ನವದೆಹಲಿ:2020ನೇ ಸಾಲಿನ ಜಿಇಇ ಅಡ್ವಾನ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪುಣೆಯ ಚಿರಾಗ್ ಫಾಲರ್ ಮೊದಲ ಸ್ಥಾನಗಳಿಸಿದ್ದಾರೆ. 396ಕ್ಕೆ 352 ಅಂಕವನ್ನು ಅವರು ಗಳಿಸಿದ್ದಾರೆ. ಚಿರಾಗ್ ಈ ಹಿಂದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಣಿತ ಮತ್ತು ವಿಜ್ಞಾನ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದರು. ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತಾರಾಷ್ಟ್ರೀಯ ಒಲಿಂಪಿಯಾಡ್ ಪ್ರಶಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರಿಗೆ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಾಲ ಪುರಸ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು. ವಿದ್ಯಾರ್ಥಿನಿಯರಲ್ಲಿ ಕನಿಷ್ಕಾ ಮಿತ್ತಾಲ್ 315 ಅಂಕಗಳೊಂದಿಗೆ ಮೊದಲನೇ ರ್ಯಾಂಕನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷ 1,50,838 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ಬರೆದಿದ್ದರು. ಈ ಪೈಕಿ 43,204 ಮಂದಿ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ 36,497 ಪುರುಷರು ಮತ್ತು 6,707 ಮಹಿಳೆಯರಿದ್ದಾರೆ.
ಬೆಂಗಳೂರು: ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಕರ್ನಾಟಕದ ಪ್ರಣವ್ ಸಿಂಘಾಲ್ 103ನೇ ರ‍್ಯಾಂಕ್ ಪಡೆದಿದ್ದು, ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇವರು ಎಫ್​ಐಐಟಿಜೆಇಇ ಸಂಸ್ಥೆಯಿಂದ ತರಬೇತಿ ಪಡೆದು ಪರೀಕ್ಷೆ ಎದುರಿಸಿದ್ದರು.
ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿ ಟಿ.ಚರ್ತವೇದಿ 149ನೇ ರ್ಯಾಂಕ್, ಎಫ್​ಐಐಟಿಜೆಇಇ ಸಂಸ್ಥೆಯ ತರಬೇತಿ ಪಡೆದ ಗೋವಿಂದ್ ಸಾಜು-269, ಕಲ್ಪ್ ಸಚಿನ್ ವ್ಯಾಸ್- 289ನೇ ರ್ಯಾಂಕ್ ಗಳಿಸಿದ್ದಾರೆ. ಬೆಂಗಳೂರು ಉತ್ತರ ವಲಯದ ನಾರಾಯಣ ಐಐಟಿ ಅಕಾಡೆಮಿ ವಿದ್ಯಾರ್ಥಿಗಳಾದ ಶಶಿಧರ್ ಜಿ.ಹೆಗಡೆ- 439ನೇ ರ್ಯಾಂಕ್, ಎಂ.ಡಿ.ರಿಜ್ವಾನ್ ಫಾರೂಕ್- 470, ಎ.ಗೌರವ್ -775ನೇ ರ್ಯಾಂಕ್ ಪಡೆದಿದ್ದಾರೆ.
ಐಐಟಿಯಲ್ಲಿ ಪ್ರವೇಶ ಪಡೆಯುವ ಕನಸು ನನಸಾಗಿದೆ. ಲಾಕ್​ಡೌನ್​ನಿಂದ ಮನೆಯಲ್ಲೇ ವ್ಯಾಸಂಗ ಮಾಡಲು ಅನುಕೂಲವಾಯಿತು. ಪ್ರತಿ ನಿತ್ಯ 12 ಗಂಟೆಗಳ ಕಾಲ ವ್ಯಾಸಂಗ ಮಾಡುತ್ತಿದ್ದೆ’
| ಟಿ.ಚರ್ತವೇದಿ149ನೇ ರ‍್ಯಾಂಕ್
ಎಫ್​ಐಐಟಿಜೆಇಇಗೆ ಧನ್ಯವಾದ. ನನ್ನ ಕನಸನ್ನು ಈ ಸಂಸ್ಥೆ ನನಸು ಮಾಡಿದೆ. ಇಲ್ಲಿನ ತರಬೇತಿ ಮತ್ತು ಪಾಲಕರ ಪ್ರೋತ್ಸಾಹದಿಂದ ಹೆಚ್ಚಿನ ಅಂಕಗಳಿಸಲು ಸಾಧ್ಯವಾಯಿತು
| ಪ್ರಣವ್ ಸಿಂಘಾಲ್103ನೇ ರ‍್ಯಾಂಕ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
