ಹಾಸನ:ಜೆಡಿಎಸ್​ ಮಾಜಿ ಸಚಿವ ಜಿ.ಟಿ.ದೇವೇಗೌಡರು ಪ್ರಧಾನಿ ಮೋದಿ ಪರ ಮಾತನಾಡುವುದು ಹೊಸದಲ್ಲ. ಈ ಹಿಂದೆ ಹಲವು ಬಾರಿ ಅವರು ಬಿಜೆಪಿ, ಮೋದಿಯನ್ನು ಹೊಗಳಿದ್ದಿದೆ. ಆದರೆ ಈಗ ಇದೇ ವಿಚಾರಕ್ಕೆ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ಕೆ.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿ.ಟಿ.ದೇವೇಗೌಡರು ಇಲ್ಲೂ ಇದ್ದು, ಅಲ್ಲಿಯೂ ಇರುವ ಕೆಲಸ ಮಾಡುವುದು ಬೇಡ. ಇದು ಅಶಿಸ್ತಿನ ಪರಮಾವಧಿ, ಅವರು ಸ್ಪಷ್ಟ ನಿಲುವು ತಾಳಲಿ. ಮನಸಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಪಕ್ಷಕ್ಕೆ ಮುಜುಗರ ಆಗಿದೆ. ಅವರ ನಡವಳಿಕೆ ಗಮನಿಸುತ್ತಿದ್ದೇನೆ. ಮೊದಲು ಅಲ್ಲಿ ಮನಸಿತ್ತು, ದೇಹ ಇಲ್ಲಿಯೇ ಇತ್ತು. ಈಗ ದೇಹ ಮತ್ತು ಮನಸು ಎರಡೂ ಬಿಜೆಪಿ ಜತೆಯೇ ಇದೆ. ಹೀಗಾದರೆ ಖಂಡಿತ ವಾರ್ನ್ ಮಾಡುತ್ತೇನೆ. ನಿಷ್ಠೆಯಿಂದ ಇರುವುದಾದರೆ ಪಕ್ಷದಲ್ಲಿ ಇರಬಹುದು ಎಂದು ಕುಮಾರಸ್ವಾಮಿ ಖಡಕ್​ ಆಗಿ ಎಚ್ಚರಿಕೆ ನೀಡಿದ್ದಾರೆ.
ಎಂಎಲ್​ಸಿ ಚುನಾವಣೆಯಲ್ಲಿ ಗುಪ್ತಮತದಾನ ಇತ್ತು. ಆದರೆ ವಿಪ್​ ನೀಡಿರಲಿಲ್ಲ. ಮುಂದಿನ ರಾಜ್ಯಸಭಾ ಚುನಾವಣೆಯಲ್ಲಿ ಕಾನೂನು ಕೈಗೊಳ್ಳಲಾಗುವುದು ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − seven =
Remember me
