ಕಲಬುರಗಿ:ಕೆಲವೊಂದು ಬಾರಿ ಅಧಿಕಾರ ಹೊಂದಿದ್ದೇವೆ ಎಂದು ಭಾವಿಸುವ ಕೆಲವರು, ಸಾಮಾಜಿಕ ನಿಯಮಗಳನ್ನು ಮೀರಿ ನಡೆಯುತ್ತಾರೆ. ಅಂತಹವರಿಗೆ ಜನರೇ ತಕ್ಕ ಪಾಠವನ್ನೂ ಕಲಿಸಿಬಿಡುತ್ತಾರೆ. ಅಂತಹ ಘಟನೆ ನಿನ್ನೆ ರಾತ್ರಿ ಕಲಬುರಗಿಯಲ್ಲಿ ನಡೆದಿದೆ.
ಇದನ್ನೂ ಓದಿ:10 ಶಾಸಕರ ಸಸ್ಪೆಂಡ್​: ಕಲಾಪ ಬಹಿಷ್ಕರಿಸಿ ಸ್ಪೀಕರ್​ ವಿರುದ್ಧ ಬಿಜೆಪಿ, ಜೆಡಿಎಸ್​ನಿಂದ ರಾಜ್ಯಪಾಲರಿಗೆ ದೂರು
ಮಹಿಳೆ ಜೊತೆ ಅಕ್ರಮ ಸಂಭಂಧ ಹೊಂದಿದ್ದ ಜೆಡಿಎಸ್ ಮುಖಂಡನಿಗೆ ಜನರೇ ಗೂಸಾ ನೀಡಿದ್ದಾರೆ. ಈ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲಾ ಜೆಡಿಎಸ್ ಮುಖಂಡನಾಗಿರುವ ವಿಷ್ಣುಕಾಂತ ಮೂಲಗಿ , ಐನೊಳ್ಳಿ ಗ್ರಾಮದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈತ ನಿನ್ನೆ ರಾತ್ರಿ ಕುಡಿದು ಟೈಟ್ ಆಗಿ ಹಣದ ಆಮಿಷ ಒಡ್ಡಿ ಮಹಿಳೆಯನ್ನು ಮನೆಗೆ ಕರೆಸಿಕೊಂಡಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಜೆಡಿಎಸ್‌ಗೆ ಸಿದ್ದಾಂತವಿಲ್ಲ, ಇವರಿಗೆ ಮಾತ್ರ ಸಿದ್ದಾಂತವಿದ್ಯಾ?; ಸಿಎಂ ಹೇಳಿಕೆಗೆ ಎಚ್​ಡಿಕೆ ತಿರುಗೇಟು
ಈತನ ಅನೈತಿಕ ಸಂಬಂಧದಿಂದ ರೋಸಿ ಹೋಗಿದ್ದ ಏರಿಯಾದ ಜನರು ಬೇಸತ್ತು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇಲ್ಲಿನ ಜನರು, ಮುಖಂಡನ ಅನೈತಿಕ ಸಂಬಂಧದಿಂದಾಗಿ ತಮ್ಮ ಏರಿಯಾದ ಹೆಸರೇ ಹಾಳಾಗುವುದು ಎಂದು ಹಲವು ತಿಂಗಳುಗಳಿಂದ ಸುಮ್ಮನಿದ್ದರು. ಈ ಅನೈತಿಕ ಸಂಬಂಧದಿಂದಾಗಿ ಹೆಣ್ಣು ಮಕ್ಕಳು ತಲೆ ಎತ್ತಿ ಓಡಾಡೋದಕ್ಕೆ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದ್ದ ಕಾರಣ ಜೆಡಿಎಸ್​ ಮುಖಂಡನಿಗೆ ಧರ್ಮದೇಟು ಲಭಿಸಿದೆ.
ಇದನ್ನೂ ಓದಿ:ತಳಮಟ್ಟದಿಂದ ಜೆಡಿಎಸ್, ಬಿಜೆಪಿ ಮೈತ್ರಿಯಾಗಲಿ
ಸದ್ಯ ಜೆಡಿಎಸ್ ಮುಖಂಡನಿಗೆ ಗೂಸಾ ಬಿದ್ದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
