ಹಾಸನ:ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆದು ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಭಕ್ತರು ತಾಯಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಮೂರನೇ ದಿನವಾದ ಹಿಂದು ಹಾಸನಾಂಬೆ ದೇವಾಲಯದ ಆವರಣ ಹೈಡ್ರಾಮವೊಂದಕ್ಕೆ ಸಾಕ್ಷಿಯಾಯಿತು. ಹೋಮಕ್ಕೆ ಮತ್ತು ಕಳಸ ಪ್ರತಿಷ್ಠಾಪನೆಗೆ ಆಹ್ವಾನ ನೀಡಿಲ್ಲ ಅಂತ ಜಿಲ್ಲಾಧಿಕಾರಿ ಸತ್ಯಭಾಮ ವಿರುದ್ಧ ಹಾಸನ ಶಾಸಕ ಸ್ವರೂಪ್​ ಪ್ರಕಾಶ್​ ಆಕ್ರೋಶ ಹೊರ ಹಾಕಿ, ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.
ಹಾಸನಾಂಬೆ ದೇವಾಲಯ ಮುಂಭಾಗ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ ಸ್ವರೂಪ್​, ಸತ್ಯಭಾಮ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಜಾತ್ರೆಯ ಸಮಯದಲ್ಲಿ ನನ್ನನ್ನು ಕಡೆಗಣಿಸುವ ಮೂಲಕ ಶಿಷ್ಠಾಚಾರವನ್ನು ಉಲ್ಲಂಘನೆ ಮಾಡಿದ್ದಾರೆ. ನಾನೇನು ದನ ಕಾಯುವುದಕ್ಕೆ ಇದಿನಾ? ನೀವೇ ಎಲ್ಲ ಮಾಡಿ ನನ್ನ ಕರದೇ ಇಲ್ಲ. ಕಳಸ ಬದಲಾವಣೆಗೂ ಕರೆದಿಲ್ಲ ಎಂದು ಅಸಮಾಧಾನ ಹೊರಹಾಕಿದರು. 32ನೇ ವಾರ್ಡಿನ ರಾಜೇಶ್ ಮತ್ತು ಬೆಂಬಲಿಗರೊಂದಿಗೆ ಆಗಮಿಸಿ ಹಾಸನಾಂಬೆ ಮುಂದೆ ಡಿಸಿಯೊಂದಿಗೆ ವಾಗ್ವಾದ ನಡೆಸಿದರು.
ಭಕ್ತರ ಹಾಸನಾಂಬೆ ದರ್ಶನದ ನಡುವೆ ಸತ್ಯಭಾಮ ಜತೆಗೆ ಜಟಾಪಟಿ ಮುಂದುವರಿಸಿದ ಸ್ವರೂಪ್​, ನಾನು ಎರಡು ಲಕ್ಷ ಜನರ ಪ್ರತಿನಿಧಿ. ನಾನು ಜನರಿಗೆ ಉತ್ತರ ಕೊಡಬೇಕಾಗಿದೆ. ನೀವು ಗಂಡ-ಹೆಂಡತಿ ಇಬ್ಬರೆ ಹೋಮ ಮಾಡಿದ್ದೀರಿ. ನನ್ನೇಕೆ ಕರೆದಿಲ್ಲ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸತ್ಯಭಾಮ, ನಿಮ್ಮ ರೀತಿ ನಮಗೂ ಪಾಸ್ ಇರುತ್ತೆ ಅಲ್ವಾ, ಸ್ವಲ್ಪ ಸಮಾಧಾನದಿಂದಿರಿ ಎಂದರು. .ನೀವು ಕಳಸ ಪ್ರತಿಷ್ಠಾಪನೆ ಮಾಡುವಾಗಲೂ ನಮಗೆ ಏಕೆ ತಿಳಿಸಿಲ್ಲ? ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ, ಇಲ್ಲದಿದ್ದರೆ ನಾನು ಇಲ್ಲೇ ಕೂರುತ್ತೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸತ್ಯಭಾಮ, ಎಲ್ಲರೂ ಒಟ್ಟಿಗೆರ ಮಾತನಾಡಿದರೆ ಹೇಗೆ ಉತ್ತರ ಕೊಡಲಿ? ದಯವಿಟ್ಟು ನಿಧಾನವಾಗಿ ಮಾತನಾಡಿ ಎಂದು ಶಾಸಕರಿಗೂ ಮತ್ತು ಬೆಂಬಲಿಗರಿಗೂ ಮನವಿ ಮಾಡಿದರು.
ಇಂದು ಭಕ್ತರ ಸಂಖ್ಯೆ ಕೊಂಚ ಕಡಿಮೆಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಭಕ್ತರು ಸಾರಾಗವಾಗಿ ಮತ್ತು ಶಾಂತಿಯುತವಾಗಿ ದೇವರ ದರ್ಶನವನ್ನು ಪಡೆಯುತ್ತಿದ್ದಾರೆ. ಅಂದಹಾಗೆ ಹಾಸನಾಂಬೆ ದೇವಸ್ಥಾನದ ಗರ್ಭಗುಡಿಯನ್ನು ನವೆಂಬರ್​ 2ರಂದು ತೆರೆಯಲಾಯಿತು. ಮೊದಲ ದಿನ ಭಕ್ತರ ದರ್ಶನಕ್ಕೆ ಅವಕಾಶ ಇರಲಿಲ್ಲ. ನ.3ರಿಂದ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಸಾವಿರ ಸಂಖ್ಯೆಯಲ್ಲಿ ಭಕ್ತರು ಪ್ರತಿದಿನ ದರ್ಶನ ಪಡೆಯುತ್ತಿದ್ದಾರೆ.
“ಅವರು ನಮ್ಮನ್ನು ತನ್ನ ಕಚೇರಿಗೆ ಕರೆದು ಅಶ್ಲೀಲ ಕೃತ್ಯ ಎಸಗುತ್ತಿದ್ದರು”; ಪ್ರಾಂಶುಪಾಲರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

ಕರಿಷ್ಮಾ, ರವಿನಾ ಜೊತೆ ಸುತ್ತಾಡಿ ಕಾಜೋಲ್ ಕೈಹಿಡಿದರೇ ಅಜಯ್ ದೇವಗನ್ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 18 =
Remember me
