ಕೋಲಾರ:ಜೆಡಿಎಸ್​ನ ಪಂಚರತ್ನ ರಥಯಾತ್ರೆಯು ಇಂದು(ಶನಿವಾರ) ಬಂಗಾರಪೇಟೆ ಕ್ಷೇತ್ರ ಪ್ರವೇಶಿಸಿದ್ದು, ದಾರಿಯುದ್ದಕ್ಕೂ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ.
ಮುಳಬಾಗಿಲುನಿಂದ ಬಂಗಾರಪೇಟೆ ಕ್ಷೇತ್ರಕ್ಕೆ ತೆರಳುವ ಮಾರ್ಗ ಮಧ್ಯೆ ರೈತ ಮಹಿಳೆಯರು ಕುಮಾರಸ್ವಾಮಿಗೆ ರಾಗಿ ತೆನೆ ನೀಡಿ ಶುಭಕೋರಿದರು. ಕೋವಿಡ್ ಸಂಕಷ್ಟದಲ್ಲಿ ತತ್ತರಿಸಿದ್ದೇವೆ. ಸ್ತ್ರೀಶಕ್ತಿ ಸಂಘಗಳಿಂದ ನಾವು ಪಡೆದಿರುವ ಸಾಲವನ್ನು ಮನ್ನಾ ಮಾಡಿ ಎಂದು ಕುಮಾರಸ್ವಾಮಿಗೆ ಇದೇ ವೇಳೆ ಮನವಿ ಮಾಡಿದರು. ಬಂಗಾರಪೇಟೆ ಕ್ಷೇತ್ರದ ಶಾಪೂರು ಗ್ರಾಮದಕ್ಕೆ ಪಂಚರತ್ನ ರಥಯಾತ್ರೆ ಪ್ರವೇಶಿಸುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಅಕ್ಕರೆಯಿಂದ ಸ್ವಾಗತಿಸಿದರು.
ಪಂಚರತ್ನ ರಥಯಾತ್ರೆ ನಿಮಿತ್ತ ಬಂಗಾರಪೇಟೆ ಕ್ಷೇತ್ರಕ್ಕೆ ತೆರಳುವ ಮಾರ್ಗದ ನಡುವೆ ಭೇಟಿಯಾದ ರೈತಾಪಿ ತಾಯಂದಿರು ರಾಗಿ ತೆನೆ ನೀಡಿದರು. ಅವರ ಅಕ್ಕರೆ, ವಾತ್ಸಲ್ಯಕ್ಕೆ ನಾನು ಚಿರಋಣಿ.ಕೋವಿಡ್ ಸಂಕಷ್ಟದಲ್ಲಿ ತತ್ತರಿಸಿರುವ ಇವರು, ತಾವು ಸ್ತ್ರೀ ಶಕ್ತಿ ಸಂಘಗಳಿಂದ ಪಡೆದಿರುವ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರು.#ಪಂಚರತ್ನ_ರಥಯಾತ್ರೆpic.twitter.com/x1l0XCcWLe
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy)November 19, 2022

ಬಂಗಾರಪೇಟೆ ಕ್ಷೇತ್ರದ ತಂಬಿಹಳ್ಳಿ ಬಳಿ ಕುಮಾರಸ್ವಾಮಿಗೆ ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ, ಮೂಲಕ ಪುಷ್ಪಾರ್ಚನೆ ಮಾಡಿ ಗ್ರಾಮಸ್ಥರು ಮತ್ತು ಕಾರ್ಯಕರ್ತರು ಅಭಿಮಾನ ಮೆರೆದರು. ರಥಯಾತ್ರೆಯ ಪ್ರಚಾರ ವಾಹನ ಏರಿದ ಎಚ್​ಡಿಕೆ, ರೋಡ್ ಶೋ ನಡೆಸಿದರು.
ಪಂಚರತ್ನ ರಥಯಾತ್ರೆ ನಿಮಿತ್ತ ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಿಂದ ಬಂಗಾರಪೇಟೆ ವಿಧಾನಸಭೆ ಕ್ಷೇತ್ರಕ್ಕೆ ತೆರಳುವಾಗ ನನಗೆ ಎದುರುಗೊಂಡ ವೃದ್ಧ ದಂಪತಿ.ಅವರ ಮನವಿ, ಕಷ್ಟಕ್ಕೆ ಸ್ಪಂದಿಸಿ ಮುಂದೆ ತೆರಳಿದೆ. ಅವರ ಬೇಡಿಕೆ ಒಂದು ಸೂರು.#ಪಂಚರತ್ನ_ರಥಯಾತ್ರೆ#ವಸತಿಯ_ಆಸರೆ@JDSAgainpic.twitter.com/btbijoQ1rd
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy)November 19, 2022

ಮುಳಬಾಗಿಲು ನಗರ ಹೊರವಲಯದಲ್ಲಿ ನಿನ್ನೆ(ಶುಕ್ರವಾರ) ಬೃಹತ್​ ಸಮಾವೇಶದೊಂದಿಗೆ ಪಂಚರತ್ನ ರಥಯಾತ್ರೆ ಆರಂಭವಾಗಿದೆ. ನಿನ್ನೆ ರಾತ್ರಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಕುಮಾರಸ್ವಾಮಿಯನ್ನು ಮುಳಬಾಗಿಲು ಕ್ಷೇತ್ರದ ಊರುಕುಂಟೆ ಮಿಟ್ಟೂರು ಗ್ರಾಮಸ್ಥರು ಊರಿನ ಹೆಬ್ಬಾಗಿಲಿನಲ್ಲಿ ಬೃಹತ್​ ಸೇಬಿನ ಹಾರ ಹಾಕಿ, ಹೂವಿನ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಇಂದು(ಶನಿವಾರ) ಬೆಳಗ್ಗೆ ವಾಸ್ತವ್ಯ ಹೂಡಿದ್ದ ಶಾಲೆಗೆ ಭೇಟಿ ನೀಡಿ ಮಕ್ಕಳು ಮತ್ತು ಶಿಕ್ಷಕರ ಜತೆ ಕೆಲಕಾಲ ಎಚ್​ಡಿಕೆ ಸಂವಾದ ನಡೆಸಿದರು. ಅವರೊಂದಿಗೆ ತಿಂಡಿ ಸವಿದರು.
ಪಂಚರತ್ನ ರಥಯಾತ್ರೆ ನಿಮಿತ್ತ ಇಂದು ರಾತ್ರಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ನನ್ನನ್ನು ಮುಳಬಾಗಿಲು ಕ್ಷೇತ್ರದ ಊರುಕುಂಟೆ ಮಿಟ್ಟೂರು ಗ್ರಾಮಸ್ಥರು ಊರಿನ ಹೆಬ್ಬಾಗಿಲಿನಲ್ಲಿ ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ್ದು ಹೀಗೆ.#ಪಂಚರತ್ನ_ರಥಯಾತ್ರೆpic.twitter.com/TAFTv79yz6
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy)November 18, 2022

ತಮಿಳು ಮಕ್ಕಳ ಕನ್ನಡ ಪ್ರೀತಿ! ಸ್ವಗ್ರಾಮದಲ್ಲಿ ತಮಿಳು ಶಾಲೆ ಇದ್ದರೂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲೇ ಓದುತ್ತಿದ್ದಾರೆ…

ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿ… ಎನ್ನುತ್ತಲೇ ಇಂದು ನಡೆಯಬೇಕಿದ್ದ ಬಹುನಿರೀಕ್ಷಿತ ಕಾರ್ಯವನ್ನು ಮುಂದೂಡಿದ ಎಚ್​ಡಿಕೆ!

ಮತದಾರರ ಪಟ್ಟಿ ಅಕ್ರಮ ಪರಿಷ್ಕರಣೆ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one − one =
Remember me
