ಬಳ್ಳಾರಿ: ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್.ಪೂಜಾರ ಅಲಿಯಾಸ್ ಶಾಹಿರ್ ಶೇಖ್ ಪೊಲೀಸರ ತನಿಖೆ ವಿಚಾರದಲ್ಲಿ ಬಂಧಿತನಾಗಿದ್ದಾನೆ. ಈತ ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ ಎಂದು ಈಗಷ್ಟೇ ಮಾಹಿತಿ ಸಿಕ್ಕಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಬಳ್ಳಾರಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರ ಕೇಳಿ ನನಗೆ ಆಘಾತವಾಯಿತು. ಇದೇ ಆರೋಪಿ ಈ ಹಿಂದೆ ನಿತಿನ್ ಗಡ್ಕರಿ ಅವರ ಕೊಲೆಗೆ ಸ್ಕೆಚ್ ಹಾಕಿದ್ದ. ನನ್ನ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂಬ ವಿಷಯದ ಬಗ್ಗೆ ಆರಗ ಜ್ಞಾನೇಂದ್ರ ಅವರು ನನಗೆ ಫೋನ್ ಮಾಡಿ ತಿಳಿಸಿದರು ಎಂದು ಅವರು ಹೇಳಿದರು.
ಈ ಹಿಂದೆ ನನಗೆ ಹಿಂದುತ್ವ ಪ್ರತಿಪಾದಿಸಿ ಮಾತಾಡಿದಾಗ ನನಗೆ ಕೊಲೆ ಬೆದರಿಕೆ ಬಂದಿತ್ತು. ಈ ವಿಷಯ ಸದನಕ್ಕೆ ತಿಳಿಸಿದ್ದೆ. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇತ್ತು. ಆಗ ಭದ್ರತೆ ನೀಡಿದ್ದರು ಎಂದು ಹೇಳಿದ ಅವರು, ನನ್ನ ಕೊಲೆ ಸ್ಕೆಚ್ ಬಗ್ಗೆ ಕಾರಣ ಏನೆಂದು ನನಗೆ ಗೊತ್ತಿಲ್ಲ. ಹಿಂದುತ್ವದ ಕಾರಣಕ್ಕೆ ಕೊಲೆಗೆ ಸ್ಕೆಚ್ ಹಾಕುತ್ತಾರೆಂದರೆ ನಾವು ಹೆದರುವವರಲ್ಲ ಎಂದರು.
ಇದನ್ನೂ ಓದಿ:ಶೆಟ್ಟರ್​ಗೆ ಟಿಕೆಟ್ ನೀಡಬೇಕೆಂದು ಹೇಳಿದ್ದೇವೆ: ಪ್ರಲ್ಹಾದ ಜೋಶಿಚುನಾವಣಾ ರಾಜಕೀಯದಿಂದ ದೂರ ಉಳಿಯಲು ತೀರ್ಮಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು; ಮೊನ್ನೆ ರಾಜ್ಯದ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್ ಅವರು ಫೋನ್ ಮಾಡಿ ಮಾತನಾಡಿದರು. ನೀವು ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ಎಂಬ ರೀತಿಯಲ್ಲಿ ರಾಜೀನಾಮೆ ಕಳಿಸಬಾರದು ಎಂದು ಹೇಳಿದರು. ಫಾರ್ಮ್ಯಾಟ್ ಕಳಿಸುವಂತೆ ಹೇಳಿರುವೆ. ಅವರು ಕಳಿಸಿದ ಫಾರ್ಮ್ಯಾಟ್ ನಲ್ಲಿ ರಾಜೀನಾಮೆ ಪತ್ರ ಕಳಿಸುವೆ. ನನಗೆ ಟಿಕೆಟ್ ಸಿಕ್ಕಿಲ್ಲ. ಯಾರಿಗೆ ಸಿಗಲಿ, ಬಿಡಲಿ ನಾನು ಟಿಕೆಟ್ ಕೊಡಿ ಎಂದು ಕೇಳಲ್ಲ. ನನಗೆ ಯಾವ ಭರವಸೆಯನ್ನೂ ಕೊಟ್ಟಿಲ್ಲ ಎಂದು ಹೇಳಿದ ಈಶ್ವರಪ್ಪ, ಪಕ್ಷ ನನಗೆ ಸಾಕಷ್ಟು ಅಧಿಕಾರ, ಸ್ಥಾನಮಾನ, ಹುದ್ದೆ ನೀಡಿದೆ. ನಾನು ಬೂತ್ ಮಟ್ಟದಲ್ಲಿ ಕಾರ್ಯಕರ್ತ ಆಗಿದ್ದವನು. ಈ ಹಂತಕ್ಕೆ ಬಂದಿರುವೆ. ಪಕ್ಷ ಚುನಾವಣಾ ರಾಜಕೀಯದಿಂದ ನಿವೃತ್ತ ಆಗಬೇಕೆಂದು ಹೇಳಿದರೆ ಅದನ್ನು ನಾನು ಒಪ್ಪುವೆ, ಪಕ್ಷ ನೀಡುವ ಎಲ್ಲ ಕೆಲಸಗಳನ್ನು ಮಾಡುವೆ ಎಂದರು.
ಇದನ್ನೂ ಓದಿ:7 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಕಪ್ಪೆಯನ್ನು ಗುರುತಿಸಿ!ಒಂದು ಕಾಲದಲ್ಲಿ ನಮ್ಮ ಪಕ್ಷದಿಂದ ನಿಲ್ಲಲು ಅಭ್ಯರ್ಥಿಗಳೇ ಇರಲಿಲ್ಲ. ಈಗ ಟಿಕೆಟ್ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುವುದಾದರೆ ಇದು ನಮಗೆ ಹೆಮ್ಮೆಯ ವಿಶೇಷ ಎಂದ ಅವರು, ಟಿಕೆಟ್ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುವವರು ಪಕ್ಷಕ್ಕೆ ನಿಷ್ಠರಲ್ಲ ಎಂದರ್ಥ. ಹೋಗುವವರು ಹೋಗಲಿ, ಅದು ಅವರ ವೈಯಕ್ತಿಕ ತೀರ್ಮಾನ ಎಂದರು. ಬಳ್ಳಾರಿಯಲ್ಲಿರುವ ತಮ್ಮ ಮನೆ ದೇವರ ಪೂಜೆಗಾಗಿ ಈಶ್ವರಪ್ಪ ಕುಟುಂಬ ಸಮೇತ ಬಂದಿದ್ದರು. ಸುದ್ದಿಗೋಷ್ಠಿ ವೇಳೆ ರಾಮಲಿಂಗಪ್ಪ ಮೊದಲಾದವರು ಹಾಜರಿದ್ದರು.
ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಇಂದು ಉದ್ಘಾಟನೆಗೆ ಸಜ್ಜಾಗಿದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fourteen =
Remember me
