ಕುಣಿಗಲ್:ರಾಜ್ಯಾದ್ಯಂತ ಮೇಲಿಂದ ಮೇಲೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಆ ಪಟ್ಟಿಗೆ ಮತ್ತೊಂದು ಹೆಸರು ಸೇರಿದೆ. ತುಮಕೂರು ಜಿಲ್ಲೆಯ ಕುಣಿಗಲ್​ನಲ್ಲಿ ಜೆಡಿಎಸ್​​ನ ಯುವ ಮುಖಂಡ, ತಂದೆ-ತಾಯಿಯ ಏಕೈಕ ಪುತ್ರ ಹೃದಯಾಘಾತದಿಂದಾಗಿ ಸಾವಿಗಿಡಾಗಿದ್ದಾನೆ.
ಮಲ್ಲಾಘಟ್ಟ ವಾರ್ಡ್ ನೀಲತ್ತಹಳ್ಳಿ ಗೇಟ್ ನಿವಾಸಿ, ಜೆಡಿಎಸ್ ಯುವ ಮುಖಂಡ ಎಂ.ಜಿ.ಶ್ರೀನಿವಾಸ್ (32) ಸಾವಿಗೀಡಾದ ಯುವಕ. ಈತ ಗುರುವಾರ ರಾತ್ರಿ 9 ಗಂಟೆಯಲ್ಲಿ ಹೃದಯಾಘಾತಕ್ಕೀಡಗಿ ಮೃತಪಟ್ಟಿದ್ದಾನೆ. ಈತ ಗಂಗಾಧರಯ್ಯ ಮತ್ತು ಗಂಗಮ್ಮ ದಂಪತಿಯ ಏಕೈಕ ಪುತ್ರ.
ಶ್ರೀನಿವಾಸ ಗುರುವಾರ ಸಂಜೆ ಸ್ನೇಹಿತರೊಂದಿಗೆ ಕುಣಿಗಲ್ ಪಟ್ಟಣದ ಜಿಮ್ ತರಬೇತಿಗೆ ದಾಖಲಾತಿ ಪಡೆದು ಐದು ನಿಮಿಷ‌ ವರ್ಕೌಟ್ ಮಾಡಿ ಹೊರ ಬಂದಿದ್ದರು. ಇದಾದ ಕೆಲ ನಿಮಿಷದ ಬಳಿಕ ವಾಂತಿ ಆಗಿದ್ದು, ಭುಜ, ಕತ್ತು, ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಪಟ್ಟಣದ ಖಾಸಗಿ ಕ್ಲಿನಿಕ್​ಗೆ ತೆರಳಿದ್ದು, ತಪಾಸಣೆ ಮಾಡಿಸಿಕೊಳ್ಳುತ್ತಿರುವಾಗಲೇ ಕುಸಿದುಬಿದ್ದರು. ಕೂಡಲೇ ಎಂಎಂ‌ ಆಸ್ಪತ್ರೆಗೆ ಆ್ಯಂಬುಲೆನ್ಸ್​​ನಲ್ಲಿ ಕರೆದೊಯ್ಯಲಾಗಿತ್ತಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಇದ್ದೊಬ್ಬ ಮಗನ ಮದುವೆ ಮಾಡುವ ಸಂಭ್ರಮದಲ್ಲಿದ್ದ ಕುಟುಂಬಸ್ಥರು ವಧು ಅನ್ವೇಷಣೆಗಾಗಿ ಭಾನುವಾರ ತೆರಳಲು ಸಿದ್ಧತೆಯಲ್ಲಿದ್ದರು. ಆದರೆ ಅಷ್ಟರೊಳಗೇ ಮಗನ ಅಕಾಲಿಕ ಸಾವಿನ ಸುದ್ದಿ ಕುಟುಂಬಸ್ಥರಿಗೆ ಆಘಾತ ನೀಡಿದೆ. ಶ್ರೀನಿವಾಸಗೆ ತಂದೆ-ತಾಯಿ, ಮೂವರು ಸಹೋದರಿಯರು, ಅಜ್ಜಿ‌‌ ಇದ್ದಾರೆ. ಶುಕ್ರವಾರ ಸ್ವಗೃಹ ಸಮೀಪದ ಜಮೀನಿನಲ್ಲಿ ಶ್ರೀನಿವಾಸ್ ಅಂತ್ಯಕ್ರಿಯೆ ನೆರವೇರಿತು.
ಸಂತಾಪ: ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಿ.ಎನ್. ಜಗದೀಶ್, ಯುವ ಮುಖಂಡ ಪ್ರಮೋದ್, ಟಿಎಪಿಸಿಎಂಎಸ್ ತಾಲೂಕು ಅಧ್ಯಕ್ಷ ಬಿ.ಶಿವಣ್ಣ, ಬಿಜೆಪಿ ಮುಖಂಡ ರಾಜೇಶ್ ಗೌಡ ಸೇರಿದಂತೆ ಅನೇಕ ಗಣ್ಯರು ಅಂತಿಮ‌ ದರ್ಶನ ಪಡೆದು ಕುಟುಂಬಸ್ಥರಿಗೆ ಸಂತಾಪ ಸೂಚಿಸಿದರು.
ಈತನ ಪತ್ತೆಗೆ ಸುಳಿವು ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 20 =
Remember me
