ಕೋಲಾರ:ಮುಳಬಾಗಿಲು ಮತ್ತು ಬಂಗಾರಪೇಟೆಯಲ್ಲಿ ಯಶ್ವಸ್ವಿಯಾಗಿ ನಡೆದ ಪಂಚರತ್ನ ರಥಯಾತ್ರೆಯು ಇಂದು(ಭಾನುವಾರ) ಮಾಲೂರಿಗೆ ತಲುಪಿದೆ. ಮಾಲೂರಿನ ಕೆಂಪಸಂದ್ರದಿಂದ ರಥಯಾತ್ರೆ ಆರಂಭಗೊಂಡಿದ್ದು, ಜೆಡಿಎಸ್​ ಶಕ್ತಿ ಪ್ರದರ್ಶನ ನಡೆಯುತ್ತಿದೆ. ರಾತ್ರಿ‌ 7.15ಕ್ಕೆ ಶಿವಾರಪಟ್ಟಣದಲ್ಲಿ‌ ಗ್ರಾಮಸಭೆ ನಡೆಸುವ ಕುಮಾರಸ್ವಾಮಿ, ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ಕ್ಷೇತ್ರದ ಮಾಗೇರಿ ಗ್ರಾಮದಲ್ಲಿ ನಿನ್ನೆ(ಶನಿವಾರ) ವಾಸ್ತವ್ಯ ಹೂಡಿದ್ದ ಎಚ್.ಡಿ.ಕುಮಾರಸ್ವಾಮಿ, ರಾತ್ರಿ ಗ್ರಾಮಸಭೆ ನಡೆಸಿದ್ದರು. ಇಡೀ ಗ್ರಾಮವನ್ನು ತಳಿರು-ತೋರಣದಿಂದ ಅಲಂಕಾರ ಮಾಡಲಾಗಿತ್ತು. ಕುಮಾರಸ್ವಾಮಿ ಬರ್ತಾರೆ ಅಂತ ಮನೆಗಳ ಮುಂದೆ ರಂಗೋಲಿ ಬಿಡಿಸಿ, ಬಾಳೆಕಂದು ಕಟ್ಟಿ ಸಿಂಗರಿಸಲಾಗಿತ್ತು.
ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಕೆಂಪಸಂದ್ರ ಗ್ರಾಮದ ಬಳಿ ವೃದ್ಧರೊಬ್ಬರ ಅಭಿಮಾನ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಆ ಹಿರಿಯರ ಯೋಗಕ್ಷೇಮ ವಿಚಾರಿಸಿದೆ.#ಪಂಚರತ್ನ_ರಥಯಾತ್ರೆ#ಕೋಲಾರpic.twitter.com/9vmXBT7ssF
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy)November 20, 2022

ಮಾಗೇರಿ ಗ್ರಾಮದಲ್ಲಿ ಗ್ರಾಮಸ್ಥರ ಜತೆ ಸಂವಾದ ನಡೆಸಿದ ಎಚ್​ಡಿಕೆ, ರಾತ್ರಿ 12 ಗಂಟೆವರೆಗೂ ಜನರ ಸಮಸ್ಯೆ ಆಲಿಸಿದರು. ಮಹಿಳೆಯರು, ಯುವಕರು, ರೈತರು, ವೃದ್ಧರು, ಅಂಗವಿಕರು ಸೇರಿದಂತೆ ನುರಾರು ಮಂದಿ ಎಚ್​ಡಿಕೆ ಬಳಿ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡು ಬಗೆಹರಿಸುವಂತೆ ಮನವಿ ಮಾಡಿದರು. ರಾತ್ರಿ ಐತಿಹಾಸಿಕ ಶ್ರೀ ವೆಂಕಟರಮಣ ದೇವಾಲಯದಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಎದ್ದ ಕೂಡಲೇ ಪತ್ರಿಕೆಗಳತ್ತ ಕಣ್ಣಾಡಿಸಿದ ಕುಮಾರಸ್ವಾಮಿ, ನಂತರ ಶ್ರೀ ವೆಂಕಟರಮಣ ದೇವರ ದರ್ಶನ ಪಡೆದರು. ಬೆಳಗ್ಗೆ ಮತ್ತೊಮ್ಮೆ ಗ್ರಾಮ ಸಭೆ ನಡೆಸಿ, ರಾಗಿ, ಟೊಮ್ಯಾಟೊ, ತರಕಾರಿ ತೋಟಗಳ ಬಗ್ಗೆ ಬೆಳಗ್ಗೆ ಮಾಹಿತಿ ಪಡೆದರು.
ಪಂಚರತ್ನ ರಥಯಾತ್ರೆ ನಿಮಿತ್ತ ಶನಿವಾರ ರಾತ್ರಿ ಬಂಗಾರಪೇಟೆ ಕ್ಷೇತ್ರದ ಮಾಗೇರಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದೆ. ಇಂದು ಬೆಳಗ್ಗೆ ಶ್ರಿ ಮಾಗೇರಿ ವೆಂಕಟರಮಣ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದೆ.#ಪಂಚರತ್ನ_ರಥಯಾತ್ರೆpic.twitter.com/G8oWX2O6Yz
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy)November 20, 2022

ಮಂಗಳೂರಿನಲ್ಲಿ ಆಟೋ ಸ್ಫೋಟ ಪ್ರಕರಣ: ತುಮಕೂರಿನ ರೈಲ್ವೆ ಸಿಬ್ಬಂದಿ ಹೆಸರಲ್ಲಿ ಆಧಾರ್​ ಕಾರ್ಡ್ ಪತ್ತೆ!

ಮಂಗಳೂರಿನಲ್ಲಿ ಆಟೋ ಸ್ಫೋಟ: ಪ್ರಯಾಣಿಕನೇ ತನಿಖೆಯ ಮೂಲ ವ್ಯಕ್ತಿ! ಅನುಮಾನ ಹುಟ್ಟಿಸಿದೆ ಪಂಪ್‌ವೆಲ್​ಗೆ ಪ್ರಯಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
