ಬೆಂಗಳೂರು:ಕಾಂಗ್ರೆಸ್​ ಅಂತಿಮ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಜೆಡಿಎಸ್‌ ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ, ತನ್ನ ತಾರಾ ಪ್ರಚಾರಕರನ್ನು ಬಹಿರಂಗಪಡಿಸಿದೆ.
13 ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್​ ಬಿಡುಗಡೆ ಮಾಡಿದೆ. ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಶಿಧರ್​ ಚನ್ನಬಸಪ್ಪ ಯಲಿಗಾರ್​ ಅವರು ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ:ಸುಮಲತಾ ಬಳಿಕ ಮಂಡ್ಯದಲ್ಲಿ ಜೆಡಿಎಸ್‌ಗೆ ಮತ್ತೊಂದು ಸ್ವಾಭಿಮಾನದ ಅಸ್ತ್ರ!
ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ1. ಗೋಕಾಕ್ : ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರ2. ಕಿತ್ತೂರು: ಅಶ್ವಿನಿ ಸಿಂಗಯ್ಯ ಪೂಜೇರಾ.3. ಯಾದಗಿರಿ- ಎ.ಬಿ.ಮಾಲಕ ರೆಡ್ಡಿ.4. ಬಾಲ್ಕಿ: ರೌಫ್ ಪಟೇಲ್5. ಶಿಗ್ಗಾಂವ್: ಶಶಿಧರ್ ಚನ್ನಬಸಪ್ಪ ಯಲಿಗಾರ6. ಮೊಳಕಾಲ್ಮೂರು: ಮಹಾದೇವಪ್ಪ7. ಪುಲಿಕೇಶಿನಗರ: ಶ್ರೀಮತಿ ಅನುರಾಧ8. ಶಿವಾಜಿನಗರ: ಅಬ್ದುಲ್ಲಾ ಜಫರ್ ಅಲಿ9. ಶಾಂತಿನಗರ: ಮಂಜುನಾಥ್ ಗೌಡ10. ಬೆಳ್ತಂಗಡಿ : ಅಶ್ರಫ್ ಅಲಿ ಕುಂದ್11. ಮಂಗಳೂರು ನಗರ ಉತ್ತರ: ಮೋಹಿನುದ್ದೀನ್ ಬಾವ12. ಮಂಗಳೂರು: ಅಲ್ತಾಫ್ ಕುಂಪಾಲ13. ಬಂಟ್ವಾಳ: ಪ್ರಕಾಶ್ ರಾಫಾಯಲ್ ಗೊಮ್ಸ್
ಇದನ್ನೂ ಓದಿ:ಶಿಕ್ಷೆ ತಡೆಯುವಂತೆ ಕೋರಿ ರಾಹುಲ್​ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ
13 ಅಭ್ಯರ್ಥಿಗಳ ಪಟ್ಟಿಯ ಜತೆಗೆ 26 ಮಂದಿಯ ಸ್ಟಾರ್ ಕ್ಯಾಂಪೇನರ್ ಪಟ್ಟಿಯನ್ನೂ ಸಹ ಜೆಡಿಎಸ್​ ಬಿಡುಗಡೆ ಮಾಡಿದೆ.
ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಸಿ.ಎಂ. ಇಬ್ರಾಹಿಂ, ಎಚ್​.ಡಿ. ರೇವಣ್ಣ, ನಿಖಿಲ್​ ಕುಮಾರಸ್ವಾಮಿ, ಪ್ರಜ್ವಲ್​ ರೇವಣ್ಣ, ಅನಿತಾ ಕುಮಾರಸ್ವಾಮಿ, ಕುಪೇಂದ್ರ ರೆಡ್ಡಿ, ಟಿ.ಎ. ಶರವಣ, ತಿಪ್ಪೇಸ್ವಾಮಿ, ಭೋಜೇಗೌಡ, ಬಿ.ಎಂ. ಫಾರೂಖ್​, ಜಫ್ರುಲ್ಲಾ ಖಾನ್​, ಭವಾನಿ ರೇವಣ್ಣ, ಅಪ್ಪಾಜಿಗೌಡ, ನಜ್ಮಾ ನಜೀರ್​ ಸೇರಿದಂತೆ ಹಲವರು ಪಟ್ಟಿಯಲ್ಲಿದ್ದಾರೆ.
ನೀವು ಟಾಯ್ಲೆಟ್​ನಲ್ಲಿ​ ಮೊಬೈಲ್​ ಬಳಸುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಲೇಬೇಕು….

ಚುನಾವಣಾ ಹಿನ್ನೆಲೆಯಲ್ಲಿ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ; 20ಕ್ಕೂ ಹೆಚ್ಚು ಜನರ ಬಂಧನ

ಹಿಂದೂ ದೇಗುಲದ ಮರವನ್ನು ತಬ್ಬಿ ನಗ್ನ ಫೋಟೊಶೂಟ್; ಮಹಿಳೆ ಗಡಿಪಾರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 9 =
Remember me
