೊಳಿಸಲು ಒಟ್ಟಾಗಿ ಶ್ರಮಿಸೋಣ ಎಂದು ಶುಭ ಹಾರೈಸಿದ್ದಾರೆ.
ಅಭಿಯಾನಕ್ಕೆ ಎಸ್​ಟಿ ಮೋರ್ಚಾ ಸಿದ್ಧತೆ:ಎಸ್​ಟಿ ಮೀಸಲು ಹೆಚ್ಚಳ, ಎಸ್​ಸಿ ಮೀಸಲು ವರ್ಗೀಕರಣ ಲಾಭದ ಫಸಲು ವಿಧಾನಸಭೆ ಚುನಾವಣೆಯಲ್ಲಿ ತೆಗೆಯಲಾಗಲಿಲ್ಲ. ಈ ನಿರ್ಧಾರ ಪೂರಕವಾಗುವ ಬದಲು ಮಾರಕವಾದ ದುಃಸ್ವಪ್ನ ಬಿಜೆಪಿಗೆ ಇನ್ನೂ ಕಾಡುತ್ತಲೇ ಇದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ನಡೆದ ಎಸ್​ಟಿ ಮೋರ್ಚಾ ಆಂತರಿಕ ಸಭೆಯಲ್ಲಿ ಈ ವಿಚಾರ ಮಾರ್ದನಿಸಿತು. ಪಕ್ಷದಿಂದ ಸ್ಪರ್ಧಿಸಿದ ಎಲ್ಲ ಎಸ್​ಟಿ ಅಭ್ಯರ್ಥಿಗಳ ಸೋಲಿನ ಬಗ್ಗೆ ಪರಾಮಶಿಸಿ ಮುಂದೆ ಇರಿಸಬೇಕಾದ ಹೆಜ್ಜೆಗಳತ್ತ ಗಮನಹರಿಸಿತು. ಮೀಸಲು ವರ್ಗೀಕರಣದ ವ್ಯವಸ್ಥಿತ ಅಪಪ್ರಚಾರ, ಆಡಳಿತ ವಿರೋಧಿ ಅಲೆ, ಆಂತರಿಕ ಸಮಸ್ಯೆಗಳು, ಕಾಂಗ್ರೆಸ್​ನ ಗ್ಯಾರಂಟಿಗಳು ಎಲ್ಲ ಸೇರಿಕೊಂಡು ಪಕ್ಷಕ್ಕೆ ಸೋಲು ತಂದಿದೆ ಎಂಬುದು ಖಚಿತಪಟ್ಟಿದ್ದು, ಆಗಿ ಹೋದದ್ದರಿಂದ ಪಾಠ ಕಲಿತು ಜನರಲ್ಲಿ ಅರಿವು ಮೂಡಿಸುವ ನಿಲುವು ತಳೆದಿದೆ.
ಲೋಕಸಭೆ ಚುನಾವಣೆಗೆ ಅಡಿಪಾಯ: ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಎಸ್​ಟಿ ಮೀಸಲು ಪ್ರಮಾಣ ಶೇ.3 ರಿಂದ 7ಕ್ಕೆ ಏರಿಸಿ, ಪಂಗಡಗಳಲ್ಲಿದ್ದ 52 ಸಮುದಾಯಗಳ ಸಂಖ್ಯೆಯನ್ನೂ ಹೆಚ್ಚಿಸದೆ ಜಾರಿಗೆ ತಂದದ್ದು ಕ್ರಾಂತಿಕಾರಕ ನಿರ್ಣಯವಾಗಿದೆ. ವಿಧಾನಸಭೆ ಚುನಾವಣೆ ಸಮೀಪಿಸಿದಾಗ ಈ ನಿರ್ಣಯ ಕೈಗೊಳ್ಳಲಾಯಿತು. ಸ್ವಲ್ಪ ಮುಂಚಿತವಾಗಿ ಅನುಷ್ಠಾನಕ್ಕೆ ತಂದಿದ್ದರೆ ಬಿಜೆಪಿ ಸರ್ಕಾರದ ಮಹತ್ವದ ನಿರ್ಧಾರ, ಪ್ರಾಮಾಣಿಕ ಕಾಳಜಿಯು ಎಸ್​ಟಿ ಸಮುದಾಯಗಳಿಗೆ ಅರ್ಥವಾಗುತ್ತಿತ್ತು ಎಂದು ಆಂತರಿಕ ಅವಲೋಕನದ ವೇಳೆ ವ್ಯಕ್ತವಾಗಿದೆ.
ಗುರಿ ಸಾಧನೆಗೆ ಸಾಥ್:ರಾಜ್ಯದಲ್ಲಿ ಮುಖಂಡರು, ಕಾರ್ಯಕರ್ತರು ಒಳ ಗೊಂಡು ಒಂದು ಕೋಟಿ ಸದಸ್ಯರ ಮೊಬೈಲ್​ನಲ್ಲಿ ನಮೋ ಆಪ್ ಡೌನ್​ಲೋಡ್ ಮಾಡಲು ವರಿಷ್ಠರು ಗುರಿ ನಿಗದಿಪಡಿಸಿದ್ದಾರೆ. ಇದಕ್ಕಾಗಿ ಪಕ್ಷದ ರಾಜ್ಯ ಸಮಿತಿ ಜಿಲ್ಲಾ ಸಂಚಾಲಕರನ್ನು ನೇಮಿಸಿದೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಗುರಿ ಹಂಚಿಕೆಯಾಗಿದ್ದ, ಎಸ್​ಟಿ ಮೋರ್ಚಾ ಸಾಥ್ ನೀಡಿ ಯಶಸ್ವಿಗೊಳಿಸಲು ಸಲಹೆ ನೀಡಲಾಗಿದೆ. ಪಕ್ಷದ ಬೂತ್​ನಿಂದ ರಾಜ್ಯಮಟ್ಟದವರೆಗೆ ನಡೆಯುವ ಪ್ರತಿಯೊಂದು ಸಂಘಟನಾತ್ಮಕ ಚಟುವಟಿಕೆ, ವರಿಷ್ಠರ ಸೂಚನೆ ಯಂತೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಮಾಹಿತಿ, ಫೋಟೊಗಳನ್ನು ಈ ಆಪ್ ಮೂಲಕ ಅಪ್​ಲೋಡ್ ಮಾಡಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.
ಶಿಕ್ಷಣ, ಉದ್ಯೋಗ, ಬಡ್ತಿ ಸೇರಿ ಎಲ್ಲ ಹಂತಗಳಲ್ಲಿ ಮೀಸಲು ಹೆಚ್ಚಳದ ಲಾಭವನ್ನು ಸಮುದಾಯದ ಜನರು ಪಡೆದುಕೊಳ್ಳುತ್ತಿದ್ದು, ಈಗ ಜನ ಜಾಗೃತಿ ಅಭಿಯಾನ ಕೈಗೊಳ್ಳುವುದು ಪ್ರಶಸ್ತವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ ಗಟ್ಟಿ ಅಡಿಪಾಯ ಹಾಕಲಿದೆ. ಬುಡಕಟ್ಟು ಸಮುದಾಯಗಳ ಏಳಿಗೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮ, ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಲು ಈ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ.
ಜನವರಿಯಲ್ಲಿ ಬೃಹತ್ ಸಭೆ:ಸಂಘದ ಜತೆಗೂಡಿ ಎಸ್​ಟಿ ಸಮುದಾಯದ ಜಾಗೃತಿ ಅಭಿಯಾನದ ರೂಪರೇಷೆ ಸಿದ್ಧಪಡಿಸಿ, ಅಚ್ಚುಕಟ್ಟಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಜನವರಿಯಲ್ಲಿ ಬೃಹತ್ ಸಭೆ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೂತ್, ಶಕ್ತಿ, ಮಂಡಲ ಹಾಗೂ ಜಿಲ್ಲಾ ಸಮಿತಿಗಳು, ಪ್ರಭಾರಿಗಳು, ಸಹಪ್ರಭಾರಿಗಳ ಒಳಗೊಂಡು 500ಕ್ಕೂ ಹೆಚ್ಚು ಸದಸ್ಯರ ಸಭೆ ನಡೆಸಿ, ಜವಾಬ್ದಾರಿ ಗೊತ್ತುಪಡಿಸಿದರೆ ಅಭಿಯಾನ ಸುಗಮವಾಗಿ ಸಾಗಲಿದ್ದು, ಉದ್ದೇಶವೂ ಈಡೇರಲಿದೆ ಎಂದು ಆಂತರಿಕವಾಗಿ ಚರ್ಚೆಯಾಗಿದೆ.
ಪದಾಧಿಕಾರಿಗಳ ಸಭೆಯಲ್ಲಿ ಬಿ.ವೈ. ವಿಜಯೇಂದ್ರ ಭಾಗಿ, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ಎಲ್ಲ ರಾಜ್ಯಗಳ ಬಿಜೆಪಿ ಘಟಕಗಳ ಅಧ್ಯಕ್ಷರೊಂದಿಗೆ ದಿಲ್ಲಿಯಲ್ಲಿ ಎರಡು ದಿನಗಳ ಸಭೆ ಶುಕ್ರವಾರ ಆರಂಭಗೊಂಡಿದ್ದು, ಲೋಕಸಭೆ ಚುನಾವಣೆ ತಯಾರಿ ಹಾಗೂ ಪಕ್ಷದ ವಿವಿಧ ಮೋರ್ಚಾಗಳ ಕಾರ್ಯನಿರ್ವಹಣೆ ಕುರಿತು ವಿಸõತ ಚರ್ಚೆಗಳು ನಡೆದಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಪಾಲ್ಗೊಂಡಿದ್ದಾರೆ. ಬಿಜೆಪಿಯ ವಿಕಸಿತ ಭಾರತ ಸಂಕಲ್ಪ ಅಭಿಯಾನ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು, ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಸಂಬಂಧ ರಾಷ್ಟ್ರವ್ಯಾಪಿ ನಡೆಸಬೇಕಿರುವ ಕಾರ್ಯಕ್ರಮಗಳ ಬಗ್ಗೆ ಅಧ್ಯಕ್ಷರು ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
BBKS10: ಸಂಗೀತಾ ಫ್ಯಾನ್ಸ್​ಗೆ ಪವಿ ಕೊಟ್ಟ ಕೌಂಟರ್ ಇದು!​ ಇಲ್ಲಿದೆ ನೋಡಿ ವಿಡಿಯೋ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:19 − 15 =
Remember me
