ಬೆಂಗಳೂರು:ಆನ್​ಲೈನ್​ ವಂಚನೆಗಳು ಹೆಚ್ಚಾಗುತ್ತಿರುವ ದಿನಗಳಲ್ಲಿ ಮದುವೆ ಸಂಬಂಧಿತ ಜಾಲತಾಣಗಳಲ್ಲಿ ವಧು-ವರಾನ್ವೇಷಣೆ ಮಾಡುವ ಮುನ್ನ ತುಂಬಾ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ಒಂದು ವೇಳೆ ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದಕ್ಕೆ ನಗರದಲ್ಲಿ ನಡೆದಿರುವ ಘಟನೆಯೊಂದು ತಾಜಾ ಉದಾಹರಣೆಯಾಗಿದೆ.
ಹುಳಿಮಾವಿನಲ್ಲಿ ವಾಸವಿದ್ದ ಸಾಮಾಜಿಕ ಕಾರ್ಯಕರ್ತನೊಬ್ಬ ಜೀವನ್​ಸತಿ ಡಾಟ್​ ಕಾಮ್​ನಲ್ಲಿ ತನ್ನ ಪ್ರೊಫೈಲ್​ ಕ್ರಿಯೆಟ್​ ಮಾಡಿದ್ದರು. ವಧುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಕಾರ್ಯಕರ್ತನಿಗೆ ಶ್ರೇಯಾ ಎಂಬಾಕೆಯ ಪರಿಚಯವಾಗಿದೆ. ದಿನಗಳು ಕಳೆದನಂತರ ಹಲವು ಮಾಹಿತಿ ಕಲೆ ಹಾಕಿದ ಶ್ರೇಯಾ ಹೆಸರಿನಾಕೆ ಕೊನೆಗೆ ತನ್ನ ಕರಾಳ ರೂಪವನ್ನು ಕಾರ್ಯಕರ್ತನಿಗೆ ತೋರಿದ್ದಾಳೆ.
ಇದನ್ನೂ ಓದಿರಿ:ಪುರಿ ಜಗನ್ನಾಥ ರೂಪವನ್ನೇ ಹೋಲುವ ಪತಂಗ ಪತ್ತೆ! ಗ್ರಾಮಸ್ಥರ ಮಾತು ಕೇಳಿದ್ರೆ ಬೆರಗಾಗ್ತೀರಾ!
ಮದುವೆಗೂ ಮುನ್ನ ದೇಹದ ಅಂಗಾಂಗಗಳು ಸರಿಯಿದೆಯೇ ಎಂದು ಪರೀಕ್ಷಿಸಬೇಕಿದೆ ಎಂದು ಶ್ರೇಯಾ ಎಂಬಾಕೆ ಕೇಳಿದ್ದಾಳೆ. ಆಕೆಯ ಮಾತು ನಂಬಿದ ಕಾರ್ಯಕರ್ತ ತನ್ನ ಬೆತ್ತಲೆ ವಿಡಿಯೋ ಮಾಡಿ ಕಳುಹಿಸಿದ್ದಾನೆ. ವಿಡಿಯೋ ಪಡೆದಿದ್ದೇ ತಡ ಅಲ್ಲಂದಾಚೆಗೆ ಆತನಿಗೆ ಸಂಕಷ್ಟವು ಶುರುವಾಗಿದೆ.
ಬೆದರಿಕೆ ಹಾಕುತ್ತಿರುವ ಶ್ರೇಯಾ ಎಂಬಾಕೆ ಕೇಳಿದ್ದಷ್ಟು ಹಣ ಕೊಡದಿದ್ದರೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್​ ಮಾಡಿ ವೈರಲ್​ ಮಾಡುವ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ಕಾರ್ಯಕರ್ತ ಇದೀಗ ಕಾರ್ಯಕರ್ತ ಪೊಲೀಸರ ಮೊರೆ ಹೋಗಿದ್ದು, ಎಚ್​.ಎಸ್​. ಲೇಔಟ್​ನ ಸೈಬರ್​ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿರಿ:ಮಾಜಿ ಸಿಎಂ ಜಯಲಲಿತಾ-ನಿರ್ಮಲಾ ಸೀತಾರಾಮನ್​ ಗೆಳತಿಯರಾ? ಅಪರೂಪದ ಫೋಟೋ ಹಿಂದಿನ ಸತ್ಯಾಂಶವೇನು?
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ದರ್ಶನ್ ನೋಡಿ ಸುಮ್ನೆ ಹೆಂಗಿರ್ಲಿ!; ಜವಾರಿ ಹಾಡಿಗೆ ಆಶಾ ಭಟ್ ಕುಣಿತ

ನಾವೂ ಬರ್ತಿದ್ದೀವಿ!; ಇಲ್ಲಿದೆ ಬಾಲಿವುಡ್ ಚಿತ್ರಗಳ ಬಿಡುಗಡೆ ಪಟ್ಟಿ

ಪೊಗರಿಗೆ ಸುತ್ತಿಕೊಂಡ ವಿವಾದ!; ಕ್ಷಮೆಯಾಚಿಸಿ ದೃಶ್ಯ ತೆಗೆಯುವುದಾಗಿ ನಂದಕಿಶೋರ್ ಭರವಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
