ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಸೋಮವಾರ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿತ್ತು.
ಇನ್ನು ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಮಾಡಿರುವ ಕುರಿತು ಸರಣಿ ಟ್ವೀಟ್​ಗಳನ್ನು ಮಾಡುವ ಮೂಲಕ ಜೆಡಿಎಸ್​ ಹರಿಹಾಯ್ದಿದೆ.
ಗೋಸುಂಬೆ ರಾಜಕಾರಣದ ಶಿಖರಕ್ಕೇರಿ, ಜನತೆಗೆ ಮಂಕುಬೂದಿ ಎರಚುವ ಬಿಜೆಪಿ ಪಕ್ಷವು ಬರೀ ಅಪಪ್ರಚಾರ ಮಾಡುವುದರಲ್ಲಿ ಸೈ ಎನಿಸಿಕೊಳ್ಳುತ್ತದೆ. ಕುಟುಂಬ ರಾಜಕಾರಣ ಅಂತೆಲ್ಲ ಕತೆ ಹೇಳುತ್ತಾ, ತಾನು ಮಾತ್ರ ಕುಟುಂಬ ಸದಸ್ಯರಿಗೆ ಟಿಕೆಟ್ ಘೋಷಣೆ ಮಾಡಿ ಠೇಂಕರಿಸುತ್ತದೆ. ಇಂತಹ ನಾಚಿಕೆಗೆಟ್ಟ ರಾಜಕಾರಣ ಹೇಸಿಗೆ ತರಿಸುವಂತದ್ದು ಎಂದು ಕಿಡಿಕಾರಿದೆ.
ಜೆಡಿಎಸ್ ಪಕ್ಷವು ಮಾತು ಕೊಟ್ಟಂತೆ ಹಾಸನದ ಟಿಕೆಟ್ ಅನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಸ್ವರೂಪ್ ಅವರಿಗೆ ನೀಡಿದೆ. ಮಾತು ತಪ್ಪದೇ ಬದ್ಧತೆ ತೋರುವುದು ನಮ್ಮಿಂದ ಮಾತ್ರ ಸಾಧ್ಯ.
ಗೋಸುಂಬೆ ರಾಜಕಾರಣದ ಶಿಖರಕ್ಕೇರಿ, ಜನತೆಗೆ ಮಂಕುಬೂದಿ ಎರಚುವ@BJP4Indiaಪಕ್ಷವು ಬರೀ ಅಪಪ್ರಚಾರ ಮಾಡುವುದರಲ್ಲಿ ಸೈ ಎನಿಸಿಕೊಳ್ಳುತ್ತದೆ. ಕುಟುಂಬ ರಾಜಕಾರಣ ಅಂತೆಲ್ಲ ಕತೆ ಹೇಳುತ್ತಾ, ತಾನು ಮಾತ್ರ ಕುಟುಂಬ ಸದಸ್ಯರಿಗೆ ಟಿಕೆಟ್ ಘೋಷಣೆ ಮಾಡಿ ಠೇಂಕರಿಸುತ್ತದೆ. ಇಂತಹ ನಾಚಿಕೆಗೆಟ್ಟ ರಾಜಕಾರಣ ಹೇಸಿಗೆ ತರಿಸುವಂತದ್ದು.1/3pic.twitter.com/WAPZEQmocN
ಇದನ್ನೂ ಓದಿ:RCB vs CSK ಪಂದ್ಯದ ವೇಳೆ ನಿಯಮ ಉಲ್ಲಂಘನೆ; ವಿರಾಟ್​ ಕೊಹ್ಲಿಗೆ ದಂಡ
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮಗ ಕಟ್ಟಾ ಜಗದೀಶ್ ಗೆ ಟಿಕೆಟ್ ಘೋಷಿಸಿರುವ ಬಿಜೆಪಿಗೆ ಕುಟುಂಬ ರಾಜಕಾರಣ ಎಂದು ಮಾತನಾಡಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದೆ.
ಸೋಮವಾರ ಬಿಡುಗಡೆಯಾದ ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಸಂಸದ ಕರಡಿ ಸಂಗಣ್ಣನವರ ಹಿರಿ ಸೊಸೆ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿಯವರ ಪತ್ನಿಗೂ ಟಿಕೆಟ್ ನೀಡಲಾಗಿದೆ.
ಇವರೆಲ್ಲರ ನಡುವೆ ಮೋಸಗೊಂಡವರು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪನವರು,‌ ಪಾಪ! ಮಾತಿಗೂ ಕೃತಿಗೂ ಸಂಬಂಧವೇ ಇಲ್ಲದ ಹಲಾಲುಟೋಪಿ ರಾಜಕಾರಣ ಬಿಜೆಪಿಯದ್ದು ಎಂದು ಸರಣಿ ಟ್ವೀಟ್​ ಮಾಡುವ ಮೂಲಕ ಜೆಡಿಎಸ್​ ಹರಿಹಾಯ್ದಿದೆ.
ನಿನ್ನೆ ಬಿಡುಗಡೆಯಾದ@BJP4Karnatakaಯ ಮೂರನೇ ಪಟ್ಟಿಯಲ್ಲಿ ಸಂಸದ ಕರಡಿ ಸಂಗಣ್ಣನವರ ಹಿರಿ ಸೊಸೆ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿಯವರ ಪತ್ನಿಗೂ ಟಿಕೆಟ್ ನೀಡಲಾಗಿದೆ. ಇವರೆಲ್ಲರ ನಡುವೆ ಮೋಸಗೊಂಡವರು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪನವರು,‌ ಪಾಪ! ಮಾತಿಗೂ ಕೃತಿಗೂ ಸಂಬಂಧವೇ ಇಲ್ಲದ ಹಲಾಲುಟೋಪಿ ರಾಜಕಾರಣ ಬಿಜೆಪಿಯದ್ದು!3/3
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 9 =
Remember me
