ಬೆಂಗಳೂರು:ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆ ಅಧೀನದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸ್ವಚ್ಛ ಭಾರತ್​ ಮಿಷನ್​ ಯೋಜನೆಯನ್ವಯ ಕಾರ್ಯನಿರ್ವಹಿಸಲು ವಿವಿಧ ಜಿಲ್ಲೆಗಳಲ್ಲಿ ಸಮಾಲೋಚಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.
ಹುದ್ದೆ ಹಾಗೂ ವಿದ್ಯಾರ್ಹತೆ ವಿವರ ಇಂತಿದೆ.*ಮಾನವ ಸಂಪನ್ಮೂಲ ಅಭಿವೃದ್ಧಿ- ಎಂಎಸ್​ಡಬ್ಲ್ಯೂ/ ಎಂಎ/ ಗ್ರಾಮೀಣಾಭಿವೃದ್ಧಿ, ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.*ಮಾಹಿತಿ ಶಿಕ್ಷಣ ಹಾಗೂ ಸಂವಹನ- ಸಂವಹನದಲ್ಲಿ ಎಂ.ಎಸ್​/ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
*ನೈರ್ಮಲ್ಯ ಮತ್ತು ಶುಚಿತ್ವ- ಇಂಜಿನಿಯರಿಂಗ್​, ಸೋಷಿಯನ್​ ಸೈನ್ಸ್​ನಲ್ಲಿ ಪದವಿ ಅಥವಾ ಪಬ್ಲಿಕ್​ ಹೆಲ್ತ್​ನಲ್ಲಿ ಡಿಪ್ಲೊಮಾ, ಗ್ರಾಮೀಣ ನಿರ್ವಹಣೆಯಲ್ಲಿ ಪದವಿ ಅಥವಾ ಇತರ ಸಂಬಂಧಿಸಿದ ಪದವಿ ಪಡೆದಿರಬೇಕು.
*ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ- ಪರಿಸರ ಇಂಜಿನಿಯರಿಂಗ್​, ಪರಿಸರ ವಿಜ್ಞಾನದಲ್ಲಿ ವಿಶೇಷತೆಯೊಂದಿಗೆ ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಬಿಇ ಪದವಿ ಪಡೆದಿರಬೇಕು.
*ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ- ಎಂಸಿಎ, ಎಂ.ಎ ಎಕನಾಮಿಕ್ಸ್​, ಸ್ಟಾಟಿಟಿಕ್ಸ್​, ಎಂ.ಎಸ್​ಸಿ ಕಂಪ್ಯೂಟರ್​ ಸೈನ್ಸ್​, ಬಿಇ ಕಂಪ್ಯೂಟರ್​ ಸೈನ್ಸ್​ ಆಗಿರಬೇಕು.
ಮೇಲಿನ ಎಲ್ಲ ಹುದ್ದೆಗಳು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. 22,000 ರೂ. ಮಾಸಿಕ ಸಂಭಾವನೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 45 ವರ್ಷ.
ಆಸಕ್ತರು https://rdpr.kar.nic.in/ ನಲ್ಲಿ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿಕೊಂಡು ಮೇ 11 ರೊಳಗಾಗಿ[email protected]ಗೆ ಕಳುಹಿಸಬೇಕು.ಉದ್ಯೋಗಾವಕಾಶಗಳಿರುವ ಜಿಲ್ಲೆಗಳು: ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾವೇರಿ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ.
ವಿವರಗಳಿಗೆ ಏಪ್ರಿಲ್​ 21ರ ವಿಜಯವಾಣಿ ದಿನಪತ್ರಿಕೆಯನ್ನು ನೋಡಿ.
ಲಾಕ್​​ಡೌನ್​ ಆಗಿ ಮನೆಯಲ್ಲಿದ್ದವರಿಗೆ ನಿಮ್ಮೂರಲ್ಲೇ ಉದ್ಯೋಗಾವಕಾಶ ಎಲ್ಲ ಜಿಲ್ಲೆಗಳಲ್ಲೂ ಬೇಕಾಗಿದ್ದಾರೆ ತಾಂತ್ರಿಕ ಸಹಾಯಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + three =
Remember me
