ಕಾರವಾರ:ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಗಾದಿ ಬಿಜೆಪಿಗೆ ಸಲೀಸಾಗಿದೆ. ಜೆಡಿಎಸ್​ನ ನಾಲ್ವರು ಹಾಗೂ ಇಬ್ಬರು ಪಕ್ಷೇತರರು ಸೇರಿ 6 ಸದಸ್ಯರು ಬಿಜೆಪಿಗೆ ಮುಂದಿನ ಒಂದು ವರ್ಷದ ಅವಧಿಗೆ ಬೇಷರತ್ ಬೆಂಬಲ ಸೂಚಿಸಿದ್ದಾರೆ.
ಒಟ್ಟು 31 ಸದಸ್ಯ ಬಲವಿರುವ ನಗರಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ಸ್ಥಾನಗಳನ್ನು ಹೊಂದಿದೆ. ನಾಲ್ವರು ಜೆಡಿಎಸ್, ಐವರು ಪಕ್ಷೇತರ ಸದಸ್ಯರಿದ್ದರು. ಯಾವುದೇ ಪಕ್ಷ ಅಧಿಕಾರ ಹಿಡಿಯಲು ಜೆಡಿಎಸ್ ಅಥವಾ ಪಕ್ಷೇತರರ ಸಹಭಾಗಿತ್ವ ಅನಿವಾರ್ಯವಾಗಿದೆ. ಈಗ ಜೆಡಿಎಸ್ ಬಿಜೆಪಿಗೆ ಬಾಹ್ಯ ಬೆಂಬಲ ಸೂಚಿಸಿದೆ. ಇದರಿಂದ ಬಿಜೆಪಿಗೆ ಅಧಿಕಾರದ ಹಾದಿ ಸುಗಮವಾಗಿದೆ. ಬಿಜೆಪಿಯು ತನ್ನ ಹಿರಿಯ ಸದಸ್ಯ ಡಾ. ನಿತಿನ್ ಪಿಕಳೆ ಹೆಸರನ್ನು ಅಧ್ಯಕ್ಷ ಗಾದಿಗೆ ಪ್ರಸ್ತಾಪಿಸಿದ್ದು, ಎಲ್ಲ ಸದಸ್ಯರಿಗೂ ವಿಪ್ ಜಾರಿ ಮಾಡಲು ಮುಂದಾಗಿದೆ.
ಅಧಿಕಾರ ಬೇಡ ಅಭಿವೃದ್ಧಿ ಮಾಡಿ: ಜೆಡಿಎಸ್​ನ ನಾಲ್ವರು ಹಾಗೂ ಇಬ್ಬರು ಪಕ್ಷೇತರ ಸದಸ್ಯರ ಜತೆಗೂಡಿ ಮಾಜಿ ಸಚಿವ ಆನಂದ ಅಸ್ನೋಟಿಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ನಡೆಸಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಬಹಿರಂಗ ಬೆಂಬಲ ಘೊಷಿಸಿದರು.
ಈ ವೇಳೆ ಮಾತನಾಡಿ ‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ಸ್ಥಳೀಯ ಶಾಸಕರು ಬಿಜೆಪಿಯವರೇ ಇದ್ದಾರೆ. ನಗರದ ಅಭಿವೃದ್ಧಿಯ ದೃಷ್ಟಿಯಿಂದ ಅಧಿಕಾರದಲ್ಲಿರುವ ಪಕ್ಷ ಬೆಂಬಲ ಅನಿವಾರ್ಯ ಇದರಿಂದ ನಾವು ಅಧಿಕಾರದ ಲಾಲಸೆ ಬಿಟ್ಟು, ಮುಂದಿನ ಒಂದು ವರ್ಷದ ಅವಧಿಗೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ. ಉಪಾಧ್ಯಕ್ಷ ಸ್ಥಾನವಾಗಲಿ ಅಥವಾ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಹಾಗೂ ಪಕ್ಷದ ಬೆಂಬಲಿತ ಸದಸ್ಯರಾದ ರಾಜೇಶ ಮಾಜಾಳಿಕರ್, ರುಕ್ಮಿಣಿ ಸುಧಾಕರ ಗೌಡ, ಪ್ರೀತಿ ಮಧುಕರ ಜೋಶಿ, ಸ್ನೇಹಾ ಸದಾನಂದ ಮಾಂಜ್ರೆಕರ್, ಸಂಧ್ಯಾ ಸಂಜಯ ಬಾಡಕರ್, ಮನೋಜ ಬಾಂದೇಕರ್ ಇದ್ದರು.
ನಾಲ್ಕು ಬೇಡಿಕೆ:ಕೊಳಚೆ ನೀರು ಹೋಗುವ ಕೋಣೆ ನಾಲಾ ಶುದ್ಧೀಕರಣ, ಕಡಿಮೆ ವೆಚ್ಚದ ಒಂದು ವಸತಿ ಯೋಜನೆ, ಕ್ರಿಮ್ಸ್​ನಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೌಲಭ್ಯ ಮತ್ತು ಮಾಲಾದೇವಿ ಕ್ರೀಡಾಂಗಣ ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಇದರಲ್ಲಿ ಯಾವುದೇ ಎರಡು ಅಭಿವೃದ್ಧಿ ಕಾರ್ಯವನ್ನು ಮುಂದಿನ ಒಂದು ವರ್ಷದಲ್ಲಿ ಪ್ರಾರಂಭಿಸಿದರೂ ನಾವು ಮುಂದಿನ 4 ವರ್ಷವೂ ಬಿಜೆಪಿಗೆ ಬೆಂಬಲ ಮುಂದುವರಿಸಲಿದ್ದೇವೆ ಎಂದು ಅಸ್ನೋಟಿಕರ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + one =
Remember me
