ದೇವನಹಳ್ಳಿ:ಚುನಾವಣಾ ಸಮಯ ಹತ್ತಿರವಾಗುತ್ತಿದೆ. ಎಲ್ಲಾ ಪಕ್ಷಗಳ ನಾಯಕರು ಸುತ್ತಾಟ ಆರಂಭಿಸಿದ್ದಾರೆ. ಹೋದಲ್ಲಿ ಬಂದಲ್ಲೆಲ್ಲಾ ಅದ್ಧೂರಿ ಸ್ವಾಗತ ಸಿಗುತ್ತಿದೆ. ಅದರಲ್ಲೂ ಹಿರಿಯ ನಾಯಕರು ಪ್ರಚಾರಕ್ಕೆಂದು ತೆರಳಿದಾಗ ಹಣ್ಣಿನ ಹಾರ ಹಾಕಿ ಸ್ವಾಗತಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್​.ಯಡಿಯೂರಪ್ಪ ಅಂತೆಯೇ ಡಿ.ಕೆ. ಶಿವಕುಮಾರ್ ಮುಂತಾದ ರಾಜಕಾರಣಿಗಳಿಗೆ ಸೇಬು, ದಾಳಿಂಬೆ ಮುಂತಾದ ಹಣ್ಣುಗಳಿಂದ ಮಾಡಿದ ಹಾರಗಳನ್ನು ಹಾಕುತ್ತಿದ್ದರು.
ಇದೀಗ ಜೆಡಿಎಸ್ ಪಂಚರತ್ನ ರಥಯಾತ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಗಮಿಸಿದೆ. ಈ ವೇಳೆ ದೇವನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿಗೆ ಇಲ್ಲಿನ ಜೆಡಿಎಸ್​ ಮುಖಂಡರು ಚಕ್ಕೋತ ಹಣ್ಣಿನ ಬೃಹತ್ ಹಾರ ಹಾಕಿ ಸ್ವಾಗತ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಹೂವಿನ ಮಳೆ ಸುರಿಸಿ ಎಚ್​​ಡಿಕೆಗೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಈ ವೇಳೆ ಎಚ್.ಡಿ.ಕುಮಾರಸ್ವಾಮಿಗೆ ಸ್ಥಳಿಯ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಾಥ್ ನೀಡಿದ್ದಾರೆ.
ಕರ್ನಾಟಕದಲ್ಲಿ ಹೊಸ ರಾಜಕೀಯ ಸುನಾಮಿ ಎಬ್ಬಿಸಿದ ಪಂಚರತ್ನ ರಥಯಾತ್ರೆ. ರಾಜ್ಯ ರಾಜಕಾರಣದಲ್ಲಿ ಸುನಾಮಿ ಅಲೆ ಎಬ್ಬಿಸಿರುವ ಕನ್ನಡಿಗರ ಅಖಂಡ ಬೆಂಬಲಕ್ಕೆ ನನ್ನ ನಮನಗಳು.#ಪಂಚರತ್ನ_ರಥಯಾತ್ರೆ#ದೇವನಹಳ್ಳಿpic.twitter.com/4c1swRncoa— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy)November 28, 2022
ಕರ್ನಾಟಕದಲ್ಲಿ ಹೊಸ ರಾಜಕೀಯ ಸುನಾಮಿ ಎಬ್ಬಿಸಿದ ಪಂಚರತ್ನ ರಥಯಾತ್ರೆ. ರಾಜ್ಯ ರಾಜಕಾರಣದಲ್ಲಿ ಸುನಾಮಿ ಅಲೆ ಎಬ್ಬಿಸಿರುವ ಕನ್ನಡಿಗರ ಅಖಂಡ ಬೆಂಬಲಕ್ಕೆ ನನ್ನ ನಮನಗಳು.#ಪಂಚರತ್ನ_ರಥಯಾತ್ರೆ#ದೇವನಹಳ್ಳಿpic.twitter.com/4c1swRncoa

ಪಂಚರತ್ನ ರಥಯಾತ್ರೆ ಕೊರಮಂಗಲ ಗ್ರಾಮ ತಲುಪುತ್ತಿದ್ದಂತೆ ಇಲ್ಲಿನ ಜನರು, ಕ್ಯಾಪ್ಸಿಕಂನ ಬೃಹತ್ ಹಾರ ಹಾಕಿ ಸ್ವಾಗತಿಸಿದ್ದಾರೆ. ಇದಕ್ಕಾಗಿ 500 ಕೆ.ಜಿ ಕ್ಯಾಪ್ಸಿಕಂ ಬಳಸಿಕೊಂಡಿದ್ದು, ಜೆಡಿಎಸ್​ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಲಭಿಸಿದೆ.

ದೇವನಹಳ್ಳಿ ಭಾಗದ ಜನರು ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತೆಯೇ ದೇವನಹಳ್ಳಿಯಲ್ಲಿ ಬೆಳೆಯುವ ಚಕೋತಾಕ್ಕೆ ಭಾರಿ ಬೇಡಿಕೆಯೂ ಇದೆ. ಹೀಗಾಗಿ ಇಲ್ಲಿನ ಜನರು ಚಕೋತಾ ಹಾರ ಹಾಕಿ ಕುಮಾರಸ್ವಾಮಿಯನ್ನು ಸ್ವಾಗತಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 4 =
Remember me
