ಬೆಂಗಳೂರು:ಕಳ್ಳರ ಕಾಟವೆಂದು ಸುರಕ್ಷತೆ ಸಲುವಾಗಿ ಬ್ಯಾಂಕ್​ ಲಾಕರ್​ನಲ್ಲಿ ಚಿನ್ನಾಭರಣ ಇಟ್ಟರೆ ಅಲ್ಲೂ ಕಳವಾಗಿದೆ! ಅದೂ ಬರೋಬ್ಬರಿ ಒಂದೂಮುಕ್ಕಾಲು ಕೆಜಿ ಚಿನ್ನ ನಾಪತ್ತೆಯಾಗಿದ್ದು, ಬರೋಡಾ ಬ್ಯಾಂಕ್​ ವಿರುದ್ಧ ಎಫ್​​ಐಆರ್​ ದಾಖಲಾಗಿದೆ.
ಜೆ.ಪಿ.ನಗರದ ಉದ್ಯಮಿಯೊಬ್ಬರು ಚಿನ್ನಾಭರಣವನ್ನು ಭದ್ರತೆ ಮಾಡುವ ಸಲುವಾಗಿ ಜಯನಗರದ 8ನೇ ಬ್ಲಾಕ್​ನ ಬರೊಡಾ ಬ್ಯಾಂಕ್​ನಲ್ಲಿ 3 ಲಾಕರ್​ ತೆರೆದು ಚಿನ್ನಾಭರಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಇಟ್ಟಿದ್ದರು. ಫೆಬ್ರವರಿ 6ರಂದು ಮದುವೆ ವಾಷಿರ್ಕೋತ್ಸವಕ್ಕೆಂದು ಬ್ಯಾಂಕಿಗೆ ಹೋಗಿ ಕೆಲ ಆಭರಣಗಳನ್ನು ತೆಗೆದುಕೊಂಡು ಬಂದಿದ್ದರು. ಮತ್ತೆ ವಾಪಸ್​ ಫೆ. 27ರಂದು ಬ್ಯಾಂಕ್​ ಲಾಕರ್​ನಲ್ಲಿ ಇಟ್ಟಿದ್ದರು. ಇದಾದ ನಾಲ್ಕು ತಿಂಗಳ ಬಳಿಕ ಉದ್ಯಮಿಗೆ ಶಾಕ್​ ಕಾದಿತ್ತು.
ಇದನ್ನೂ ಓದಿರಿಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!
ಕರೊನಾ ಲಾಕ್​ಡೌನ್​ ಪರಿಣಾಮ ಬ್ಯಾಂಕಿನತ್ತ ಉದ್ಯಮಿ ಹೋಗಿರಲಿಲ್ಲ. ತನ್ನ ಬಳಿಯಿದ್ದ ಆಭರಣವನ್ನೂ ಮನೆಯಲ್ಲೇ ಸಂಗ್ರಹಿಸಿದ್ದರು. ಜುಲೈ 22ರಂದು ಬ್ಯಾಂಕಿಗೆ ಹೋಗಿದ್ದ ಉದ್ಯಮಿ, ತನ್ನ ಲಾಕರ್​ಗಳನ್ನು ಪರಿಶೀಲನೆ ನಡೆಸಿದಾಗ ಆಭರಣ ಕಳವಾಗಿದ್ದವು.
ಲಾಕರ್​ನಲ್ಲಿದ್ದ 50 ಗ್ರಾಂ ಚೈನು, 30 ಗ್ರಾಂ ಬ್ರೇಸ್ಲೆಟ್​, 40 ಗ್ರಾಂನ ಬಳೆ, 1200 ಗ್ರಾಂ ಒಳಗೊಂಡ 12 ಚಿನ್ನದ ಗಟ್ಟಿ ಸೇರಿದಂತೆ 1,735 ಗ್ರಾಂ ಚಿನ್ನಾಭರಣ ಕಳವಾಗಿದೆ. ಫೆಬ್ರವರಿ 27ರಿಂದ ಜುಲೈ 22ರವರೆಗೂ ಬ್ಯಾಂಕಿನ ಕಡೆಗೆ ಹೋಗಿಲ್ಲ. ಈ ನಡುವೆ ಬ್ಯಾಂಕ್​ ಸಿಬ್ಬಂದಿ ಅಥವಾ ಬ್ಯಾಂಕಿಗೆ ಬಂದ ಅಪರಿಚಿತರು 85 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಜಯನಗರ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಉದ್ಯಮಿ ಕೊಟ್ಟ ದೂರಿನ ಅನ್ವಯ ಬ್ಯಾಂಕ್​ ವಿರುದ್ಧ ಎಫ್​​ಐಆರ್​ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುವಾಗಲೇ ಅರ್ಚಕ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
