
ಬೆಂಗಳೂರು:ನನ್ನ ಗೆಲುವಿಗೆ, ಕುಮಾರಸ್ವಾಮಿ, ದೇವೇಗೌಡರು, ಬಿಜೆಪಿ ಮುಖಂಡರು ಕಾರಣ ಎಂದು ವೇದಿಕೆಯಲ್ಲಿ ಜೆಡಿಎಸ್ ನಾಯಕರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ವಿ.ಸೋಮಣ್ಣ, ಎಲ್ಲಿಯೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಸಹಕಾರವೂ ಇದೆ ಎಂದು ಹೇಳಲಿಲ್ಲ.ಅರಮನೆ ಆವರಣದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಎನ್‌ಡಿಎ ಸಂಸದರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ನಮ್ಮ ರಾಜ್ಯಾಧ್ಯಕ್ಷರು ಯುವಕರಿದ್ದಾರೆ. ಯಾರು ಯಾವ ರೀತಿ ನಡೆದುಕೊಳ್ಳುತ್ತಾರೋ ಅಂತಾ ಗುರುತಿಸಿ. ಯಾರೋ ಮಾಡಿದ ಪಾಪಕ್ಕೆ ಯಾರನ್ನೋ ಗುರಿ ಮಾಡಬೇಡಿ. ಇನ್ಮೇಲಾದರೂ ನಿಮ್ಮ ಸುತ್ತ ಮುತ್ತ ಓಡಾಡುವ, ಕೆಲಸಕ್ಕೆ ಬಾರದವರನ್ನು ಕಿತ್ತಾಕಿ ಎಂದು ಸಲಹೆ ಬಿ.ವೈ.ವಿಜಯೇಂದ್ರ ಅವರಿಗೆ ಸಲಹೆ ನೀಡಿದರು.ಸೋಮಣ್ಣ ಸೋಲ್ತಾನೆ ಸೋಲ್ತಾನೆ ಎಂದು ಹೇಳ್ತಾನೆ ಇದ್ರು. ಜೆಡಿಎಸ್ ಸಹಕಾರದಿಂದ ಗೆದ್ದಿದ್ದೇನೆ. ಬಿಜೆಪಿ ಜೊತೆ ಹೊಂದಾಣಿಕೆ ಇಲ್ಲದಿದ್ದರೆ ಆಗುತ್ತಿರಲಿಲ್ಲ ಎಂದರು.19 ಜನ ಸಂಸದರು ಗೆಲ್ಲಲು ಬಿಜೆಪಿ ಕೊಟ್ಟಷ್ಟೇ ಕೊಡುಗೆಯನ್ನು ಜೆಡಿಎಸ್ ಕೂಡಾ ಕೊಟ್ಟಿದೆ. ಎರಡೂ ಕಡೆಗಳಲ್ಲಿ ಸೋತವನನ್ನು ರಾಷ್ಟ್ರೀಯ ನಾಯಕರು ಗುರುತಿಸಿ ಶಕ್ತಿ ಕೊಟ್ಟರು. ನನ್ನ ಗೆಲುವಿನಲ್ಲಿ ಜೆಡಿಎಸ್ ಪಾತ್ರ ತುಂಬಾ ಇದೆ ಎಂದರು.ರಾಜ್ಯ ಸರ್ಕಾರ ಇನ್ನು ಆರು ತಿಂಗಳು ಇರ‌್ತದೊ, ವರ್ಷ ಇರ‌್ತದೊ ಗೊತ್ತಿಲ್ಲ. ಎಷ್ಟು ಸಮಯ ಇರುತ್ತದೆ ಅಂತಾ ಕುಮಾರಸ್ವಾಮಿಯವರೇ ಹೇಳಬೇಕು ಎಂದರು.ನಮ್ಮಪ್ಪನಾಣೆಗೂ ಈ ಸರ್ಕಾರ ಇರುವವರೆಗೂ ಬಿಬಿಎಂಪಿ ಚುನಾವಣೆ ಆಗಲ್ಲ. ಜಿ.ಪಂ. ಚುನಾವಣೆಗೆ ಎರಡೂ ಪಕ್ಷದಿಂದ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಯಾರು ಅಭ್ಯರ್ಥಿಗಳು ಅಂತಾ ನಾಯಕರು ಕುಳಿತು ತೀರ್ಮಾನ ಮಾಡಿ ಚುನಾವಣೆ ಎದುರಿಸಬೇಕು ಎಂದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 2 =
Remember me
