ಬೆಂಗಳೂರು:ನಕಲಿ ನಂಬರ್ ಪ್ಲೇಟ್ ದಂಧೆ ಹಿಂದೆ ಜೆಡಿಎಸ್ ಮುಖಂಡನೋರ್ವ ಇರುವ ಬಗ್ಗೆ ಹೈಗ್ರೌಂಡ್​ ಪೊಲೀಸರು ಭಾರೀ ಟ್ವಿಸ್ಟ್​ ನೀಡಿದ್ದಾರೆ. ಅದಲ್ಲದೇ ಬಂಧನಕ್ಕೆ ಒಳಗಾದ ವ್ಯಕ್ತಿ ಟಿಕೆಟ್​ ಆಕಾಂಕ್ಷಿಯೂ ಆಗಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಕಾರಿನ ನಂಬರ್ ಪ್ಲೇಟ್​​ ಮೇಲೆ ‘ಪಪ್ಪಾ’ ಎಂದು ಬರೆಸಿದವನಿಗೆ ಬಿತ್ತು ದಂಡ
ಎಂಎಲ್​ಸಿ ಬೋಜೆಗೌಡ ಕಾರು ನಂಬರ್ ಪ್ಲೇಟ್ ನಕಲಿ ಮಾಡಿದ ಪ್ರಕರಣಕ್ಕೆ ಹೈಗ್ರೌಂಡ್ ಪೊಲೀಸರು ರೋಚಕ ಟ್ವಿಸ್ಟ್ ಕೊಟ್ಟಿದ್ದು ಜೆಡಿಎಸ್ ಎಂಎಲ್​ಸಿ ಕಾರ್ ಕೇಸ್​ನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈಗ ವಿಧಾನಸಭಾ ಟಿಕೆಟ್​ಗಾಗಿ ಓಡುಡುತ್ತಿದ್ದ ಈತ ಕಂಬಿ ಹಿಂದೆ ಇದ್ದಾನೆ.

ಅಸಲಿಗೆ ಕಾರ್ ನಂಬರ್ ಪ್ಲೇಟ್ ಚೇಂಜ್ ಮಾಡಿದ್ದು ಶೋ ರೂಮ್ ಮಾಲೀಕನಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಇಮ್ರಾನ್​ನನ್ನು ವಿಚಾರಿಸಿ ಮಂಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜು ಕೊಟ್ಟ ಹೇಳಿಕೆ ಆಧಾರದ ಮೇಲೆ ಶಬಾಜ್ ಎಂಬಾತನ ಬಂಧನವಾಗಿದೆ. ಹಲವು ಜೆಡಿಎಸ್ ನಾಯಕರೊಂದಿಗೆ ಕಾಣಿಸಿಕೊಂಡಿರುವ ಶಬಾಜ್, ಈ ನಕಲಿ ಕಾರನ್ನ ಮಾರಾಟ ಮಾಡಲು ಮಂಜು ಎನ್ನುವವರಿಗೆ ಕೊಟ್ಟಿದ್ದ.
ಮಂಜು ಸೆಕೆಂಡ್ ಹ್ಯಾಂಡ್ ಕಾರ್ ಶೋ ರೂಮ್ ಮಾಲೀಕ ಇಮ್ರಾನ್​ಗೆ ಕೊಟ್ಟಿದ್ದ. ಸದ್ಯ ಮಂಜ ಹಾಗೂ ಶಬಾಜ್​ನನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಬ್ಯಾಂಕ್ ಸಾಲದಿಂದ ತಪ್ಪಿಸಿಕೊಳ್ಳಲು ನಕಲಿ ನಂಬರ್ ಪ್ಲೇಟ್ ಬಳಕೆ​; ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ!
ತನಿಖೆ ವೇಳೆ ಮೂಡಿದೆ ಶಬಾಜ್ ಮೇಲೆ ಅನುಮಾನ ಮೂಡಿದ್ದು ಇದೇ ರೀತಿ ಹಲವು ಕಾರ್ ಗಳ ನಂಬರ್ ನಕಲಿ ಪ್ಲೇಟ್ ಮಾಡಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿಯ ತನಕ ಕಾರು ಮಾಲೀಕ ಯಾರು ಎನ್ನುವುದು ತಿಳಿದಿಲ್ಲ. ಒಂದೇ ಕಲರ್ ಹಾಗೂ ಮಾಡೆಲ್​ನ ಕಾರ್ ನೋಡಿ ಆರೋಪಿ ನಂಬರ್ ಪ್ಲೇಟ್ ನಕಲಿ ಮಾಡಿದ್ದ. ಸದ್ಯ ಕಾರಿನ ಅಸಲಿಯತ್ತು ಪತ್ತೆ ಕಾರ್ಯಕ್ಕೆ ಮುಂದಾಗಿರುವ ಪೊಲೀಸರು ಚಾರ್ಸಿ ನಂಬರ್ ಮೂಲಕ ಕಾರು ಮಾಲೀಕನ ಪತ್ತೆಗೆ ಮುಂದಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − one =
Remember me
