ಮಂಡ್ಯ :ಬಿಜೆಪಿ ಜತೆಗೆ ಜೆಡಿಎಸ್ ವಿಲೀನ ಆಗಲಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್ಸಿನವರು. ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವುದಕ್ಕೆ ಈ ರೀತಿ ಎಲ್ಲ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಜೆಡಿಎಸ್​ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.
ಬಿಜೆಪಿ ಅಥವಾ ಜೆಡಿಎಸ್​ ಪಕ್ಷದ ನಾಯಕರು ಯಾರೂ ವಿಲೀನ ವಿಚಾರದ ಪ್ರಸ್ತಾಪವನ್ನೇ ಮಾಡಿಲ್ಲ. ಹೀಗಿದ್ದಾಗ್ಯೂ, ಕಾಂಗ್ರೆಸ್ ಪಕ್ಷದವರು ಕಥೆಗಳನ್ನು ಹುಟ್ಟುಹಾಕಿ ಜೆಡಿಎಸ್ ಪಕ್ಷವನ್ನು ಮುಗಿಸುವುದಕ್ಕೆ ಸಂಚು ರೂಪಿಸಿದ್ದಾರೆ. 33 ಶಾಸಕರ ಪೈಕಿ ಇಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಕುಮಾರಸ್ವಾಮಿಯವರ ಜತೆಗೆ ಇದ್ದೇವೆ.
ಇದನ್ನೂ ಓದಿ:ಹೊಸವರ್ಷಕ್ಕೆ ‘ಶೈಕ್ಷಣಿಕ ಹಬ್ಬದ’ಸಿದ್ಧತೆ, ಶಾಲೆ ಪುನರಾರಂಭ ಹಿನ್ನೆಲೆಯಲ್ಲಿ ಗರಿಗೆದರಿದ ಶೈಕ್ಷಣಿಕ ಚಟುವಟಿಕೆ, ತಳಿರು ತೋರಣಗಳಿಂದ ವಿದ್ಯಾರ್ಥಿಗಳಿಗೆ ಸ್ವಾಗತ
ಇಬ್ಬರು ಶಾಸಕರಿಗೆ ಕೊಂಚ ಅಸಮಾಧಾನವಾಗಿದೆ. ಸಚಿವರಾಗಿದ್ದವರು ಅವರು. ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ಅಸಮಾಧಾನಕ್ಕೆ ಪರಿಹಾರ ಅಲ್ಲಿ ಸಿಗಬಹುದು. ಅಸಮಾಧಾನ ಏನು ಎಂಬ ವಿವರ ನಮಗಿಲ್ಲ. ಇನ್ನು ಬಿಜೆಪಿಗೆ ನಾವು ವಿಷಯಾಧಾರಿತ ಬೆಂಬಲವನ್ನು ನೀಡುತ್ತೇವೆ. ಇದು ಪಕ್ಷದ ನಿಲುವು ಎಂದು ಸುರೇಶ್ ಗೌಡ ಸ್ಪಷ್ಟಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಮಕರ ಸಂಕ್ರಮಣದಲ್ಲಿ ಐತಿಹಾಸಿಕ ಬದಲಾವಣೆಗಳಾಗಲಿವೆ ನಿರೀಕ್ಷಿಸಿ! : ಕುತೂಹಲ ಕೆರಳಿಸಿದೆ ಯತ್ನಾಳರ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 3 =
Remember me
