ಹಾಸನ:ಮೊದಲಿನಿಂದಲೂ ಜೆಡಿಎಸ್ (JDS) ಭದ್ರಕೋಟೆಯೇ ಆಗಿರುವ ಹಾಸನ (Hassan) ಜಿಲ್ಲೆಯ ಮೇಲೆ ಕೇಂದ್ರ ಬಿಜೆಪಿ (BJP)ಯ ಕಣ್ಣು ಬಿದ್ದಿದೆ. 2024ರ ಲೋಕಸಭಾ ಚುನಾವಣೆ (Lok Sabha Election)ಗೆ ಈಗಿನಿಂದಲೇ ಗಂಭೀರವಾಗಿ ಟಾರ್ಗೆಟ್ ಮಾಡಿರೋ ಕಮಲ‌ ಪಾಳೆಯ, ಈ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಶತಾಯಗತಾಯ ವಶಪಡಿಸಿಕೊಳ್ಳಲು ಮುಂದಾಗಿದೆ.
ಈ ಬಾರಿ ಹೇಗಾದರೂ ಮಾಡಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಕಮಲದ ತೆಕ್ಕೆಗೆ ತೆಗೆದುಕೊಳ್ಳಲು‌ ಕೇಂದ್ರ ಬಿಜೆಪಿ ನಾಯಕರು (BJP Leaders) ಮನಸ್ಸು ಮಾಡಿದ್ದಾರೆ. ಕೇಂದ್ರ ವಿದ್ಯುತ್ ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಅವರಿಗೆ ಕೇಂದ್ರ ಬಿಜೆಪಿ ನಾಯಕರು ಈ ಟಾಸ್ಕ್ ವಹಿಸಿದ್ದಾರೆ.
ಈಗಾಗಲೇ ಹಾಸನದಲ್ಲಿ ಅಧಿಕಾರಿಗಳ ಸಭೆ ಮತ್ತು ಪಕ್ಷದ ನಾಯಕರ ಸಭೆಯನ್ನು ಮೇಲಿಂದ ಮೇಲೆ ಮಾಡಿರುವ ಸಚಿವ ಕ್ರಿಶನ್ ಪಾಲ್ ಗುರ್ಜರ್, ತಮ್ಮದೇ ಆದ ರೀತಿಯಲ್ಲಿ ಗೌಪ್ಯವಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ಕೆಲವು ನಾಯಕರ ಮಧ್ಯೆ ಇರುವ ಒಡಕು ಮತ್ತು ಭಿನ್ನಮತವನ್ನು ಹೇಗೆ ನಿವಾರಿಸಬಹುದು ಎಂಬುದರ ಬಗ್ಗೆ ಮೊದಲ ಹಂತದಲ್ಲಿ ಅವರು ಗಮನ ಹರಿಸಿದ್ದಾರೆ. ಇನ್ನು ಕೆಲವು ನಾಯಕರು ಬೇರೆ ಪಕ್ಷಗಳ ನಾಯಕರ ಜತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಅದರ ಮೇಲೆಯೂ ಕಣ್ಣಿಟ್ಟಿರುವ ಕ್ರಿಷನ್ ಗುರ್ಜರ್, ಇದರಿಂದ ಬಿಜೆಪಿಗೆ ಆಗಬಹುದಾದ ಹಾನಿ ಬಗ್ಗೆ ಅಂದಾಜಿಸಿ ಸಂಬಂಧಿಸಿದ ನಾಯಕರಿಗೆ ಎಚ್ಚರಿಕೆ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ.
ನಿನ್ನೆ ಹಾಗೂ ಇಂದು ಹಾಸನದ ಬೇಲೂರಿನಲ್ಲೇ ಬೀಡು ಬಿಟ್ಟಿರುವ ಸಚಿವ ಕ್ರಿಶನ್ ಪಾಲ್ ಗುರ್ಜರ್, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಲು ಬೇಕಾದ ತಂತ್ರಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.(ದಿಗ್ವಿಜಯ ನ್ಯೂಸ್)
3.8 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಡಾಂಬರು ರಸ್ತೆಯನ್ನು ಬರಿಗೈಯಲ್ಲಿ ಕಿತ್ತುಹಾಕಿದ ವ್ಯಕ್ತಿ: ವಿಡಿಯೋ ವೈರಲ್​

ಎಲ್ಲೆಲ್ಲೂ ಒಕ್ಕಲಿಗ ವಧು-ವರರ ಸಮಾವೇಶದ್ದೇ ಮಾತು! ಬಾಳಸಂಗಾತಿ ಹುಡುಕಾಟಕ್ಕೆ ಬಂದ 13 ಸಾವಿರ ಮಂದಿಗೆ ಭಾರೀ ನಿರಾಸೆ…

ಬ್ರೈನ್ ಟ್ಯೂಮರ್​ ಶಸ್ತ್ರಚಿಕಿತ್ಸೆ ಫಲಕಾರಿಯಾದರೂ ಹೃದಯಾಘಾತದಿಂದ ನಿರ್ದೇಶಕ ಮುರಳಿ ಕೃಷ್ಣ ವಿಧಿವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 11 =
Remember me
