ಶ್ರೀಕಾಂತ ಅಕ್ಕಿ ಬಳ್ಳಾರಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆದಿರುವ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಚೀನಾದಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿ ಕೊಳ್ಳದಿರಲು ಜೀನ್ಸ್ ಗಾರ್ವೆಂಟ್ಸ್ ಮಾಲೀಕರು ತೀರ್ವನಿಸಿದ್ದಾರೆ.
ದುಬಾರಿಯಾದರೂ ಚಿಂತೆಯಿಲ್ಲ, ಚೀನಾದಿಂದ ಪೂರೈಕೆಯಾಗುತ್ತಿದ್ದ ಕಚ್ಚಾವಸ್ತು ಕೆಮಿಕಲ್ಸ್ ಡೈಸ್ (ಕಲರ್ಸ್)ನ್ನು ದೇಶದೊಳಗೇ ಖರೀದಿ ಮಾಡಿ ಉತ್ಪನ್ನಗಳನ್ನು ಉತ್ಪಾದಿಸಲು ಮಾಲಿಕರು ನಿರ್ಧರಿಸಿದ್ದಾರೆ. ಮುಂಬೈ, ಗುಜರಾತ್, ಅಹಮದಾಬಾದ್ ಪೋರ್ಟ್ ಮೂಲಕ ಜೀನ್ಸ್ ಉತ್ಪನ್ನಗಳನ್ನು ಶ್ರೀಲಂಕಾ, ಇರಾನ್, ಇರಾಕ್, ದುಬೈ, ಸೌದಿ ಅರೇಬಿಯಾ ಸೇರಿ ನಾನಾ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ವಾರ್ಷಿಕ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ಇದರಲ್ಲಿ ಪ್ರಮುಖವಾಗಿ ಚೀನಾ, ಸ್ವಲ್ಪಮಟ್ಟಿಗೆ ಪಾಕಿಸ್ತಾನದಿಂದ ಕಚ್ಚಾ ವಸ್ತು ಆಮದು ಮಾಡಿಕೊಳ್ಳಲಾಗುತ್ತದೆ. ಸದ್ಯ ಈ ನಿರ್ಧಾರದಿಂದ ಚೀನಾಕ್ಕೆ ಆರ್ಥಿಕವಾಗಿ ಪೆಟ್ಟು ಬೀಳಲಿದೆ ಎಂಬುದು ಜೀನ್ಸ್ ಮಾಲೀಕರ ಲೆಕ್ಕಾಚಾರ. ಕರೊನಾ ಆತಂಕದಿಂದ ಸದ್ಯ ರಫ್ತು ಮತ್ತು ಆಮದು ಎರಡೂ ನಿಂತಿದೆ. ಲಾಕ್ ಡೌನ್ ತೆರವಾಗಿ ಜೀನ್ಸ್ ಕಾರ್ಖಾನೆಗಳು ಕೆಲಸ ಪ್ರಾರಂಭಿಸಿದ್ದರೂ ದೇಶದ ಹಿತದೃಷ್ಟಿಯಿಂದ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಸ್ವದೇಶಿ ಅಭಿಯಾನಕ್ಕೆ ಮುನ್ನುಡಿ:ಭಾರತದ ಗಡಿಭಾಗದ ಲಡಾಕ್​ನ ಗಲ್ವಾನ್ ಕಣಿವೆಯಲ್ಲಿ ಯುದ್ಧ ಭೀತಿ ಜತೆಗೆ ಚೀನಾ ಸೈನಿಕರ ಕೃತ್ಯದಿಂದ ಭಾರತೀಯರಲ್ಲಿ ಆಕ್ರೋಶದ ಕಟ್ಟೆಯೊಡೆದಿದೆ. ಈ ಹಿನ್ನೆಲೆಯಲ್ಲಿ ಚೀನಾ ವಸ್ತುಗಳನ್ನು ಬೈಕಾಟ್ ಮಾಡಬೇಕೆಂಬ ಕೂಗು ಜೋರಾಗಿಯೆ ಎದ್ದಿದೆ. ಅದರ ಭಾಗವಾಗಿ ಜೀನ್ಸ್ ಮಾಲಿಕರು ಈ ನಿರ್ಧಾರ ತಳೆದಿದ್ದು, ಸ್ವದೇಶಿ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ.
ಪರ್ಯಾಯ ನಿರ್ಧಾರ:ಬಳ್ಳಾರಿ ಜಿಲ್ಲೆಯಲ್ಲಿರುವ 500 ಮಷಿನ್ ಅಂಗಡಿ ಹಾಗೂ 60 ವಾಷಿಂಗ್ ಮತ್ತು ಡೈಯಿಂಗ್ಸ್ ಅಂಗಡಿಗಳಲ್ಲಿ ಜೀನ್ಸ್ ಉತ್ಪಾದನೆಯಾಗುತ್ತದೆ. ಇದೇ ಉದ್ಯಮ ನೆಚ್ಚಿ ಜಿಲ್ಲೆಯ ಒಂದು ಲಕ್ಷಕ್ಕೂ ಹೆಚ್ಚು ಕಾರ್ವಿುಕರು ಜೀವನ ಸಾಗಿಸುತ್ತಿದ್ದಾರೆ. ಮಧ್ಯದಲ್ಲಿ ಕರೊನಾ ಬಂದಿದ್ದರಿಂದ ಉತ್ಪಾದನೇ ಮೇಲೆ ಪರಿಣಾಮ ಬೀರಿತ್ತು. ಇದೀಗ ಪ್ರಮುಖ ಕಚ್ಚಾವಸ್ತುಗಳನ್ನು ಅಮದು ಮಾಡಿಕೊಳ್ಳದಿರಲು ಮಾಲೀಕರು ನಿರ್ಧರಿಸಿದ್ದಾರೆ. ಪರ್ಯಾಯವಾಗಿ ಹೆಚ್ಚಿನ ದರದಲ್ಲಿ ದೇಶದೊಳಗೆ ಕಚ್ಚಾವಸ್ತು ದೊರೆಯುತ್ತದೆ. ಚೀನಾದಲ್ಲಿ ಇದೇ ಕಚ್ಚಾ ವಸ್ತು ಒಂದು ಸಾವಿರ ರೂ.ಗೆ ದೊರಕಿದರೆ, ಸ್ಥಳೀಯವಾಗಿ 2,500 ರೂ.ಗೆ ಸಿಗುತ್ತದೆ. ಆದರೂ, ಚಿಂತೆಯಿಲ್ಲ, ಉತ್ಪಾದನ ವಸ್ತುಗಳ ಮೇಲಿನ ದರವನ್ನು ಕೊಂಚ ಏರಿಸಿ, ಕಚ್ಚಾವಸ್ತುಗಳನ್ನು ದೇಶದೊಳಗೆ ತರಿಸಿಕೊಳ್ಳುತ್ತೇವೆ. ಆದರೆ, ಚೀನಾ ಮೊರೆ ಹೋಗುವುದಿಲ್ಲ ಎನ್ನುತ್ತಿದ್ದಾರೆ ಜೀನ್ಸ್ ಮಾಲೀಕರು.
ವ್ಯಾಪಾರಕ್ಕಿಂತ ನಮಗೆ ದೇಶ ಮುಖ್ಯ. ಹೀಗಾಗಿಯೆ ಚೀನಾದಿಂದ ಕಚ್ಚಾ ವಸ್ತುಗಳನ್ನು ತರಬಾರದೆಂದು ನಿರ್ಧರಿಸಿದ್ದೇವೆ. ಈ ಮೂಲಕ ಚೀನಾಕ್ಕೆ ಪೆಟ್ಟು ನೀಡಿ, ಹುತಾತ್ಮರಾದ ದೇಶದ ಸೈನಿಕರಿಗೆ ಗೌರವ ಸಲ್ಲಿಸಲಿದ್ದೇವೆ.
| ಮಲ್ಲಿಕಾರ್ಜುನಜೀನ್ಸ್ ಅಂಗಡಿ ಮಾಲೀಕ, ಬಳ್ಳಾರಿ
ಕಚ್ಚಾ ವಸ್ತುಗಳನ್ನು ಚೀನಾದಿಂದ ಪೂರೈಕೆ ಮಾಡಿಕೊಳ್ಳದಿರಲು ಮಾಲೀಕರು ನಿರ್ಧರಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.
| ಲಕ್ಷ್ಮವ್ವ ,ಬಳ್ಳಾರಿ
https://www.vijayavani.net/people-decided-go-for-lockdown-till-july-1-in-kanakapura/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
