ಬೆಂಗಳೂರು:ಮಿತಿಮೀರಿರುವ ಕರೊನಾ ಹಾವಳಿಯ ಈ ಸಂದರ್ಭದಲ್ಲಿ ಹಲವರು ಕೆಲಸ ಕಳೆದುಕೊಳ್ಳುತ್ತಿದ್ದು, ಇನ್ನು ಕೆಲವರು ನಿರುದ್ಯೋಗಿಗಳಾಗುವ ಆತಂಕ ಎದುರಿಸುತ್ತಿದ್ದಾರೆ. ಅದಾಗ್ಯೂ ಈ ನಡುವೆ ರಾಜ್ಯಾದ್ಯಂತ ಉದ್ಯೋಗಾವಕಾಶಗಳಿವೆ. ಯುನೈಟೆಡ್​ ನೇಷನ್ಸ್ ಡೆವಲಪ್​ಮೆಂಟ್​ ಪ್ರೋಗ್ರಾಮ್​ (ಯುಎನ್​ಡಿಪಿ) ಇಂಥದ್ದೊಂದು ಅವಕಾಶವನ್ನು ಮುಂದಿಟ್ಟಿದೆ.
ರಾಜ್ಯದ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ತುಮಕೂರು, ಗದಗ, ಉತ್ತರಕನ್ನಡ, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ವಿಜಯಪುರಗಳಲ್ಲಿ ಐವತ್ತಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಅರ್ಹರಿಂದ ಯುಎನ್​ಡಿಪಿ ಅರ್ಜಿ ಆಹ್ವಾನಿಸಿದೆ. ಗ್ರಾಮೀಣಾಭಿವೃದ್ಧಿ, ಜೀವನೋಪಾಯ ಸಂವರ್ಧನೆ, ಉದ್ಯಮಶೀಲತೆ ಅಭಿವೃದ್ಧಿ, ಕೃಷಿಯೇತರ ಕ್ಷೇತ್ರ, ಕೃಷಿ ಕ್ಷೇತ್ರದಲ್ಲಿ ಅನುಭವ ಉಳ್ಳವರು ಅರ್ಜಿ ಸಲ್ಲಿಸಬಹುದು.
ಉದ್ಯೋಗಾಕಾಂಕ್ಷಿಗಳು ಮೇ 3ರ ಒಳಗೆ ಅರ್ಜಿ ಸಲ್ಲಿಸಬೇಕು. ಖಾಲಿ ಇರುವ ಹುದ್ದೆ, ಸ್ಥಳ ಹಾಗೂ ಅರ್ಜಿ ನಮೂನೆ ಇತ್ಯಾದಿ ವಿವರಗಳನ್ನು ಯುಎನ್​ಡಿಪಿ ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್​ ಕ್ಲಿಕ್ಕಿಸಿದರೆ ವಿವರ ಲಭ್ಯ ಇರುತ್ತದೆ.
https://www.in.undp.org/content/india/en/home/jobs.html
ಇಲ್ಲಿ ಸೋಂಕಿತರಿಗೆ ನೀಡುತ್ತಿದ್ದಾರೆ ಅವಧಿ ಮುಗಿದ ಔಷಧ!; ಶಾಸಕರಿಂದ ತೀವ್ರ ಆಕ್ಷೇಪ

ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಗಂಡ; ಎನ್​ಜಿಒನಿಂದಲೂ ಉಪಟಳ ಆರೋಪ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − three =
Remember me
