ಅಮೇರಿಕಾ:ಹರಾಜು ಪ್ರಕ್ರಿಯೆ ನಡೆದಾಗ ಯಾವ ವಸ್ತು ಎಷ್ಟು ಬೆಲೆಗೆ ಮಾರಾಟವಾಗುತ್ತದೆ ಎಂಬುವುದನ್ನು ಊಹಿಸಲೂ ಸಾಧ್ಯವಿಲ್ಲ. ಈ ವಸ್ತು ದೊಡ್ಡ ಮೊತ್ತದಲ್ಲಿ ಹರಾಜಾಗುತ್ತದೆ ಎಂದುಕೊಂಡಿದ್ದರೆ ಲೆಕ್ಕಾಚಾರಾವೇ ತಲೆಕೆಳಗಾಗುವ ಸಾಧ್ಯತೆ ಇರುತ್ತದೆ. ಇದೀಗ ಇಂತದ್ದೇ ಪ್ರಸಂಗವೊಂದು ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ ನಡೆದಿದೆ.
ಹೌದು, ಇದೀಗ 1880ರ ಕಾಲದ ಜೀನ್ಸ್​ ಪ್ಯಾಂಟ್​ ಆಶ್ಚರ್ಯಕರ ಮೊತ್ತಕ್ಕೆ ಹರಾಜಾಗಿದೆ. 142 ವರ್ಷ ಹಳೆಯದಾದ ಜೀನ್ಸ್​ಪ್ಯಾಂಟ್ 62 ಲಕ್ಷಕ್ಕೆ ಹರಾಜಾಗಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗುತ್ತಿದ್ದಂತೆ, ಹರಾಜಿನಲ್ಲಿ ಭಾಗವಹಿಸಿದ್ದ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ.
ಸ್ಯಾನ್​​ ಡಿಯಾಗೋದಲ್ಲಿ 23 ವರ್ಷಗಳಿಂದ ಬಟ್ಟೆ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಕೈಲ್​​ ಹಾಪರ್ಟ್​​ ಎಂಬುವರು ಇಷ್ಟು ದೊಡ್ಡ ಮೊತ್ತ ನೀಡಿ 1880ರ ಕಾಲದ ಜೀನ್ಸ್ ಪ್ಯಾಂಟ್ ಕೊಂಡುಕೊಂಡಿದ್ದಾರೆ. ಈ ಜೀನ್ಸ್​ ಪ್ಯಾಂಟನ್ನು ಹರಾಜಿನಲ್ಲಿ ಪಡೆದುಕೊಂಡು ಆಶ್ಚರ್ಯಚಕಿತನಾಗಿದ್ದೇನೆ ಎಂದು ಕೈಲ್ ಹಾಪರ್ಟ್ ಹೇಳಿದ್ದಾರೆ.(ಏಜೆನ್ಸೀಸ್)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 7 =
Remember me
