ಬೆಂಗಳೂರು:ನವೆಂಬರ್ 1, ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಜೆಡಿಎಸ್ ವತಿಯಿಂದ ಮನೆಮನೆಗೆ ನಾಡಧ್ವಜ ಎಂಬ ಅಭಿಯಾನ ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಮಾದರಿಯಲ್ಲಿ ಜೆಡಿಎಸ್ ಈ ಅಭಿಯಾನ ಆರಂಭಿಸಲಿದೆ.
ಅಭಿಯಾನದ ಹಿನ್ನಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಹೆಚ್​.ಡಿ. ಕುಮಾರಸ್ವಾಮಿ, ಸೇರಿದಂತೆ ಪಕ್ಷದ ನಾಯಕರು ಜೆಡಿಎಸ್​ ಕಚೇರಿಯಲ್ಲಿ ಸಭೆ ಹಮ್ಮಿಕೊಂಡಿದ್ದು, ಪ್ರಾದೇಶಿಕವಾಗಿ ಪಕ್ಷದ ಶಕ್ತಿ ಹೆಚ್ಚಿಸಿಕೊಳ್ಳಲು ವಿಶೇಷ ಯೋಜನೆ ಹಾಕಿಕೊಂಡಿದೆ.
ಮನೆಮನೆಗೆ ನಾಡಧ್ವಜ ಅಭಿಯಾನದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಜೆಡಿಎಸ್​ ಸಿದ್ದತೆ ರೂಪಿಸಿಕೊಂಡಿದೆ. ರಾಷ್ಟ್ರಪ್ರೇಮದ ಜತೆಗೆ ರಾಜ್ಯ ಪ್ರೇಮ ಎನ್ನುವ ಸಂದೇಶವನ್ನು ರವಾನಿಸಲು ಜೆಡಿಎಸ್ ಪಕ್ಷ ಮುಂದಾಗಿದೆ.
ಆಗಸ್ಟ್ 15 ರಂದು ನಡೆದ ಹರ್ ಘರ್ ತಿರಂಗ ಅಭಿಯಾನದ ಸಮಯದಲ್ಲಿ ಮನೆಗಳ ಮೇಲೆ ಬಾವುಟ ಹಾರಿಸಲಾಗಿತ್ತು. ಇದೀಗ ನವೆಂಬರ್ 1 ರಿಂದ 15 ದಿನಗಳ ಕಾಲ ಮನೆಯಲ್ಲಿ ಕನ್ನಡ ಬಾವುಟ ಹಾರಿಸಲು ಸಜ್ಜಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + five =
Remember me
