ವಿಜಯಪುರ:ಹೃದಯಾಘಾತ (Heart Attack)ದಿಂದ ನಿಧನರಾದ ಸಿಂದಗಿ (Sindagi) ಕ್ಷೇತ್ರದ ಘೋಷಿತ ಜೆಡಿಎಸ್​ ಅಭ್ಯರ್ಥಿ (JDS candidate) ಶಿವಾನಂದ ಪಾಟೀಲ್​ ಸೋಮಜಾಳ (54) ಅವರ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಶಿವಾನಂದ ಪಾಟೀಲ ಸ್ವಗ್ರಾಮ ಸೋಮಜಾಳದಲ್ಲಿ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಶಿವಾನಂದ ಪಾಟೀಲ ಅವರ ಪುತ್ರ ಅಭಿಷೇಕ್, ಪುತ್ರಿ ಐಶ್ವರ್ಯಾ, ಧರ್ಮಪತ್ನಿ ಶ್ರೀಮತಿ ವಿಶಾಲಾಕ್ಷಿ ಅವರಿಗೆ ಸಾಂತ್ವನ ಹೇಳಿದ ಎಚ್​ಡಿಕೆ, ಶಿವಾನಂದ ಪಾಟೀಲ್​ ಸೋಮಜಾಳ ಅವರೊಂದಿಗಿನ ಒಡನಾಟ ನೆನೆದು ಭಾವುಕರಾದರು.

ಮುಂಬರುವ ವಿಧಾನಸಭಾ ಚುನಾವಣೆ (Karnataka Assembly Election)ಯಲ್ಲಿ ಶಿವಾನಂದ ಅವರು ಸ್ಪರ್ಧೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ, ವಿಧಿಯಾಟದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ.

‘ಶಿವಾನಂದ ಪಾಟೀಲರ ಅಗಲಿಕೆ ನನಗೆ ವೈಯಕ್ತಿಕವಾಗಿ ಅತೀವ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಜ.18ರಂದು ಇಡೀ ದಿನ ಅವರು ನನ್ನೊಂದಿಗೆ ಸಿಂದಗಿ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮರುದಿನ ಯಾತ್ರೆಯೊಂದಿಗೆ ನನ್ನನ್ನು ಆತ್ಮೀಯವಾಗಿ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಬೀಳ್ಕೊಟ್ಟಿದ್ದರು. ನಿನ್ನೆ ಮಧ್ಯಾಹ್ನವೂ ಮತ್ತೆ ನಾಗಠಾಣ ಕ್ಷೇತ್ರದ ಯಾತ್ರೆಯಲ್ಲಿ ಭಾಗವಹಿಸಿದ್ದರು. ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಶ್ರೀ ಪಾಟೀಲರು, ಸಮಾಜ ಸೇವೆಯ ಅದಮ್ಯ ಹಂಬಲ ಹೊಂದಿದ್ದರು. ಅತ್ಯುತ್ತಮ ಸಂಘಟನಾ ಶಕ್ತಿ, ಕ್ರಿಯಾಶೀಲತೆ ಹೊಂದಿದ್ದ ಅವರು ಪರಿಚಯವಾದ ಅಲ್ಪಕಾಲದಲ್ಲಿಯೇ ನನಗೆ ಅತ್ಯಂತ ಆತ್ಮೀಯರಾಗಿದ್ದರು ಎಂದು ಸರಣಿ ಟ್ವೀಟ್​ ಮೂಲಕ ಎಚ್​ಡಿಕೆ ಸಂತಾಪ ಸೂಚಿಸಿದ್ದಾರೆ.
ನಟಿ ರಚಿತಾ ರಾಮ್ ವಿರುದ್ಧ ಮದ್ದೂರು ಠಾಣೆಯಲ್ಲಿ ಕೇಸ್​!

ಕರ್ನಾಟಕ ಕಾಂಗ್ರೆಸ್​ ಛಿದ್ರ ಮಾಡಲು 500 ಕೋಟಿ ಆಫರ್: ನಾನು ತೆಲಂಗಾಣ ಸಿಎಂನನ್ನು ಭೇಟಿ ಮಾಡಿದ್ದು ಸತ್ಯ… ಎನ್ನುತ್ತಲೇ ಜಮೀರ್​ ಹೇಳಿದ್ದೇನು?

ಸಿಂದಗಿ ಕ್ಷೇತ್ರದ ಘೋಷಿತ ಜೆಡಿಎಸ್​ ಅಭ್ಯರ್ಥಿ ಶಿವಾನಂದ ಪಾಟೀಲ್ ಹೃದಯಾಘಾತದಿಂದ ನಿಧನ: ಎಚ್​ಡಿಕೆ ಸಂತಾಪ ​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × one =
Remember me
