ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಹಣಿಯುವ ಉದ್ದೇಶದಿಂದ ಬಿಜೆಪಿ ಜತೆ ಕೈಜೋಡಿಸಿ ಎನ್​ಡಿಎ ಮಿತ್ರಪಕ್ಷ ಆಗಲು ಬಯಸಿರುವ ಜೆಡಿಎಸ್ ಈ ಸಂಬಂಧ ಶೀಘ್ರ ನಿರ್ಧಾರ ಕೈಗೊಳ್ಳಲಿದೆ. ಕರ್ನಾಟಕದಲ್ಲಿ ಜೆಡಿಎಸ್ ಅನ್ನು ಮುಗಿಸುವ ಕಾಂಗ್ರೆಸ್ ನಾಯಕರ ಕಾರ್ಯತಂತ್ರದ ವಿರುದ್ಧ ಸಿಡಿದೆದ್ದಿರುವ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಪಕ್ಷವನ್ನು ಎನ್​ಡಿಎ ಜತೆ ಸೇರಿಸಲಿದ್ದಾರೆಂದು ಜೆಡಿಎಸ್​ನ ಉನ್ನತ ಮೂಲಗಳು ಖಚಿತಪಡಿಸಿವೆ. ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗಲಿದೆ ಎಂದು ಇತ್ತೀಚೆಗೆ ಹರಿದಾಡಿದ್ದ ಸುದ್ದಿಗಳನ್ನು ಎಚ್ಡಿಕೆ ಅಲ್ಲಗಳೆದಿದ್ದರಾದರೂ ಯಾವುದೇ ರಾಜಕೀಯ ಬೆಳವಣಿಗೆಗಳು ಬೇಕಾದರೂ ನಡೆಯಬಹುದೆನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದರು. ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವಿಲೀನದ ಬದಲಾಗಿ ಬಿಜೆಪಿಯ ಮಿತ್ರಪಕ್ಷವಾಗಿರುವ ನಿರ್ಧಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್​ನ ಮತವಿಭಜನೆ ಕಾರಣದಿಂದಲೇ ವಿಲೀನಕ್ಕೆ ಬದಲಾಗಿ ಪಕ್ಷವನ್ನು ಉಳಿಸಿಕೊಂಡು ಬೆಳೆಸಲು ಎರಡೂ ಪಕ್ಷಗಳು ಈ ತೀರ್ವನಕ್ಕೆ ಬಂದಿವೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಸ್ಥಾನಗಳು ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸಿರುವುದು ವಿಶ್ವಾಸ ಹೆಚ್ಚಿಸಿದೆ. ಎಚ್ಡಿಕೆ ಅವರ ಕಾಂಗ್ರೆಸ್ ವಿರುದ್ಧದ ಆಕ್ರೋಶಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ಸಿದ್ದರಾಮಯ್ಯ ಅವರಾದರೆ, ಮತ್ತೊಂದು ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹೋದರರು. ಸಿದ್ದರಾಮಯ್ಯ ಬೆಂಬಲಿಗರಿಂದಲೇ ಸರ್ಕಾರ ಬಿದ್ದು ಹೋಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಪದೇಪದೆ ಕೆಣಕುತ್ತ ವಾಗ್ದಾಳಿ ಮಾಡುತ್ತಿದ್ದಾರೆ.
ಆದ್ದರಿಂದ ಬಿಜೆಪಿ ಜತೆ ಸೇರಿ ಕಾಂಗ್ರೆಸ್ಸನ್ನು ದುರ್ಬಲಗೊಳಿಸಿ ಉತ್ತರ ನೀಡಬೇಕು ಎಂಬುದು ಕುಮಾರಸ್ವಾಮಿ ಉದ್ದೇಶ. ಇದರ ಜತೆಗೆ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್​ನ ಜನಪ್ರತಿನಿಧಿಗಳು, ಪದಾಧಿಕಾರಿಗಳನ್ನು ಹೈಜಾಕ್ ಮಾಡಿ ಕಾಂಗ್ರೆಸ್​ಗೆ ಸೇರಿಸಿಕೊಂಡು ತಮ್ಮ ಸ್ವಕ್ಷೇತ್ರದಲ್ಲಿಯೇ ಹೊಸದಾಗಿ ಪಕ್ಷ ಕಟ್ಟುವ ಸ್ಥಿತಿಯನ್ನು ತಂದಿಟ್ಟಿರುವುದು ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. ಮುಂದಿನ ಲೋಕಸಭಾ ಚುನಾವಣೆಗೂ ಇದೇ ಕ್ಷೇತ್ರದಿಂದ ಸ್ಪರ್ಧಿಸಬಾರದೇಕೆಂಬ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಮುಂದಿನ ವರ್ಷ ಜೂನ್​ನಲ್ಲಿ ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಒಂದು ಸ್ಥಾನವನ್ನು ಜೆಡಿಎಸ್ ಸುಲಭವಾಗಿ ಗೆಲ್ಲಲಿದೆ. ಆ ಸ್ಥಾನಕ್ಕೆ ಕುಮಾರಸ್ವಾಮಿ ಅವರನ್ನೇ ನಿಲ್ಲಿಸಿ ಕೇಂದ್ರದಲ್ಲಿ ಸಚಿವರನ್ನಾಗಿ ಮಾಡುವ ಬಗ್ಗೆಯೂ ಚರ್ಚೆ ನಡೆದಿರುವುದಾಗಿ ಮೂಲಗಳು ಹೇಳಿವೆ. ವಿಧಾನಸಭಾ ಚುನಾವಣೆ 2023ರಲ್ಲಿ ನಡೆಯಲಿದೆ. ಆದ್ದರಿಂದ ಒಂದು ವರ್ಷ ಕೇಂದ್ರ ಸಚಿವರಾಗಿ ಪಕ್ಷ ಸಂಘಟಿಸಿದರೆ ಎನ್​ಡಿಎ ಮೈತ್ರಿಕೂಟಕ್ಕೆ ಅನುಕೂಲವಾಗುತ್ತದೆ ಎಂದು ತಂತ್ರ ರೂಪಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ಒಳಒಪ್ಪಂದ ಸಫಲ:ಕಾಂಗ್ರೆಸ್​ಗೆ ಪಾಠ ಕಲಿಸುವ ಸಲುವಾಗಿಯೇ ಆರ್​ಆರ್ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು. ಆ ಪ್ರಯತ್ನದಲ್ಲಿ ಸಫಲವಾದವು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಒಟ್ಟಾಗಿ ಸೇರುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ಉದ್ದೇಶ ಜೆಡಿಎಸ್ ಮುಗಿಸಬೇಕು ಎಂಬುದೇ ಆಗಿದೆ. ಆದ್ದರಿಂದಲೇ ಎಚ್ಚರಿಕೆಯ ಹೆಜ್ಜೆಯನ್ನಿಡಲು ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ.
ಪ್ರಿಯತಮನಿಗೆ ಜಾಮೀನು ಕೊಡಿಸಲು ಒಪ್ಪದ ಅಪ್ಪ; ಸಿಟ್ಟಿಗೆದ್ದ ಅಪ್ರಾಪ್ತೆ ಹೀಗಾ ಮಾಡೋದು?

ಯುವ ಧೂಮಪಾನಿಗಳಿಗಿದು ‘ಉಸಿರುಗಟ್ಟಿಸೋ’ ಸುದ್ದಿ; ಅವರನ್ನೇ ಗುರಿಯಾಗಿಸಿದೆ ಕೇಂದ್ರ ಸರ್ಕಾರದ ಹೊಸ ‘ಬಿಲ್ಲು’!

ಪ್ರಿಯಕರನಿಂದ ಮಗಳನ್ನೇ ರೇಪ್​ ಮಾಡಿಸಿದ ತಾಯಿ! 15 ವರ್ಷಕ್ಕೇ ಮಗುವಿಗೆ ಜನ್ಮ ನೀಡಿದ ಮಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 9 =
Remember me
