ಬೆಂಗಳೂರುಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸೇರಿ ಇತರೆ ತಾಂತ್ರಿಕ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ಜೆಇಇ ಅಡ್ವಾನ್ಸ್‌ಡ್-2024ರ ಫಲಿತಾಂಶ ಪ್ರಕಟವಾಗಿದೆ.
ರಾಜ್ಯದಲ್ಲಿ ಅಲೆನ್ ಕರಿಯರ್‌ನಲ್ಲಿ ತರಬೇತಿ ಪಡೆದ ಷಾನ್ ಥಾಮಸ್ ಕೋಶೈ -15 ಮತ್ತು ಕಸವನಹಳ್ಳಿಯ ನಾರಾಯಣ ಕಾಲೇಜಿನ ಅಮೋಘ ಅಗರ್‌ವಾಲ್ ಅಖಿಲ ಭಾರತೀಯ ಮಟ್ಟದಲ್ಲಿ 20ನೇ ರ‌್ಯಾಂಕ್ ಅನ್ನು ಪಡೆದಿದ್ದಾರೆ.
ಟಾಪ್ 100 ಶ್ರೇಣಿಯಲ್ಲಿ ಅಲೆನ್ ಕರಿಯರ್‌ನ 5 ವಿದ್ಯಾರ್ಥಿಗಳು ಸೇರಿದ್ದಾರೆ. ಅಖಿಲ ಭಾರತೀಯ ಮಟ್ಟದಲ್ಲಿ ಷಾನ್ ಥಾಮಸ್ ಕೋಶೈ(15), ವಿ.ಸಾಗರ್(30), ವಿದೀಪ್ ರೆಡ್ಡಿ(36), ಆಂಶುಲ್ ಗೋಯಲ್(37) ಮತ್ತು ಪಿ.ಜೆ.ಅಭಿನವ್(80) ಂಕಗಳನ್ನು ಗಳಿಸಿದ್ದಾರೆ.
ಬೇಸ್‌ನಲ್ಲಿ ತರಬೇತಿ ಪಡೆದ ಎಂ.ಜೆ.ಅಭಯ್ ಸಿಂಹ(53) ರ‌್ಯಾಂಕ್ ಪಡೆದಿದ್ದಾರೆ. ಆಕಾಶ್ ಎಜುಕೇಶನಲ್ ಸಂಸ್ಥೆಯ ಕೃಷ್ಣ ಸಾಯಿ ಶಿಶಿರ್ 67ನೇ ಸ್ಥಾನ, ಅಭಿಷೇಕ್ ಜೈನ್ 78ನೇ ಸ್ಥಾನ ಪಡೆದಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಲಹೋಟಿ ಪ್ರಥಮ:
ಆಲ್ ಇಂಡಿಯಾ ರ‌್ಯಾಂಕ್‌ನಲ್ಲಿ ಬಾಲಕರ ವಿಭಾಗದಲ್ಲಿ ದೆಹಲಿ ಐಐಟಿ ವಲಯದ ವೇದ್ ಲಹೋಟಿ 360ಕ್ಕೆ 355 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಎನಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಬಾಂಬೆ ಐಐಟಿ ವಲಯದ ದ್ವಿಜಾ ಧರ್ಮೇಶ್‌ಕುಮಾರ್ ಪಟೇಲ್ 332 ಅಂಕಗಳನ್ನು ಪಡೆದು ಟಾಪರ್ ಆಗಿದ್ದಾರೆ.
48,248 ಮಂದಿ ಅರ್ಹತೆ:
ಜೆಇಇ ಮೇನ್ಸ್-1 ಮತ್ತು 2ರಲ್ಲಿ ರ‌್ಯಾಂಕ್ ಪಡೆದಿದ್ದ 1,86,584 ಮಂದಿಯಲ್ಲಿ 1,80,200 ಅಭ್ಯರ್ಥಿಗಳು ಮೇ 26ರಂದು ನಡೆದಿದ್ದ ಅಡ್ವಾನ್ಸ್‌ಡ್ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 48,248 ಮಂದಿ ಅರ್ಹರಾಗಿದ್ದಾರೆ. 7964 ಮಂದಿ ವಿದ್ಯಾರ್ಥಿನಿಯರು ಹಾಗೂ 40,284 ಬಾಲಕರಿದ್ದು, ಬಾಲಕರೇ ಮೇಲುಗೈ ಸಾಧಿಸಿದ್ದಾರೆ. ಅಂಗವಿಕಲ ಕೋಟಾದಲ್ಲಿ 2,465 ಮಂದಿಯಲ್ಲಿ 594 ಮಂದಿ ಅರ್ಹತೆ ಹೊಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
