ಬೆಂಗಳೂರು:ರೈತರ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೇಮಾವತಿ ಜಲಾಶಯದಿಂದ ಕೂಡಲೆ ನಾಲೆಗಳಿಗೆ ನೀರು ಹರಿಸಬೇಕು ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ನಾಲೆಗಳಿಗೆ ನೀರು ಬಿಡಬೇಕಿದ್ದರೂ ಇನ್ನೂ ನೀರಾವರಿ ಸಲಹಾ ಸಮಿತಿ ಸಭೆಯನ್ನು ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.6.55 ಲಕ್ಷ ಎಕರೆಗೆ ನೀರುಣಿಸುವ ಹೇಮಾವತಿ ಜಲಾಶಯದಿಂದ 43.67 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಸದ್ಯ ಜಲಾಶಯದಲ್ಲಿ 27.20 ಟಿಎಂಸಿ ನೀರಿದ್ದರೂ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಟ್ಟಿಲ್ಲ ಎಂದು ದೂರಿದರು.ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಳಜಿ ತೋರಿಸುವ ಸರ್ಕಾರ, ಅನ್ನದಾತರಾದ ರೈತರನ್ನು ನಿರ್ಲಕ್ಷಿಸಿರುವುದು ಯಾಕೆ ಎಂದು ಪ್ರಶ್ನಿಸಿದರು.
6ನೇ ಗ್ಯಾರಂಟಿ ೋಷಿಸಲಿಡ್ಯಾಂನಲ್ಲಿರುವ ನೀರನ್ನು ಬಿಡುವುದಿಲ್ಲ. ನಾವು ತಮಿಳುನಾಡಿಗೆ ನೀರು ಹರಿಸುತ್ತೇವೆ. ಅಲ್ಲಿ 40 ಲೋಕಸಭೆ ಸೀಟು ಗೆಲ್ಲುವುದು ಮುಖ್ಯ ಎಂದು ರೈತರಿಗೆ ತಿಳಿಸಲಿ. ಈ ಬಾರಿ ನೀರು ಬಿಡದ ಕಾರಣ ಬೆಳೆಪರಿಹಾರ ಕೊಡುತ್ತೇವೆ ಎಂದು 6ನೇ ಗ್ಯಾರಂಟಿಯನ್ನು ೋಷಿಸಲಿ ಎಂದು ಸವಾಲೆಸದರು.ಇಂಡಿಯಾ ಒಕ್ಕೂಟ ಮಾಡಿಕೊಂಡಿರುವುದರಿಂದ ರಾಜ್ಯದಲ್ಲಿ 25 ಸ್ಥಾನ, ತಮಿಳುನಾಡಿನಲ್ಲಿ 40 ಸ್ಥಾನ ಗೆಲ್ಲುತ್ತೇವೆ. ನಮಗೆ ರೈತರ ಹಿತ ಮುಖ್ಯವಲ್ಲ. ರಾಜಕೀಯವೇ ನಮ್ಮ ಗುರಿ ಎಂದು ಹೇಳಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಬಡ್ತಿ ೈಲ್ ಪೆಂಡಿಂಗ್ಎಂಜಿನೀಯರ್‌ಗಳಿಗೆ ಕಳೆದ 6 ತಿಂಗಳಿಂದ ಬಡ್ತಿ ನೀಡಿಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಾದರೂ, ಬಡ್ತಿ ೈಲ್ ಪೆಂಡಿಂಗ್ ಇಟ್ಟುಕೊಂಡು ಕುಳಿತಿರುವುದು ಯಾಕೆ? ಅದರ ಹಿಂದಿನ ಕರಾಮತ್ತು ಏನು? ಎಂದು ಪ್ರಶ್ನಿಸಿದರು.ಕುಮಾರಸ್ವಾಮಿ ಸರ್ಕಾರ ಇದ್ದಾಗ 1 ಸಾವಿರ ಕಿರಿಯ ಮತ್ತು ಸಹಕಾಯಕ ಇಂಜಿನೀಯರ್‌ಗಳನ್ನು ಖಾಯಂಗೊಳಿಸಲಾಗಿತ್ತು. 320 ಇಂಜಿನೀಯರ್‌ಗಳಿಗೆ ಮುಂಬಡ್ತಿ ನೀಡಲಾಗಿತ್ತು ಎಂದರು.
ದಾಖಲೆ ಕೇಳಿದ್ರೆ ಏನ್ ಮಾಡೋಣ?ವರ್ಗಾವಣೆಯಲ್ಲಿ ಕೋಟ್ಯಾಂತರ ರೂ ವಹಿವಾಟು ನಡೆದಿದೆ ಎಂದು ನಾನು ಹೇಳಲಾರೆ. ನಾನು ಹೇಳಿದ ತಕ್ಷಣವೇ ದಾಖಲೆ ಕೊಡಿ ಅಂತ ಕೇಳಿದ್ರೆ ಏನ್ ಮಾಡೋಣ? ಎಂದು ಮುಗುಳ್ನಕ್ಕರು.
ಬಿಲ್ ತಂದರೆ ಬೆಂಬಲದೇಶದಲ್ಲಿ ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ಮಸೂದೆ (ಬಿಲ್) ತರಲಿ. ಅದಕ್ಕೆ ಬೇಷರತ್ ಬೆಂಬಲ ನೀಡಲು ನಾವು ಸಿದ್ದರಿದ್ದೇವೆ. ಎಲ್ಲರನ್ನು ಬಿಟ್ಟು ನಮ್ಮನ್ನ ಮಾತ್ರ ಕುಟುಂಬ ರಾಜಕಾರಣ ಅಂದ್ರೆ ಹೇಗೆ? ನಾವ್ಯಾರು ಹಿಂಬಾಗಿಲಿನಿಂದ ಬಂದಿಲ್ಲ. ಜನರಿಂದ ಆಯ್ಕೆಯಾಗಿ ರಾಜಕಾರಣ ಮಾಡುತ್ತಿದ್ದೇವೆ ಎಂದರು.
ಲೋಕಸಭೆ ಚುನಾವಣೆನಾನು ದೇವೇಗೌಡರ ಹತ್ತಿರ ಬ್ಯಾಗ್ ಹೊತ್ತು ರಾಜಕಾರಣಕ್ಕೆ ಬಂದು 6 ಬಾರಿ ಶಾಸಕನಾಗಿದ್ದೇನೆ. ಲೋಕಸಭೆ ಚುನಾವಣೆಗೆ ಪಕ್ಷದ ವಿಷಯದಲ್ಲಿ ಗೌಡರು ಮತ್ತು ಕುಮಾರಣ್ಣ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ನಾನು ಮತ್ತು ಕುಮಾರಸ್ವಾಮಿ ಹೊಡೆದಾಡುತ್ತಾರೆ ಎಂದು ಯಾರಾದರೂ ಭಾವಿಸಿದ್ದರೆ ಅದು ಭ್ರಮೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
